Advertisement

Hockey: ಭಾರತ 15-1 ಜಯಭೇರಿ

10:57 PM Aug 29, 2023 | Team Udayavani |

ಸಲಾಲ: ಭಾರತದ ವನಿತಾ ತಂಡ ಏಷ್ಯನ್‌ ಹಾಕಿ ಫೈವ್ಸ್‌ ವಿಶ್ವಕಪ್‌ ಫೈನಲ್‌ ಅರ್ಹತೆ ಸಂಪಾದಿಸಿದ ಬೆನ್ನಲ್ಲೇ ಪುರುಷರ ಆರ್ಭಟ ಮೊದಲ್ಗೊಂಡಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಭಾರತ 15-1 ಗೋಲುಗಳಿಂದ ಬಾಂಗ್ಲಾದೇಶವನ್ನು ಬಗ್ಗುಬಡಿದಿದೆ.

Advertisement

ಭಾರತದ ಗೋಲು ಸುರಿಮಳೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಮಣಿಂದರ್‌ ಸಿಂಗ್‌ (4), ರಾಹೀಲ್‌ ಮೊಹಮ್ಮದ್‌ (3), ಗುಜೋತ್‌ ಸಿಂಗ್‌ (2), ಸುಖೀಂದರ್‌ ಸಿಂಗ್‌ (2) ಮತ್ತು ಪವನ್‌ ರಾಜ್‌ಭಾರ್‌ (2). ಮನ್‌ದೀಪ್‌ ಮೋರ್‌ ಹಾಗೂ ದೀಪ್ಸನ್‌ ಟಿರ್ಕಿ ಒಂದೊಂದು ಗೋಲು ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next