Advertisement

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

02:10 AM May 05, 2024 | Team Udayavani |

ಹೊಸದಿಲ್ಲಿ: ಖ್ಯಾತ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್ ಜತೆ ನಂಟು ಹೊಂದಿ ಅದರ ಚಟುವಟಿಕೆಗಳಲ್ಲಿ ಕ್ರಿಯಾಶೀಲ ವಾಗಿ ಪಾಲ್ಗೊಳ್ಳುತ್ತಿರುವ ನಟಿಗೆ ಈಗ ರಾಷ್ಟ್ರೀಯ ರಾಯಭಾರಿಯಾಗುವ ಅವಕಾಶ ಒದಗಿ ಬಂದಿದ್ದು ಇದಕ್ಕಾಗಿ ಅವರು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸಮಾನ ಅವಕಾಶ ಕಲ್ಪಿಸುವ ಮಹತ್ವದ ಕಾರ್ಯದಲ್ಲಿ ಭಾಗಿಯಾಗಲು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ನಟಿ ಕರೀನಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next