Advertisement

ಬಿದ್ದಾಟಂಡ ಕಪ್‌ ಹಾಕಿ: ಗೋಲಿನ ಸುರಿಮಳೆಗೈದ ಅಂಜಪರವಂಡ

10:26 AM Apr 22, 2017 | Karthik A |

ಮಡಿಕೇರಿ: ಬಿದ್ದಾಟಂಡ ಕಪ್‌ ಹಾಕಿಯ ಶುಕ್ರವಾರದ ಪಂದ್ಯದಲ್ಲಿ ಬಲಿಷ್ಠ ಅಂಜಪರವಂಡ ತಂಡ ಗೋಲಿನ ಸುರಿಮಳೆಗೈಯುವ ಮೂಲಕ ಎದುರಾಳಿ ತಂಡವನ್ನು ಮಣಿಸಿ ಮುಂದಿನ ಸುತ್ತನ್ನು ನಿರಾಯಾಸವಾಗಿ ಪ್ರವೇಶಿಸಿತು. ಬಿದ್ದಾಟಂಡ ಕಪ್‌ ಹಾಕಿ ಪಂದ್ಯಾವಳಿಯ ಹಾಟ್‌ ಫೇವರಿಟ್‌ ತಂಡಗಳಲ್ಲಿ ಒಂದಾಗಿರುವ ಅಂಜ ಪರವಂಡ ತಂಡ 5 – 0 ಗೋಲುಗಳ ಅಂತರದಿಂದ ಎದುರಾಳಿ ಮಾಳೆಯಂಡ ತಂಡವನ್ನು ನಿರಾಯಾಸವಾಗಿ ಮಣಿಸಿತು. ಅಂಜಪರವಂಡ ತಂಡದ ರೋಷನ್‌ ಎರಡು, ಕಾರ್ಯಪ್ಪ, ವಿನಯ್‌ ಮತ್ತು ಚಿರಾಗ್‌ ಚೆಂಗಪ್ಪ ಅವರು ತಲಾ ಒಂದು ಗೋಲು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

ಇನ್ನೊಂದು ಪಂದ್ಯದಲ್ಲಿ ಪಾಂಡಂಡ ತಂಡ 3-1 ಗೋಲುಗಳ ಅಂತರದಿಂದ ನಾಟೋಳಂಡವನ್ನು, ಮಂಡೀರ 2-0 ಯಿಂದ ಪೆಮ್ಮುಡಿಯಂಡ ವಿರುದ್ಧ, ಬೊಳಿಯಾಡಿರ 2-1 ಅಂತರದಿಂದ ಮನೆಯಪಂಡವನ್ನು, ಕಂಬೆಯಂಡ 2-1ರಿಂದ ಅಳಮೇಂಗಡವನ್ನು, ಅಮ್ಮಾಟಂಡ 4-1 ಗೋಲಿನಿಂದ ನೆಲ್ಲೀರ ವಿರುದ್ಧ ಗೆಲುವು ಸಾಧಿಸಿದವು. ಚೇನಂಡ ತಂಡ 4-0 ಗೋಲುಗಳ ಅಂತರದಿಂದ ಚಟ್ಟಂಗಡವನ್ನು, ಇಟ್ಟಿàರ ತಂಡ 6-1 ಗೋಲುಗಳ ಭಾರೀ ಅಂತರದಿಂದ ಪಳಂಗಿಯಂಡ ತಂಡವನ್ನು ಸೋಲಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next