Advertisement
ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ, ಸುಮಿತ್, ಶಮ್ಶೆàರ್ ಶಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಬೀರೇಂದ್ರ ಲಾಕ್ರಾ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ ಅವರಿಗೆ ಇದು ಮೊದಲ ಒಲಿಂಪಿಕ್ಸ್ ಕೂಟವಾಗಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸ್ಟ್ರೈಕರ್‌ಗಳಾದ ಆಕಾಶ್‌ದೀಪ್ ಸಿಂಗ್ ಮತ್ತು ರಮಣ್‌ದೀಪ್ ಸಿಂಗ್ ಅವರನ್ನು ಕೈಬಿಡಲಾಗಿದೆ. ಗಾಯಾಳಾಗಿ ರಿಯೋ ಕೂಟವನ್ನು ತಪ್ಪಿಸಿಕೊಂಡಿದ್ದ ಲಾಕ್ರಾ ಈ ಬಾರಿ ಅವಕಾಶ ಪಡೆದಿದ್ದಾರೆ.
ತಂಡದಲ್ಲಿ ಕೇವಲ ಓರ್ವ ಗೋಲ್‌ಕೀಪರ್ ಇದ್ದಾರೆ. ಅನುಭವಿ ಪಿ.ಆರ್. ಶ್ರೀಜೇಶ್ ಈ ಜವಾಬ್ದಾರಿ ವಹಿಸಲಿದ್ದಾರೆ. ಮತ್ತೋರ್ವ ಕೀಪರ್ ಕೃಷ್ಣ ಬಹಾದೂರ್ ಪಾಠಕ್ ಅವರನ್ನು ಕಡೆಗಣಿಸಲಾಗಿದೆ. ಮನ್‌ಪ್ರೀತ್ ಸಿಂಗ್ ತಂಡದ ನಾಯಕರಾದರೂ ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್ ಆರ್ಜೆಂಟೀನಾ, ನಂ.1 ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಸ್ಪೇನ್ ಮತ್ತು ಆತಿಥೇಯ ಜಪಾನ್ ಈ ವಿಭಾಗದ ಉಳಿದ ತಂಡಗಳು. ಭಾರತ ತಂಡ
ಗೋಲ್‌ಕೀಪರ್: ಪಿ.ಆರ್. ಶ್ರೀಜೇಶ್.
ಡಿಫೆಂಡರ್: ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ.
ಮಿಡ್‌ಫಿಲ್ಡರ್: ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ, ಸುಮಿತ್.
ಫಾರ್ವರ್ಡ್ಸ್: ಶಮ್ಶೆàರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್.
Related Articles
ವನಿತಾ ಹಾಕಿ ತಂಡವನ್ನು ರಾಣಿ ರಾಮ್‌ಪಾಲ್ ಮುನ್ನಡೆಸಲಿದ್ದಾರೆ. ಇದರಲ್ಲಿ ಎಂಟು ಮಂದಿ ಮೊದಲ ಒಲಿಂಪಿಕ್ಸ್ ಅವಕಾಶ ಪಡೆದಿದ್ದಾರೆ. ಇವರೆಂದರೆ ಗುರ್ಜಿತ್ ಕೌರ್, ಉದಿತಾ, ನಿಶಾ, ನೇಹಾ, ನವನೀತ್ ಕೌರ್, ಶರ್ಮಿಳಾ ದೇವಿ, ಲಾಲ್ರೆಮಿÕಯಾಮಿ ಮತ್ತು ಸಲಿಮಾ ಟೇಟೆ. ಇವರಲ್ಲಿ ಲಾಲ್ರೆಮಿಯಾಮಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಿಜೋರಂನ ಮೊದಲ ಆಟಗಾರ್ತಿಯಾಗಿದ್ದಾರೆ. ಸಲಿಮಾ ಟೇಟೆ 2018ರ ಯುತ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು. ಇದರಲ್ಲಿ ಭಾರತಕ್ಕೆ ಬೆಳ್ಳಿ ಪದಕ ಒಲಿದಿತ್ತು.
Advertisement
ಭಾರತ ತಂಡ:
ಗೋಲ್‌ಕೀಪರ್: ಸವಿತಾಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್, ಗುರ್ಜೀತ್ ಕೌರ್, ಉದಿತಾ.
ಮಿಡ್‌ಫಿಲ್ಡರ್: ನಿಶಾ, ನೇಹಾ, ಸುಶೀಲಾ ಚಾನು, ಮೋನಿಕಾ, ನೌಜೋತ್ ಕೌರ್, ಸಲೀಮ ಟೇಟೆ.
ಫಾರ್ವರ್ಡ್ಸ್: ರಾಣಿ ರಾಮ್‌ಪಾಲ್ (ನಾಯಕಿ), ನವನೀತ್ ಕೌರ್, ಲಾಲ್ರೆಮಿಯಾಮಿ, ವಂದನಾ ಕಟಾರಿಯಾ, ಶರ್ಮಿಳಾದೇವಿ.