Advertisement
ಸ್ಥಳೀಯ ನಾರಾಯಣ ಬಕರೆ ಮನೆಯ ಸದಸ್ಯರು ಆರು ದಶಕಗಳಿಂದ ಕಾಮಣ್ಣನ ವಿಗ್ರಹಗಳನ್ನು ಮಾಡುತ್ತ ಬಂದಿದ್ದಾರೆ. ಬಕರೆ ಕುಟುಂಬದವರು ತಯಾರಿಸಿದ ಕಾಮಣ್ಣಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಯುದ್ದ ಭೂಮಿಯಲ್ಲಿನ ಕಾಮಣ್ಣ, ಜೋಕಾಲಿ ಆಡುತ್ತಿರುವ ಕಾಮಣ್ಣ, ಮೊಸಳೆ ಮೇಲೆ ಕುಳಿತ ಕಾಮಣ್ಣ, ದ್ವಿಚಕ್ರ ವಾಹನದ ಮೇಲೆ ಕುಳಿತ ಕಾಮಣ್ಣ, ಹುಂಜದ ಮೇಲೆ ಕುಳಿತ ಕಾಮಣ್ಣ ಮತ್ತು ಅದೇ ರೀತಿಯಾಗಿ ವಿವಿಧ ಪ್ರಾಣಿಗಳ ಮೇಲೆ ಕುಳಿತ ಕಾಮಣ್ಣನ ವಿಗ್ರಹಗಳು ಆಕರ್ಷಣೀಯವಾಗಿವೆ. ಆಧುನಿಕತೆಗೆ ತಕ್ಕಂತೆ ಜನರನ್ನು ವಿವಿಧ ಆಕಾರಗಳಲ್ಲಿ ಕಾಮಣ್ಣನ ಮೂರ್ತಿಗಳು ಆಕರ್ಷಿಸುತ್ತಿವೆ.
Related Articles
Advertisement
ಆರೇಳು ವರ್ಷದ ಹಿಂದೆ ಒಂದೇ ನಮೂನೆಯ ವಿಗ್ರಹಗಳನ್ನು ಮಾಡುತ್ತಿದ್ದೇವು. ಆದರೆ ಇಂದಿನ ಯುವಕರು ವಿಶಿಷ್ಠವಾದ ಕಾಮಣ್ಣನ ವಿಗ್ರಹಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಆಧುನಿಕ ಯುವಕ ಬೇಡಿಕೆಯಂತೆ ವೈವಿಧ್ಯಮಯವಾದ ಕಾಮಣ್ಣನ ವಿಗ್ರಹಗಳನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಬಕರೆ ಕುಟುಂಬದವರು.
ಇಂತಹ ಮೂರ್ತಿ ಮಾಡುವ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಬಕರೆ ಕುಟುಂಬ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಹಾಗೂ ವಿವಿಧ ಮೂರ್ತಿಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ