Advertisement

ಕಾಮನ್ವೆಲ್ತ್‌ ಗೇಮ್ಸ್‌ : ಭಾರತದ ಬಲಿಷ್ಠ ಹಾಕಿ ಪಡೆ

10:00 PM Jun 20, 2022 | Team Udayavani |

ಹೊಸದಿಲ್ಲಿ: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ಭಾರತ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ತಂಡಕ್ಕೆ ವಾಪಸಾದ ಮನ್‌ಪ್ರೀತ್‌ ಸಿಂಗ್‌ ಮರಳಿ ನಾಯಕರಾಗಿ ನೇಮಕಗೊಂಡಿದ್ದಾರೆ. ಡ್ರ್ಯಾಗ್‌ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಉಪನಾಯಕರಾಗಿದ್ದಾರೆ.

Advertisement

ಕಾಮನ್ವೆಲ್ತ್‌ ಗೇಮ್ಸ್‌ಗಾಗಿ “ಹಾಕಿ ಇಂಡಿಯಾ’ ದ್ವಿತೀಯ ದರ್ಜೆಯ ತಂಡವನ್ನು ಪ್ರಕಟಿಸುವ ಯೋಜನೆಯಲ್ಲಿತ್ತು. ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ ನಡುವಿನ ಅಂತರ ಬಹಳ ಕಡಿಮೆ ಇದ್ದುದೇ ಇದಕ್ಕೆ ಕಾರಣ. ಏಷ್ಯನ್‌ ಗೇಮ್ಸ್‌ ಹಾಕಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಅರ್ಹತಾ ಪಂದ್ಯಾವಳಿಯೂ ಆಗಿದೆ. ಹೀಗಾಗಿ ಕಾಮನ್ವೆಲ್ತ್‌ ಗೇಮ್ಸ್‌ಗಿಂತ ಏಷ್ಯನ್‌ ಗೇಮ್ಸ್‌ಗೆ ಮಹತ್ವ ಜಾಸ್ತಿ ನೀಡಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಏಷ್ಯನ್‌ ಗೇಮ್ಸ್‌ ಮುಂದೂಡಲ್ಪಟ್ಟಿದ್ದರಿಂದ ಕಾಮನ್ವೆಲ್ತ್‌ ಗೇಮ್ಸ್‌ಗೆ ಬಲಿಷ್ಠ ತಂಡವನ್ನೇ ಪ್ರಕಟಿಸಲು “ಹಾಕಿ ಇಂಡಿಯಾ’ ನಿರ್ಧರಿಸಿತು.

ಬಿ’ ವಿಭಾಗದಲ್ಲಿ ಭಾರತ :

ಎರಡು ಬಾರಿಯ ಬೆಳ್ಳಿ ಪದಕ ವಿಜೇತ ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಮತ್ತು ಘಾನಾ. ಜು. 31ರಂದು ಘಾನಾ ವಿರುದ್ಧ ಭಾರತ ಮೊದಲ ಲೀಗ್‌ ಪಂದ್ಯ ಆಡಲಿದೆ. 2018ರ ಗೋಲ್ಡ್‌ ಕೋಸ್ಟ್‌ ಗೇಮ್ಸ್‌ನಲ್ಲಿ ಭಾರತ 4ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತವಾಗಿತ್ತು.

ಮನ್‌ಪ್ರೀತ್‌ ಸಿಂಗ್‌ ಟೋಕಿಯೋದಲ್ಲಿ ಭಾರತೀಯ ಹಾಕಿ ಪದಕದ ಬರಗಾಲ ನೀಗಿಸಿದ ಸಾರಥಿಯಾಗಿದ್ದರು. ಇವರ ವಿಶ್ರಾಂತಿಯ ವೇಳೆ ಅಮಿತ್‌ ರೋಹಿದಾಸ್‌ ತಂಡವನ್ನು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ವಿರುದ್ಧ ಭಾರತ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿತ್ತು. ಉಪನಾಯಕ ಹರ್ಮನ್‌ಪ್ರೀತ್‌ ಈ ಕೂಟದಲ್ಲಿ ಅತ್ಯಧಿಕ ಗೋಲು ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

Advertisement

ಪ್ರೊ ಲೀಗ್‌ನಲ್ಲಿ ಆಡಿದ್ದ ಗೋಲ್‌ಕೀಪರ್‌ ಸೂರಜ್‌ ಕರ್ಕೆರ, ಫಾರ್ವರ್ಡ್‌ ಆಟಗಾರರಾದ ಶೈಲಾನಂದ ಲಾಕ್ರಾ ಮತ್ತು ಸುಖಜೀತ್‌ ಸಿಂಗ್‌ ಗೇಮ್ಸ್‌ ತಂಡದಿಂದ ಹೊರಬಿದ್ದಿದ್ದಾರೆ.

ಭಾರತ ತಂಡ :

ಗೋಲ್‌ಕೀಪರ್: ಪಿ.ಆರ್‌. ಶ್ರೀಜೇಶ್‌, ಕೃಷ್ಣ ಬಹಾದೂರ್‌ ಪಾಠಕ್‌.

ಡಿಫೆಂಡರ್: ವರುಣ್‌ ಕುಮಾರ್‌, ಸುರೇಂದ್ರ ಕುಮಾರ್‌, ಹರ್ಮನ್‌ಪ್ರೀತ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಜುಗ್ರಾಜ್‌ ಸಿಂಗ್‌, ಉರ್ಮನ್‌ಪ್ರೀತ್‌ ಸಿಂಗ್‌.

ಮಿಡ್‌ ಫೀಲ್ಡರ್: ಮನ್‌ಪ್ರೀತ್‌ ಸಿಂಗ್‌ (ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಶಮ್ಶೆರ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ನೀಲಕಂಠ ಶರ್ಮ.

ಫಾರ್ವರ್ಡ್ಸ್‌: ಮನ್‌ದೀಪ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಅಭಿಷೇಕ್‌.

Advertisement

Udayavani is now on Telegram. Click here to join our channel and stay updated with the latest news.

Next