Advertisement

ಭಾರತಕ್ಕೆ ಮತ್ತೂಂದು ಆಘಾತ

09:50 AM May 18, 2019 | Team Udayavani |

ಪರ್ತ್‌: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ ದ್ವಿತೀಯ ಹಾಕಿ ಟೆಸ್ಟ್‌ ಪಂದ್ಯದಲ್ಲೂ ಭಾರತ ದೊಡ್ಡ ಸೋಲನುಭವಿಸಿದೆ. ಆಸೀಸ್‌ 5-2 ಗೋಲುಗಳಿಂದ ಭಾರತವನ್ನು ಮಣಿಸಿತು.  ಇದರೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕಾಂಗರೂ ಪಡೆ 2-0 ಅಂತರದಿಂದ ವಶಪಡಿಸಿಕೊಂಡಿತು.

Advertisement

ಆಸ್ಟ್ರೇಲಿಯ ಪರ ಟ್ರೆಂಟ್‌ ಮಿಲ್ಟನ್‌ (11ನೇ ಮತ್ತು 24ನೇ ನಿಮಿಷ), ಫ್ಲಿನ್‌ ಒಗಿಲೀವ್‌ (3ನೇ ನಿಮಿಷ), ಬ್ಲೇಕ್‌ ಗೋವರ್ (28ನೇ ನಿಮಿಷ) ಮತ್ತು ಟಿಮ್‌ ಬ್ರ್ಯಾಂಡ್‌ (43ನೇ ನಿಮಿಷ) ಗೋಲು ಸಿಡಿಸಿದರು.

ಭಾರತದ 2 ಗೋಲುಗಳು ನೀಲಕಾಂತ್‌ ಶರ್ಮ (12ನೇ ನಿಮಿಷ) ಮತ್ತು ರೂಪಿಂದರ್‌ಪಾಲ್‌ ಸಿಂಗ್‌ (53ನೇ ನಿಮಿಷ) ಅವರಿಂದ ದಾಖಲಾದವು. ಮೊದಲ ಪಂದ್ಯದಲ್ಲಿ ಭಾರತ 0-4 ಅಂತರದಿಂದ ಎಡವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next