Advertisement

ಹಾಕಿ ಗೋಲ್‌ ಕೀಪರ್‌ ಸೂರಜ್‌ ಕರ್ಕೇರ ಸಾಯ್‌ನಲ್ಲೀಗ ಏಕಾಂಗಿ

10:24 PM Jun 28, 2020 | Sriram |

ಬೆಂಗಳೂರು: ಲಾಕ್‌ಡೌನ್‌ ವೇಳೆ ಸತತ 100 ದಿನಗಳ ಕಾಲ ಬೆಂಗಳೂರಿನ “ಸಾಯ್‌’ ಕಚೇರಿಯಲ್ಲಿ ಉಳಿದಿದ್ದ ಭಾರತದ ಹಾಕಿ ಆಟಗಾರರೆಲ್ಲ ಈಗ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

Advertisement

ಆದರೆ ಗೋಲ್‌ಕೀಪರ್‌ ಸೂರಜ್‌ ಕರ್ಕೇರ ಮಾತ್ರ ಸಾಯ್‌ನಲ್ಲೇ ಒಬ್ಬಂಟಿ ಯಾಗಿ ಉಳಿದುಕೊಂಡಿದ್ದಾರೆ. ಮುಂಬಯಿಯ ಮಲಾಡ್‌ನ‌ವರಾದ ಸೂರಜ್‌, ಅಲ್ಲಿ ಕೋವಿಡ್‌-19 ಸೋಂಕು ವ್ಯಾಪಕವಾಗಿರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.

24ರ ಹರೆಯದ ಗೋಲ್‌ ಕೀಪರ್‌ಗೆ ಜತೆ ನೀಡಲು ಕೋಚ್‌ ಗ್ರಹಾಂ ರೀಡ್‌ ಮತ್ತು ಕೆಲವು ಸಹಾಯಕ ಸಿಬಂದಿ ಮಾತ್ರವೇ ಇದ್ದಾರೆ.

“ನಾನು ಮನೆಗೆ ಬರುವ ಕುರಿತು ಕುಟುಂಬದವರಲ್ಲಿ ವಿಚರಿಸಿದೆ. ಆದರೆ ಇಲ್ಲಿ ಪರಿಸ್ಥಿತಿ ಭೀಕರವಾಗಿದೆ, ಅಲ್ಲೇ ಉಳಿಯುವಂತೆ ಸೂಚಿಸಿದರು. ಹೀಗಾಗಿ ಮುಂಬಯಿಗೆ ಹೋಗದಿರು ವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬಂದೆ’ ಎಂಬುದಾಗಿ ಸೂರಜ್‌ ಹೇಳಿದರು.

“ಇದೊಂದು ಕಠಿನ ನಿರ್ಧಾರ. ನಾನು ಮನೆಯಿಂದ ಇಷ್ಟು ಕಾಲ ಹೊರಗುಳಿದವನೇ ಅಲ್ಲ. ಆದರೆ ಈಗ ಅನಿವಾರ್ಯವಾಗಿದೆ. ಅಕಸ್ಮಾತ್‌ ಮುಂಬಯಿಗೆ ಹೋಗಿ ವೈರಸ್‌ ಏನಾ ದರೂ ಅಂಟಿಕೊಂಡರೆ ಇದರಿಂದ ಚೇತರಿಸಲು, ಮರಳಿ ಫಿಟ್‌ನೆಸ್‌ ಸಂಪಾದಿಸಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲಿಲ್ಲ…’ ಎಂದರು.

Advertisement

ಹೀಗಿದೆ ದಿನಚರಿ…
“ಏನೂ ಕೆಲಸ ಇಲ್ಲದೆ, ಅಭ್ಯಾಸ ವನ್ನೂ ಮಾಡಲಾಗದೆ ಒಬ್ಬಂಟಿಯಾಗಿ ಇರುವುದು ಬಹಳ ಕಷ್ಟ. ಆದರೆ ಆಹ ಆಟಗಾರರೆಲ್ಲ ಕರೆ ಮಾಡಿ ಮಾತಾಡುತ್ತ ಇರುತ್ತಾರೆ. ಪ್ರಧಾನ ಕೋಚ್‌ ಗ್ರಹಾಂ ರೀಡ್‌, ಇತರ ಸಿಬಂದಿ ಇದ್ದಾರೆ. ಊಟ, ಉಪಾಹಾರದ ವೇಳೆ ಒಟ್ಟುಗೂಡಿ ಮಾತುಕತೆ ನಡೆಸುತ್ತೇವೆ. ಕ್ಯಾಂಪಸ್‌ನಲ್ಲಿ ಜಾಗಿಂಗ್‌ ಮಾಡುತ್ತೇನೆ. ಓದುವ ಹವ್ಯಾಸವಿದೆ. ಸಿನೆಮಾ ನೋಡುತ್ತೇನೆ. ಮಾನಸಿಕವಾಗಿ ಗಟ್ಟಿಗೊಳ್ಳಲು ಇಷ್ಟು ಸಾಕು’ ಎಂಬುದಾಗಿ ಕರ್ಕೇರ ತಮ್ಮ ದಿನಚರಿಯನ್ನು ವಿವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next