Advertisement

ಇಂದಿನಿಂದ ಹಾಕಿ ಇಂಡಿಯಾ ಲೀಗ್‌ ಆರಂಭ

03:45 AM Jan 21, 2017 | |

ನವದೆಹಲಿ: ಪ್ರತಿಷ್ಠಿತ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಹಾಕಿ ಇಂಡಿಯಾ ಲೀಗ್‌ನ(ಎಚ್‌ಐಎಲ್‌) 5ನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಉದ್ಘಾಟನ ಪಂದ್ಯದಲ್ಲಿ ದಬಾಂಗ್‌ ಮುಂಬೈ ಮತ್ತು ರಾಂಚಿ ರಾಯ್ಸ ತಂಡಗಳು ಸೆಣಸಲಿವೆ.

Advertisement

ಜ.21 ರಿಂದ ಫೆ.26ರ ವರೆಗೆ 6 ಸ್ಥಳಗಳಲ್ಲಿ ಕೂಟದ ಪಂದ್ಯಗಳು ನಡೆಯಲಿದೆ. ಕೂಟದಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದು, ಲೀಗ್‌ನಿಂದ ಫೈನಲ್‌ ಪಂದ್ಯದ ವರೆಗೆ 34 ಪಂದ್ಯಗಳು ನಡೆಯಲಿವೆ. ಫೆ.22ರ ವರೆಗೆ 6 ತಂಡಗಳ ನಡುವೆ ಲೀಗ್‌ಹಂತದ ಪಂದ್ಯಗಳು ನಡೆಯಲಿವೆ. ಫೆ.25 ರಂದು ಚಂಡೀಗಢದಲ್ಲಿ ಎರಡೂ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಫೆ.26 ರಂದು ಚಂಡೀಗಢದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಲೀಗ್‌ನಲ್ಲಿ ಪ್ರತಿ ತಂಡಗಳು 10 ಪಂದ್ಯಗಳನ್ನು ಆಡುತ್ತದೆ. ಅತೀ ಹೆಚ್ಚು ಅಂಕಗಳಿಸಿದ 4 ತಂಡಗಳು ಮಾತ್ರ ಸೆಮಿಫೈನಲ್‌ ಪ್ರವೇಶಿಸಲಿವೆ.

ತಂಡಗಳು:
ದಬಾಂಗ್‌ ಮುಂಬೈ, ದೆಹಲಿ ವೇವ್‌ರೈಡರ್, ಪಂಜಾಬ್‌ ವಾರಿಯರ್, ಕಲಿಂಗ ಲ್ಯಾನ್ಸರ್, ರಾಂಚಿ ರಾಯ್ಸ, ಉತ್ತರ ಪ್ರದೇಶ ವಿಜಾರ್ಡ್ಸ್‌

ಟೂರ್ನಿ ನಡೆಯಲಿರುವ ಸ್ಥಳಗಳು:
ಮುಂಬೈ, ಭುವನೇಶ್ವರ, ರಾಂಚಿ, ದೆಹಲಿ, ಚಂಡೀಗಢ, ಲಕ್ನೋ

ನಮ್ಮ ಮುಖ್ಯಗುರಿ ಚಾಂಪಿಯನ್‌ ಆಗುವುದು. ಕಳೆದ ಬಾರಿ ಇರುವ ನಮ್ಮ ತಂಡವೇ ಈ ಬಾರಿ ಕಣಕ್ಕೆ ಇಳಿಯಲಿದೆ. ನಮ್ಮಲ್ಲಿ ಅನುಭವಿ ಆಟಗಾರರ ಜತೆ ಜೂನಿಯರ್‌ ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಾದ ಅಜಿತ್‌ ಕುಮಾರ್‌ ಪಾಂಡೆ ಮತ್ತು ಹಾರ್ದಿಕ್‌ ಸಿಂಗ್‌ ಇದ್ದಾರೆ. ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳುವ ಸಂಪೂರ್ಣ ಭರವಸೆಯಿದೆ.
  – ಸರ್ದಾರ್‌ ಸಿಂಗ್‌, ಹಾಲಿ ಚಾಂಪಿಯನ್‌ ಪಂಜಾಬ್‌ ವಾರಿಯರ್ ತಂಡದ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next