Advertisement

ಹೊಕ್ಕಾಡಿಗೋಳಿ ಸರಕಾರಿ ಶಾಲೆಯೀಗ ಸ್ಮಾರ್ಟ್‌

04:31 AM Feb 01, 2019 | |

ವೇಣೂರು: ಸರಕಾರಿ ಶಾಲೆ ಗಳೆಂದರೆ ಹಳೆಯ ಕಟ್ಟಡ, ಪುರಾತನ ಪೀಠೊಪಕರಣ, ಸಾಂಪ್ರದಾಯಿಕ ಬೋಧನೆ ಅನ್ನುವ ಕಲ್ಪನೆ ಇದ್ದರೆ ತಪ್ಪು ಎನ್ನುತ್ತಿದೆ ಹೊಕ್ಕಾಡಿಗೋಳಿಯ ಸರಕಾರಿ ಹಿ.ಪ್ರಾ. ಶಾಲೆ. ಇಂಗ್ಲಿಷ್‌ ಕ್ಲಾಸ್‌ರೂಮ್‌, ಸ್ಮಾರ್ಟ್‌ಕ್ಲಾಸ್‌ ಅಳವಡಿಸಿಕೊಂಡು ಈ ಶಾಲೆಯೀಗ ಸ್ಮಾರ್ಟ್‌ ಆಗಿದೆ.

Advertisement

ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುಗಡೆಯತ್ತ ಸಾಗು ವುದಕ್ಕೆ ಪ್ರತ್ಯಸ್ತ್ರವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುವ, ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲ ಎನ್ನುವಂಥ ಹೆಜ್ಜೆಯಿದು.

ಹೊಕ್ಕಾಡಿಗೋಳಿ ಶಾಲೆ
ಆರಂಬೋಡಿ ಗ್ರಾಮದ ಹೊಕ್ಕಾಡಿ ಗೋಳಿ ಸ.ಹಿ.ಪ್ರಾ. ಶಾಲೆಯಲ್ಲಿ ಗ್ರಾಮಸ್ಥರ ಸಹಭಾಗಿತ್ವ, ಶಿಕ್ಷಕರ ಶ್ರಮದಿಂದ ಸುಸಜ್ಜಿತವಾಗಿ ಜೇಮ್ಸ್‌ ಇಂಗ್ಲಿಷ್‌ ಕ್ಲಾಸ್‌ ರೂಮ್‌ ಮತ್ತು ಬೆಂಗಳೂರಿನ ಅಚಲ ಭಾರತಿ ಸೇವಾ ಸಂಸ್ಥೆ ಸಹಕಾರದಲ್ಲಿ ಸ್ಮಾರ್ಟ್‌ ಕ್ಲಾಸ್‌ ನಿರ್ಮಿಸಲಾಗಿದೆ.

ಇಂಗ್ಲಿಷ್‌ ಕ್ಲಾಸ್‌ ರೂಮ್‌
ಇಂಗ್ಲಿಷ್‌ ತರಗತಿಯಲ್ಲಿ ಇಂಗ್ಲಿಷ್‌ ವರ್ಣಮಾಲೆ, ಫೊನೆಟಿಕ್ಸ್‌, ದಿನ ಬಳಕೆಯ ಸೂಚನೆಗಳು, ರೈಮ್ಸ್‌, ಕಥೆಗಳು, ಸ್ಟೋರಿ ಟೆಲ್ಲಿಂಗ್‌, ಗ್ರಾಮರ್‌ಗೆ ಸಂಬಂಧಿಸಿದ ಮಾಹಿತಿಗಳು ದೊರೆಯುತ್ತವೆ. ಓದಲು ಸರಳ ಇಂಗ್ಲಿಷಿನ ಕಥೆ ಪುಸ್ತಕಗಳು, ಶಿಕ್ಷಕರಿಗೆ ಅಗತ್ಯವಿರುವ ಸಂಪನ್ಮೂಲ, ಸಾಹಿತ್ಯಗಳನ್ನು ಹೊಂದಿಸಿ ಒಂದೇ ಕಡೆ ದೊರಕುವಂತೆ ಜೋಡಿಸಿಡ ಲಾಗಿದೆ. ಫ್ಲ್ಯಾಶ್‌ ಕಾರ್ಡ್‌, ಚಿತ್ರಗಳು, ಚಿತ್ರ ಸಹಿತ ಪದಗಳು, ಆ್ಯನಿಮೇಟೆಡ್‌ ಇಂಗ್ಲಿಷ್‌ ಪಾಠಗಳು ಮಕ್ಕಳ ಆಸಕ್ತಿಹೆಚ್ಚಿಸುವಂತಿವೆ.

ಉದ್ಘಾಟನೆ
ಶಾಲೆಯಲ್ಲಿ ನಿರ್ಮಿಸಲಾದ ಸ್ಮಾರ್ಟ್‌ ಕ್ಲಾಸನ್ನು ಹೊಸಂಗಡಿ ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ ಉದ್ಘಾಟಿಸಿ ದರು. ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್‌ ಎಚ್. ಹುಲಿಮೇರು, ಬಿ.ಐ.ಆರ್‌.ಟಿ. ಜಗದೀಶ್‌, ಗ್ರಾಮ ಶಿಕ್ಷಣ ಸಮಿತಿಯ ಅಧ್ಯಕ್ಷ ಹರೀಶ್‌ ಕಲ್ಲಬೆಟ್ಟು, ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸದಾಶಿವ ಹುಲಿಮೇರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಹೆತ್ತವರು ಭಾಗವಹಿಸಿದ್ದರು.

Advertisement

ಆ್ಯನಿಮೇಟೆಡ್‌ ಪಾಠ 
ಬೆಂಗಳೂರಿನ ಅಚಲ ಭಾರತಿ ಟ್ರಸ್ಟ್‌ನವರು 5, 6 ,7 ನೇ ತರಗತಿಗಳ ಗಣಿತ, ವಿಜ್ಞಾನ, ಇಂಗ್ಲಿಷ್‌ ವಿಷಯಗಳಿಗೆ ಸಂಬಂಧಿಸಿದ ಆ್ಯನಿಮೇಟೆಡ್‌ ಪಾಠಗಳನ್ನು ಹೊಂದಿರುವ ಒಂದು ಕಂಪ್ಯೂಟರನ್ನು ಶಾಲೆಗೆ ನೀಡಿದ್ದಾರೆ. ಮೂಡುಬಿದಿರೆಯ ರೋಟರಿ ಕ್ಲಬ್‌ ಪ್ರೊಜೆಕ್ಟರ್‌ ನೀಡಿದೆ. ಹಳೆ ವಿದ್ಯಾರ್ಥಿ ಸಂಘ ಮತ್ತು ದಾನಿಗಳ ನೆರವಿನಿಂದ ಪ್ರೊಜೆಕ್ಟರ್‌ ಸ್ಕ್ರೀನ್‌ ಮತ್ತು ಸ್ಟಡಿ ಚೇರ್‌ಗಳನ್ನು ಒದಗಿಸಿಕೊಳ್ಳುವ ಮೂಲಕ ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಅನುಕೂಲಕರವಾಗುವಂತಹ ವ್ಯವಸ್ಥೆಯನ್ನು ರೂಪಿಸಿದ್ದಾರೆ.

ಸಹಕಾರಿ
ಸ್ಮಾಟ್ ಕ್ಲಾಸ್‌ನಿಂದ ಬೋಧನೆ ಮಕ್ಕಳಿಗೆ ಆಸಕ್ತಿದಾಯಕ ವಾಗುತ್ತದೆ. ಸಾಮಾನ್ಯ ತರಗತಿಯ ಪಾಠ ಈ ಕಾಲಮಾನದ ಮಕ್ಕಳಿಗೆ ಬೋರ್‌ ಆಗಬಹುದು. ಶಾಲೆ ಯಲ್ಲಿ ಈಗ ಸ್ಮಾರ್ಟ್‌ ಕ್ಲಾಸ್‌ ಪಾಠ ಆರಂಭವಾಗಿದ್ದು, ಪ್ರಯೋಜನ ಗಳು ಅನುಭವಕ್ಕೆ ಬರುತ್ತಿವೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬಹಳಷ್ಟು ಸಹಕಾರಿ ಆಗಿದೆ.
– ರಾಜೇಶ್‌, ಮುಖ್ಯ ಶಿಕ್ಷಕರು

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next