Advertisement

ವರ್ಷದ ಶ್ರೇಷ್ಠ ಹಾಕಿ ತಾರೆ ಸ್ಪರ್ಧೆಯಲ್ಲಿ ಮನ್‌ಪ್ರೀತ್‌, ರಾಣಿ ರಾಂಪಾಲ್‌

10:05 AM Mar 04, 2020 | sudhir |

ಹೊಸದಿಲ್ಲಿ: ಹಾಕಿ ನಾಯಕರಾದ ಮನ್‌ಪ್ರೀತ್‌ ಸಿಂಗ್‌ ಮತ್ತು ರಾಣಿ ರಾಂಪಾಲ್‌ ಅವರನ್ನು ಹಾಕಿ ಇಂಡಿಯಾ ದ್ರುವ್‌ ಬಾತ್ರ ವರ್ಷದ ಶ್ರೇಷ್ಠ ಹಾಕಿ ತಾರೆ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ. ಮಾ. 8ರಂದು ನಡೆಯುವ ಹಾಕಿ ಇಂಡಿಯಾದ ಮೂರನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗುತ್ತದೆ.

Advertisement

ಹಾಕಿ ಕ್ರೀಡೆಗೆ ನೀಡಿದ ಗಮನಾರ್ಹ ಕೊಡುಗೆಯ ಆಧಾರದಲ್ಲಿ ವಿವಿಧ ಪ್ರಶಸ್ತಿಗಳಿಗೆ ಹಾಕಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ 1.30 ಕೋಟಿ ರೂ. ನಗದು ಮತ್ತು ಟ್ರೋಫಿಗಳನ್ನು ಆ ದಿನ ವಿತರಿಸಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ ಎಫ್ಐಎಚ್‌ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ಆಟಗಾರರಾಗಿರುವ ಮನ್‌ಪ್ರೀತ್‌ ಅವರನ್ನು ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 25 ಲಕ್ಷ ರೂ. ನಗದು ಬಹುಮಾನವಿರುವ ಈ ಪ್ರಶಸ್ತಿಗೆ ಮನ್‌ಪ್ರೀತ್‌ ಅವರು ಹರ್ಮನ್‌ಪ್ರೀತ್‌ ಸಿಂಗ್‌, ಮನ್‌ದೀಪ್‌ ಸಿಂಗ್‌ ಮತ್ತು ಸುರೇಂದರ್‌ ಕುಮಾರ್‌ ಜತೆ ಸ್ಪರ್ಧಿಸಲಿದ್ದಾರೆ.

ಪ್ರತಿಷ್ಠಿತ ವಿಶ್ವ ಗೇಮ್ಸ್‌ ಆ್ಯತ್ಲೀಟ್‌ ಪ್ರಶಸ್ತಿಗೆ ಪಾತ್ರರಾದ ವನಿತಾ ಹಾಕಿ ತಂಡದ ನಾಯಕಿ ರಾಣ ರಾಂಪಾಲ್‌ ಅವರು ವರ್ಷದ ಶ್ರೇಷ್ಠ ವನಿತಾ ಆಟಗಾರ್ತಿ ಪ್ರಶಸ್ತಿಗಾಗಿ ದೀಪ್‌ ಗ್ರೇಸ್‌ ಎಕ್ಕ, ಗುರ್ಜಿತ್‌ ಕೌರ್‌ ಮತ್ತು ಸವಿತಾ ಅವರೊಂದಿಗೆ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next