Advertisement

Holi: ಪಾಕ್‌ ವಿವಿಗಳಲ್ಲಿ ಹೋಳಿ ಆಚರಣೆಗೆ ನಿರ್ಬಂಧ !

08:24 AM Jun 22, 2023 | Pranav MS |

ಇಸ್ಲಾಮಾಬಾದ್‌: ಪಾಕಿಸ್ತಾನದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇನ್ನುಮುಂದೆ ವಿದ್ಯಾರ್ಥಿಗಳು ಹೋಳಿ ಹಬ್ಬವನ್ನು ಆಚರಿಸುವಂತಿಲ್ಲವೆಂದು ಪಾಕಿಸ್ತಾನ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿ) ನಿರ್ಬಂಧ ವಿಧಿಸಿದೆ. ಅಲ್ಲದೇ, ಇದು ಇಸ್ಲಾಮಿಕ್‌ ರಾಷ್ಟ್ರದ ಗುರುತು ಉಳಿಸುವ ಸಲುವಾಗಿ ತೆಗೆದುಕೊಂಡಿರುವ ಕ್ರಮವೆಂದು ಸಮರ್ಥನೆಯನ್ನೂ ನೀಡಿದೆ.

Advertisement

ಇತ್ತೀಚೆಗಷ್ಟೇ ಖ್ವಾಡ್‌-ಇ-ಅಜಮ್‌ ವಿವಿಯಲ್ಲಿ ವಿದ್ಯಾರ್ಥಿಗಳ ಹೋಳಿ ಸಂಭ್ರಮದ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಎಚ್‌ಇಸಿ, ಹೋಳಿ ಸಂಭ್ರಮಾಚರಣೆ ನಿಷೇಧಿಸುವ ಕುರಿತು ಪ್ರಕಟಣೆ ಹೊರಡಿಸಿರುವುದು ಮಹತ್ವ ಪಡೆದುಕೊಂಡಿದೆ. ಪ್ರಕಟಣೆಯಲ್ಲಿ “ಧಾರ್ಮಿಕ, ಸಾಂಸ್ಕೃತಿಕ, ಜನಾಂಗೀಯ ವೈವಿಧ್ಯತೆಗಳನ್ನು ಗೌರವಿಸುವ ಸಹಿಷ್ಣು ಸಮಾಜವನ್ನು ದೇಶ ಹೊಂದಿದೆ. ಅದಕ್ಕೆ ಪೂರಕವಾಗುವಂತೆ ಹಲವು ಆಚರಣೆಗಳನ್ನೂ ಅನುಸರಿಸಲಾಗುತ್ತಿದೆ. ಆದರೆ, ಅವುಗಳು ಮಿತಿ ಮೀರುತ್ತಿದ್ದು, ಹಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಇದರ ಲಾಭ ಪಡೆಯುತ್ತಿವೆ.

ಈ ರೀತಿಯ ಅತಿರೇಕದ ಹೋಳಿ ಆಚರಣೆಗಳು ದೇಶದ ಸಾಮಾಜಿಕ ಸಂಸ್ಕೃತಿಗೆ ವಿರೋಧವಾಗಿವೆ. ಅಲ್ಲದೇ, ಇಂಥ ಅನುಸರಣೆಗಳು ಇಸ್ಲಾಮಿಕ್‌ ರಾಷ್ಟ್ರದ ಸಂಸ್ಕೃತಿಯನ್ನು ನೇಪಥ್ಯಕ್ಕೆ ಸರಿಸುತ್ತವೆಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next