Advertisement

ಹೊಳಲ್ಕೆರೆ: ಗಾಳಿ-ಮಳೆಗೆ ಅಪಾರ ಹಾನಿ

05:43 PM May 06, 2020 | Naveen |

ಹೊಳಲ್ಕೆರೆ: ತಾಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವೆ‌ಡೆ ಬೆಳೆ ಹಾನಿಯಾಗಿದೆ. ಕೆಲವೆಡೆ ದೇವಸ್ಥಾನ, ಅಂಗಡಿ ಮುಂಗಟ್ಟು, ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ.

Advertisement

ಹುಳೆಮಳಲಿ ನ್ಯಾಯಬೆಲೆ ಅಂಗಡಿಯ ಮೇಲ್ಛಾವಣಿಯ ತಗಡು ಹಾರಿಹೋಗಿದೆ. ಹೊಸಹಳ್ಳಿ, ಆಗ್ರಹಾರ, ಹುಳೆಮಳಲಿಗೆ ಗ್ರಾಮಗಳ 600 ಪಡಿತರ ಚೀಟಿಗೆ ವಿತರಣೆ ಮಾಡಬೇಕಾಗಿದ್ದ ಅಕ್ಕಿ, ಗೋಧಿ ಯ 300 ಚೀಲಗಳನ್ನು ಮಳೆಯ ನೀರಿಗೆ ಸಿಗದಂತೆ ರಕ್ಷಣೆ ಮಾಡಲಾಗಿದೆ. ಆದರೂ ಹತ್ತು ಚೀಲ ಅಕ್ಕಿ ನೀರುಪಾಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿತರಿಸುತ್ತಿರುವ ಪಡಿತರವನ್ನು ಸಂರಕ್ಷಣೆ ಮಾಡಿ ಜನರಿಗೆ ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹುಳೆಮಳಲಿ ಸಹಕಾರ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.ನ್ಯಾಯಬೆಲೆ ಅಂಗಡಿ ಮೇಲ್ಛಾವಣಿಗೆ ತಗಡು ಹಾಕಲು ಸರ್ಕಾರ ತಕ್ಷಣ ಅನುದಾನ ನೀಡದ ಕಾರಣ ಸಂಘದ ಎಲ್ಲಾ ಸದಸ್ಯರಿಂದ 2 ಲಕ್ಷ ರೂ. ಸಂಗ್ರಹಿಸಿ ದುರಸ್ತಿ ಮಾಡಿಸುವುದಾಗಿ ಸಂಘದ ಸದಸ್ಯ ಮಾರುತೇಶ್‌ ಮಾಹಿತಿ ನೀಡಿದರು.

ರಾಮಘಟ್ಟದ ಮಲ್ಲಿಕಾರ್ಜುನ ಅವರ ಮೂರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬಾಳೆ ಗಿಡಗಳು ಗಾಳಿ ಹೊಡೆತಕ್ಕೆ ಉರುಳಿ ಬಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಚಿಕ್ಕಜಾಜೂರು ಗ್ರಾಮದಲ್ಲಿ ದೇವಸ್ಥಾನ ಹಾಗೂ ಗ್ಯಾರೇಜ್‌ ಮೇಲೆ ಮರಗಳು ಉರುಳಿ ಬಿದ್ದಿವೆ. ಅಪ್ಪರಸನಹಳ್ಳಿಯಲ್ಲಿ ಮಳೆಗೆ ಮನೆ ಮೇಲಿನ ತಗಡು ಹಾರಿಹೋಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುತ್ತದೆ ಎಂದು ತಹಶೀಲ್ದಾರ್‌ ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next