Advertisement

ಹಾಕಿ: ಭಾರತಕ್ಕೆ ಸತತ 4ನೇ ಗೆಲುವು

03:42 PM Aug 27, 2018 | Team Udayavani |

ಜಕಾರ್ತಾ: ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ರವಿವಾರ ನಡೆದ “ಎ’ ವಿಭಾಗದ 4ನೇ ಪಂದ್ಯದಲ್ಲಿ 5-3 ಗೋಲುಗಳಿಂದ ಕೊರಿಯಾವನ್ನು ಮಣಿಸಿದೆ.

Advertisement

ಭಾರತದ ಪರ ಲಲಿತ್‌ ಉಪಾಧ್ಯಾಯ (31), ಚಿಂಗ್ಲೆನ್ಸಾನ ಸಿಂಗ್‌ (35), ಮನ್‌ಪ್ರೀತ್‌ ಸಿಂಗ್‌ (40), ರೂಪಿಂದರ್‌ ಪಾಲ್‌ ಸಿಂಗ್‌ (42) ಹಾಗೂ ಆಕಾಶ್‌ದೀಪ್‌ ಸಿಂಗ್‌ (50ನೇ ನಿಮಿಷ) ಗೋಲು ಹೊಡೆದರು. ಹಿಂದಿನ ಮೂರೂ ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಭಾರತವಿಲ್ಲಿ ಕೊರಿಯಾಕ್ಕೆ 3 ಗೋಲುಗಳ ಅವಕಾಶವಿತ್ತಿತು.

ಈಗಾಗಲೇ ಇಂಡೋನೇಶ್ಯ, ಹಾಂಕಾಂಗ್‌ ಮತ್ತು ಜಪಾನ್‌ಗೆ ಸೋಲುಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ಶ್ರೀಜೇಶ್‌ ಪಡೆ, ಕೊನೆಯ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next