Advertisement

ಹಾಕಿ ಟೆಸ್ಟ್‌: ನ್ಯೂಜಿಲ್ಯಾಂಡ್‌ ವಿರುದ್ಧ  ಭಾರತಕ್ಕೆ 4-2 ಗೆಲುವು

07:00 AM Jul 20, 2018 | Team Udayavani |

ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಗುರುವಾರ ಬೆಂಗ ಳೂರಿನಲ್ಲಿ ನಡೆದ ಮೊದಲ ಹಾಕಿ ಟೆಸ್ಟ್‌ ಪಂದ್ಯದಲ್ಲಿ ಭಾರತ 4-2 ಗೋಲುಗಳ ಜಯ ಸಾಧಿಸಿದೆ.

Advertisement

ರೂಪಿಂದರ್‌ ಸಿಂಗ್‌ ಪಂದ್ಯದ 2ನೇ ನಿಮಿಷದಲ್ಲೇ ಲಭಿಸಿದ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಬಳಿಕ 34ನೇ ನಿಮಿಷದಲ್ಲಿ ಅವರು ಇನ್ನೊಂದು ಗೋಲು ಬಾರಿಸಿದರು. 

7ನೇ ನಿಮಿಷದಲ್ಲೇ ನ್ಯೂಜಿ ಲ್ಯಾಂಡಿಗೆ ಸಮಬಲದ ಅವಕಾಶ ಇತ್ತಾದರೂ ಭಾರತದ ಗೋಲ್‌ ಕೀಪರ್‌ ಕೃಷ್ಣ ಪಾಠಕ್‌ ಪ್ರಯತ್ನದಿಂದ ಇದು ಸಾಧ್ಯವಾಗಲಿಲ್ಲ. ಭಾರತದ ಉಳಿದೆರಡು ಗೋಲುಗಳು ಮನ್‌ದೀಪ್‌ ಸಿಂಗ್‌ (15ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ (38ನೇ ನಿಮಿಷ) ಅವರಿಂದ ದಾಖಲಾದವು.

ನ್ಯೂಜಿಲ್ಯಾಂಡ್‌ ಪರ ದಾಖಲಾದ ಎರಡೂ ಗೋಲುಗಳನ್ನು ಸ್ಟೀಫ‌ನ್‌ ಜೆನ್ನೆಸ್‌ 26ನೇ ಹಾಗೂ 55ನೇ ನಿಮಿಷದಲ್ಲಿ ಬಾರಿಸಿದರು.3 ಪಂದ್ಯಗಳ ಸರಣಿಯ 2ನೇ ಟೆಸ್ಟ್‌ ಶನಿವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next