Advertisement

ಶತಮಾನಗಳ ಇತಿಹಾಸದ ರತಿ-ಮನ್ಮಥ ಪ್ರತಿಷ್ಠಾಪನೆ

04:24 PM Mar 29, 2021 | Team Udayavani |

ನರಗುಂದ: ಹೋಳಿ ಹುಣ್ಣಿಮೆ ಬಂತೆಂದರೆ ಸಾಕು ಚಿಕ್ಕ ಮಕ್ಕಳು, ಯುವಕರು ಹಲಗೆ ಬಾರಿಸುತ್ತ, ಪರಸ್ಪರ ಬಣ್ಣ ಎರಚಾಡುತ್ತ ಸಂಭ್ರಮಿಸುತ್ತಾರೆ. ಇದೀಗ ಕೋವಿಡ್ ಹಬ್ಬದಾಚರಣೆಗೆ ಕಡಿವಾಣ ಹಾಕಿದೆ. ಆದರೂಹಬ್ಬ ಸಾಂಪ್ರದಾಯಿಕವಾಗಿ ಆಚರಿಸಲ್ಪಡುತ್ತದೆ. ಬಂಡಾಯ ನಾಡು ಖ್ಯಾತಿಯ ನರಗುಂದಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮಾಚರಣೆಗೆಶತಮಾನಗಳ ಹಿನ್ನೆಲೆಯ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ.

Advertisement

ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆಗೆ ಪಟ್ಟಣದ ದಂಡಾಪೂರ ಓಣಿಯಲ್ಲಿ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಪಟ್ಟಣದ ಪಂಚ ಬಣ್ಣಗಳ ಸರ್ಕಾರಿ ಕಾಮಣ್ಣನ ಮೂರ್ತಿ ಹಾಗೂ ಸುಂದರ ರತಿ, ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಹೋಳಿ ಹುಣ್ಣಿಮೆಗೆ ಸ್ಫೂರ್ತಿಯಾಗಿ ನಿಂತಿದೆ.

ನರಗುಂದಕ್ಕೆ ಮೂಲ ಊರು ದಂಡಾಪೂರ ಎಂಬುದು ಮತ್ತೂಂದು ವೈಶಿಷ್ಟ್ಯ. ಪಂಚಬಣಗಳಲ್ಲೊಂದಾದ ದಂಡಾಪೂರ ಊರುಉಗಮದ ಸಂದರ್ಭದಲ್ಲೇ ರತಿ-ಮನ್ಮಥರಪ್ರತಿಷ್ಠಾಪನೆ ಮಾಡಲಾಗಿದೆ ಎನ್ನುತ್ತಾರೆ. ದಂಡಾಪೂರ ಓಣಿಯ ಪ್ರಮುಖರು. ಸುಮಾರು 250ರಿಂದ 300 ವರ್ಷಗಳಷ್ಟು ಇತಿಹಾಸದ ದಂಡಾಪೂರ ರತಿ-ಮನ್ಮಥರ ಪ್ರತಿಷ್ಠಾಪನೆ ಕಾರ್ಯ ರವಿವಾರ ನೆರವೇರಿದೆ.

ಅಸಂಖ್ಯಾತ ಭಕ್ತರು ಹರಕೆ ಹೊತ್ತು ಇಷ್ಟಾರ್ಥ ಸಿದ್ಧಿಸಿಕೊಂಡ ಉದಾಹರಣೆ ಹಲವಾರು. ಸಂಜೆ ರತಿ, ಮನ್ಮಥರ ಉಡಿ ತುಂಬುವ ಕಾರ್ಯ ನೆರವೇರಿತು. ಹರಕೆ ಹೊತ್ತ ಮುತ್ತೈದೆಯರು, ಮಹಿಳೆಯರು ಉಡಿ ತುಂಬಿ ಪೂಜಿಸಿದರು.

ಕರಿ ಹರಿಯುವುದು: ಪಟ್ಟಣದ ದಂಡಾಪೂರ ರತಿ-ಮನ್ಮಥರ ಪ್ರತಿಷ್ಠಾಪನೆ ಪ್ರಯುಕ್ತ ಇಲ್ಲಿ ಮೊದಲಬಾರಿಗೆ ಕರಿಹರಿದ ಬಳಿಕವೇ ಉಳಿದ ಪ್ರದೇಶದಲ್ಲಿ ಆರಂಭದ ಹಿನ್ನೆಲೆಯಿದೆ.

Advertisement

ಕೋವಿಡ್ ತಡೆ: ತಾಲೂಕಿನಾದ್ಯಂತ ಹೋಳಿ ಹುಣ್ಣಮೆ ಪ್ರಯುಕ್ತ ಸೋಮವಾರ ಕಾಮ ದಹನ ನೆರವೇರಲಿದೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕಿನಲ್ಲಿ ಕಾಮದಹನ ಮತ್ತು ಬಣ್ಣದೋಕುಳಿ ನಿಷೇಧಿಸಲಾಗಿದೆ. ಹೀಗಾಗಿ, ಈ ವರ್ಷದ ಹೋಳಿ ಹುಣ್ಣಿಮೆ ರಂಗು ಕಳೆದುಕೊಳ್ಳುವ ಸಾಧ್ಯತೆಯಿದೆ.

300 ವರ್ಷಗಳ ಇತಿಹಾಸ :

1857ರಲ್ಲಿ ನರಗುಂದ ಕಿಲ್ಲೆ ಸಂಸ್ಥಾನ ಅರಸ ಬಾಬಾಸಾಹೇಬ ಭಾವೆ ಆಡಳಿತ ಅವ ಧಿಯಿತ್ತು.ಬಾಬಾಸಾಹೇಬರ ಪೂರ್ವಜರ ಅವಧಿಯಲ್ಲೇ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸುತ್ತಾ ಬರಲಾಗಿದೆ ಎಂಬುದು ಪಟ್ಟಣದ ಹಿರಿಯರ ಅಭಿಪ್ರಾಯ.

ಇಷ್ಟಾರ್ಥ ಸಿದ್ಧಿ: ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪನೆಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಸಿದೆ.ಮದುವೆ ಆಗದವರು, ಮಕ್ಕಳಾಗದವರುರತಿ-ಮನ್ಮಥರಿಗೆ ಹರಕೆ ಸಲ್ಲಿಸುವುದುವಾಡಿಕೆ. ಕೆಲವರು ರತಿ-ಮನ್ಮಥರಿಗೆ ಬಾಸಿಂಗ ಕೊಡಿಸುತ್ತಾರೆ.ಬಳಿಕ ಹರಕೆ ಹೊತ್ತವರು ದೇಣಿಗೆ ನೀಡಿ ಬಾಸಿಂಗ ಪಡೆಯುವ ಹಿನ್ನೆಲೆ ಇಲ್ಲಿದೆ.

 

– ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next