Advertisement

Holehonnuru:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

11:22 PM Nov 22, 2023 | Vishnudas Patil |

ಹೊಳೆಹೊನ್ನೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆಗಿರುವ ಘಟನೆ ಸಮೀಪದ ಕೂಡ್ಲಿ ಗ್ರಾಮದಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

Advertisement

ಗ್ರಾಮದ ಸುಮಾರು 76 ವರ್ಷ ವಯಸ್ಸಿನ ವ್ಯಕ್ತಿಯೋರ್ವ ಸುಮಾರು 10 ವರ್ಷ ವಯಸ್ಸಿನ 3 ನೇ ತರಗತಿ ಬಾಲಕಿಯನ್ನು ಚಾಕಲೇಟ್ ಕೊಡಿಸುವುದಾಗಿ ಹೇಳಿ ಹೊಳೆಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಮನೆಗೆ ಬಂದ ಬಾಲಕಿ ತನಗೆ ನೋವು ಆಗುತ್ತಿದೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆಹಾರದಲ್ಲಿ ವ್ಯತ್ಯಾಸ ಆಗಿದೆ ಎಂದು ಮನೆ ಮದ್ದು ಮಾಡಿದ್ದಾರೆ. ಬಳಿಕ ರಕ್ತಸ್ರಾವದಿಂದ ನೋವು ಹೆಚ್ಚಾಗಿದ್ದರಿಂದ ಬಾಲಕಿಯನ್ನು ವಿಚಾರ ಮಾಡಿದಾಗ ನಡೆದ ಘಟನೆ ಬಗ್ಗೆ ತಿಳಿಸಿರುತ್ತಾಳೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next