Advertisement

ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ನೀಡದಂತೆ ಮನವಿ

09:40 AM Feb 02, 2019 | Team Udayavani |

ಹೊಳೆಆಲೂರ: ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಹೊಳೆಆಲೂರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಬೇಕಾದ ಬ್ಯಾರೇಜ್‌ ಕಂ. ಬ್ರೀಜ್‌ಗೆ ಕೆಲ ಪ್ರಭಾವಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಆತಂಕ ಎದುರಾಗಲಿದೆ. ಕಾರಣ ಸಂಸದರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮೊತಿಲಾಲ ರಾವಳ ಹೇಳಿದರು.

Advertisement

ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಜರುಗಿದ ಹೊಳೆಆಲೂರ ಹಾಗೂ ಗದಗ ವಾಣಿಜ್ಯೋದ್ಯಮ ಸಂಸ್ಥೆ ಜಂಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಬ್ರಾಡ್‌ಗೇಜ್‌ ಆರಂಭವಾಗಿ ಕಳೆದ ಐದು ವರ್ಷಗಳಿಂದ ಗದಗ-ಸೊಲ್ಲಾಪುರ ಭಾಗವನ್ನು ನೈರುತ್ಯ ರೈಲ್ವೆ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದರಿಂದ ಗದಗ, ಹೊಳೆಆಲೂರ, ಬದಾಮಿ, ಬಾಗಲಕೋಟೆ, ವಿಜಾಪುರ ವಾಣಿಜ್ಯ ಉದ್ಯಮಗಳು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಶಿವಣ್ಣ ಯಾವಗಲ್ಲ ಮಾತನಾಡಿ, ಮುಂಬಯಿ, ಶಿರಡಿ, ವಾರಣಾಸಿ ಗಾಡಿಗಳು ಈ ಭಾಗದಲ್ಲಿ ಸಂಚರಿಸುತ್ತಿದ್ದರೂ ಕೇವಲ ಒಂದು ನಿಮಿಷ ಸಹ ಪ್ರಮುಖ ಪಟ್ಟಣಗಳಲ್ಲಿ ನಿಲುಗಡೆ ಆಗುತ್ತಿಲ್ಲ. ಇದರ ಬಗೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೇ ಮಾಡದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಪ್ರತಿವರ್ಷದ ಪದ್ಧತಿಯಂತೆ ಮುಂಬರುವ ಮಾರ್ಚ್‌ ತಿಂಗಳಿನಲ್ಲಿ ಕಿರುಕುಳ ವ್ಯಾಪಾರಸ್ಥರಿಗೆ ಪರವಾನಗಿ ಹಾಗೂ ಕಾಟಾ, ಕಲ್ಲು ನವೀಕರಣ ಕಾಲಕ್ಕೆ ಬರುವ ಕೆಲ ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುವುದು ಎಲ್ಲರಿಗೂ ಬೇಸರದ ಸಂಗತಿಯಾಗಿದೆ. ಅದನ್ನು ಇಲಾಖೆ ಹಿರಿಯ ಅಧಿಕಾರಿಗಳು ಸರಿಪಡಿಸಬೇಕು ಎಂದು ಹೇಳಿದರು.

ಗದಗ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ, ಕಾರ್ಯದರ್ಶಿ ಮದುಸೂಧನ ಪುಣೇಕರ, ಪ್ರೇಮನಾಥ ಬಣ್ಣದ, ಅಶೋಕ ನಿಲೂಗಲ್ಲ, ಶರಣಬಸಪ್ಪ ಕುರಡಗಿ, ಶರಣಬಸಪ್ಪ ಗುಡಿಮನಿ, ಹೊಳೆಆಲೂರ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಸ್‌.ಜಿ. ತೋಟದ, ಶಿವಣ್ಣ ಯಾವಗಲ್ಲ, ಕಾರ್ಯದರ್ಶಿ ಮಾರುತಿ ಮಂಡಸೂಪ್ಪಿ, ನಾಗನಗೌಡ್ರ ಪಾಟೀಲ, ಮಹೇಂದ್ರಗೌಡ ಪಾಟೀಲ, ಸಂಗಪ್ಪ ಅಂಗಡಿ, ಯಚ್ಚರಪ್ಪ ಪತ್ತಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next