ಮಾನ್ವಿ: ತಾಲೂಕಿನಾದ್ಯಂತ ಮಾ.18ರಿಂದ ರಾತ್ರಿ 12ಗಂಟೆಯೊಳಗಾಗಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾಮದಹನ ನಡೆಸಿ ನಂತರ ಮಾ.19ರಂದು ಹೋಳಿ ಹಬ್ಬದ ನಿಮಿತ್ತ ಓಕುಳಿ ಆಚರಿಸಬೇಕು ಎಂದು ಪಿಐ ಮಹದೇವಪ್ಪ ಪಂಚಮುಖೀ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಯುವಕರು ತಮ್ಮ ಸ್ನೇಹಿತರಿಗೆ ಬಣ್ಣ ಹಾಕುವುದಕ್ಕೆ ವಾಹನಗಳಲ್ಲಿ ವೇಗವಾಗಿ ಹೋಗುವು ದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಬಲವಂ ತವಾಗಿ ಅನ್ಯ ಸಮುದಾ ಯದವರು, ಮಹಿಳೆ ಯರು, ವಿದ್ಯಾರ್ಥಿನಿಯರ ಮೇಲೆ ಬಣ್ಣ ಹಾಕುವುದರಿಂದ ಸಾರ್ವ ಜನಿಕರಿಗೆ ತೊಂದರೆಯಾಗುತ್ತದೆ. ಆಗ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೋಳಿ ಹಬ್ಬದ ಸಂದರ್ಭದಲ್ಲಿ ಕೇವಲ ಪರಿಸರಕ್ಕೆ ಪೂರಕವಾದ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಬೇಕು. ಮಧ್ಯಾಹ್ನ 2 ಗಂಟೆಯೊಳಗೆ ಓಕುಳಿ ಆಡುವುದನ್ನು ನಿಲ್ಲಿಸಬೇಕು. ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಗಸ್ತು ಸೇರಿದಂತೆ ಸಿಬ್ಬಂದಿ ನಿಯೋಜಿಸಲಾಗುವುದು. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಸಿರವಾರ ಸಿಪಿಐ ಗುರುರಾಜ ಕಟ್ಟಿಮನಿ, ಪಿಎಸೈ ವೆಂಕಟೇಶ ನಾಯಕ, ರಾಮಪ್ಪ ಮಾತನಾಡಿದರು. ಈ ವೇಳೆ ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ, ರೇವಣ ಸಿದ್ದಯ್ಯಸ್ವಾಮಿ, ಗಿರಿನಾಯಕ, ಮೋಹನ್ ದಾನಿ, ಹಿರಿಯ ವಕೀಲರಾದ ಎ.ಬಿ.ಉಪ್ಪಳ ಮಠ, ಗುಮ್ಮ ಬಸವರಾಜ, ಮುಖಂ ಡರಾದ ಶ್ರೀಕಾಂತ ಗೂಳಿ, ನರಸಪ್ಪ ಜೂಕೂರು, ವಾಜೀದ್ ಸಾಬ್, ಹುಸೇನಪ್ಪ ಜಗ್ಲಿ, ಮೌಲಾನ ಜೀಶನ್ ಖಾದ್ರಿ, ಸಾಜೀದ್ ಖಾದ್ರಿ, ಅಬ್ದುಲ್ ಕರೀಮ್ ಖಾನ್, ಸಂತೋಷ ಹೂಗಾರ ಸೇರಿದಂತೆ ಇತರರಿದ್ದರು.