Advertisement

ಟೋಕಿಯೊ ಒಲಿಂಪಿಕ್ಸ್ ; ಹಾಕಿ ಪಂದ್ಯದಲ್ಲಿ ಭಾರತಕ್ಕೆ 7 ಗೋಲುಗಳ ಸೋಲು

10:37 PM Jul 25, 2021 | Team Udayavani |

ಟೋಕಿಯೊ: ಗ್ರೂಪ್‌ ಹಂತದ ದ್ವಿತೀಯ ಹಾಕಿ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ಕೈಯಲ್ಲಿ ಬಲವಾದ ಏಟು ತಿಂದಿದೆ. ಕಾಂಗರೂ ಪಡೆ 7-1 ಅಂತರದಿಂದ ಮನ್‌ಪ್ರೀತ್‌ ಬಳಗವನ್ನು ಕೆಡವಿ ಸತತ 2ನೇ ಜಯ ದಾಖಲಿಸಿದೆ. ಆಸ್ಟ್ರೇಲಿಯದವರೇ ಆದ ಗ್ರಹಾಂ ರೀಡ್‌ ತಂಡದ ಕೋಚ್‌ ಆದ ಬಳಿಕ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲು ಇದಾಗಿದ್ದು, ತಂಡದ ಆತ್ಮವಿಶ್ವಾಸ ಒಮ್ಮೆಲೇ ಕುಸಿದು ಹೋಗಿದೆ.

Advertisement

ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯ 10ನೇ ನಿಮಿಷದಿಂದಲೇ ಗೋಲಿನ ಸುರಿಮಳೆಗೈಯತೊಡಗಿತು. ಡ್ಯಾನಿಯಲ್‌ ಬೀಲೆ ಖಾತೆ ತೆರೆದರು. ಬಳಿಕ ಜೆರೆಮಿ ಹೋವರ್ಡ್‌ (21), ಆ್ಯಂಡ್ರೂé ಫ್ಲಿನ್‌ ಒಜಿಲ್ವಿ (23), ಜೋಶುವ ಬೆಲ್ಟ್ (26), ಬ್ಲೇಕ್‌ ಗೋವರ್ (40 ಮತ್ತು 42) ಮತ್ತು ಟಿಮ್‌ ಬ್ರ್ಯಾಂಡ್‌ (51ನೇ ನಿಮಿಷ) ಗೋಲು ಬಾರಿಸುತ್ತ ಹೋದರು. ಭಾರತದ ಆಟಗಾರರು ಅಸಹಾಯಕರಾಗಿ ಇದನ್ನೆಲ್ಲ ಕಾಣುತ್ತ ನಿಂತರು. ಪಿ.ಆರ್‌. ಶ್ರೀಜೇಶ್‌ 2-3 ಉತ್ತಮ ತಡೆಯೊಡ್ಡದೇ ಹೋಗಿದ್ದರೆ ಸೋಲಿನ ಅಂತರ ಇನ್ನೂ ಹೆಚ್ಚುತ್ತಿತ್ತು.

ಭಾರತದ ಏಕೈಕ ಗೋಲನ್ನು 34ನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಸಿಂಗ್‌ ಬಾರಿಸಿದರು. ಭಾರತವಿನ್ನು ಮಂಗಳವಾರ ಸ್ಪೇನ್‌ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ :2022ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ : “ಅಯೋಧ್ಯೆ’ಯಲ್ಲಿ ಯೋಗಿ ಕಣಕ್ಕೆ?

Advertisement

Udayavani is now on Telegram. Click here to join our channel and stay updated with the latest news.

Next