Advertisement

ಹಾಕಿ: ಶೂಟೌಟ್‌ನಲ್ಲಿ ಭಾರತ ಜಯಭೇರಿ

10:16 AM Feb 23, 2020 | Sriram |

ಭುವನೇಶ್ವರ: “ಟು-ಲೆಗ್‌’ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯ ದ್ವಿತೀಯ ಪಂದ್ಯದಲ್ಲಿ ಭಾರತ ಪ್ರಬಲ ಆಸ್ಟ್ರೇಲಿಯವನ್ನು ಶೂಟೌಟ್‌ನಲ್ಲಿ 3-1 ಗೋಲುಗಳಿಂದ ಮಣಿಸಿ ಸೇಡು ತೀರಿಸಿಕೊಂಡಿದೆ. ಮೊದಲ ಪಂದ್ಯವನ್ನು ಆಸೀಸ್‌ 4-3ರಿಂದ ಗೆದ್ದಿತ್ತು.

Advertisement

ನಿಗದಿತ ಸಮಯದಲ್ಲಿ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದವು. ಭಾರತದ ಪರ ರೂಪಿಂದರ್‌ ಪಾಲ್‌ ಸಿಂಗ್‌ (25ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ (27ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಆಸ್ಟ್ರೇಲಿಯದ ಗೋಲುಗಳು ಟ್ರೆಂಟ್‌ ಮಿಲ್ಟನ್‌ (23ನೇ ನಿಮಿಷ) ಹಾಗೂ ನಾಯಕ ಅರಾನ್‌ ಜಲೇವ್‌ಸ್ಕಿ (46ನೇ ನಿಮಿಷ) ಅವರಿಂದ ಸಿಡಿದವು. ಶೂಟೌಟ್‌ನಲ್ಲಿ ಹರ್ಮನ್‌ಪ್ರೀತ್‌, ವಿವೇಕ್‌ ಸಾಗರ್‌ ಪ್ರಸಾದ್‌ ಮತ್ತು ಲಲಿತ್‌ ಉಪಾಧ್ಯಾಯ ಭಾರತಕ್ಕೆ ಮುನ್ನಡೆ ತಂದಿತ್ತರು. ಆಸೀಸ್‌ ದಾಳಿಯನ್ನು ಗೋಲ್‌ಕೀಪರ್‌ ಶ್ರೀಜೇಶ್‌ ಯಶಸ್ವಿಯಾಗಿ ತಡೆದರು.

ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ 6 ಪಂದ್ಯಗಳಿಂದ 10 ಅಂಕ ಸಂಪಾದಿಸಿವೆ. ಆದರೆ ಗೋಲು ಅಂತರದಲ್ಲಿ ಆಸ್ಟ್ರೇಲಿಯ ಭಾರತವನ್ನು ಮೀರಿಸಿ 3ನೇ ಸ್ಥಾನ ಅಲಂಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next