Advertisement

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

03:12 AM Nov 27, 2024 | Team Udayavani |

ಮಸ್ಕತ್‌ (ಒಮಾನ್‌): ಜೂನಿಯರ್‌ ಏಷ್ಯಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ಬುಧವಾರದ ತನ್ನ ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಸೆಣಸಲಿದೆ. ಪಿ.ಆರ್‌. ಶ್ರೀಜೇಶ್‌ ಗರಡಿಯಲ್ಲಿ ಪಳಗಿರುವ ಯುವ ಪಡೆ ತುಂಬು ಆತ್ಮವಿಶ್ವಾಸದಲ್ಲಿದೆ.

Advertisement

ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಇಲ್ಲಿನ ಉಳಿದ ತಂಡಗಳೆಂದರೆ ಕೊರಿಯಾ, ಜಪಾನ್‌ ಮತ್ತು ಚೈನೀಸ್‌ ತೈಪೆ. “ಬಿ’ ವಿಭಾಗದಲ್ಲಿ ಬಾಂಗ್ಲಾದೇಶ, ಚೀನ, ಮಲೇಷ್ಯಾ, ಒಮಾನ್‌ ಮತ್ತು ಪಾಕಿಸ್ಥಾನ ತಂಡಗಳಿವೆ. ಥಾಯ್ಲೆಂಡನ್ನು ಎದುರಿಸಿದ ಬಳಿಕ ಜಪಾನ್‌ (ನ. 28), ಚೈನೀಸ್‌ ತೈಪೆ (ನ. 30) ಮತ್ತು ಕೊರಿಯಾ (ಡಿ. 1) ವಿರುದ್ಧ ಭಾರತ ಆಡಲಿದೆ. ಎರಡೂ ವಿಭಾಗಗಳ ಅಗ್ರ 2 ತಂಡಗಳು ಸೆಮಿಫೈನಲ್‌ ತಲುಪಲಿವೆ.

“ನಾವು ಬಲಾಡ್ಯ ವಿಭಾಗದಲ್ಲಿದ್ದೇವೆ. ಇದೊಂದು ಸವಾಲು. ಆದರೆ ನಮ್ಮ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವ, ದೇಶವನ್ನು ಮತ್ತೂಮ್ಮೆ ಹೆಮ್ಮೆಪಡಿಸುವ ಗುರಿ ಹೊಂದಿದ್ದೇವೆ’ ಎಂಬುದಾಗಿ ತಂಡದ ನಾಯಕ ಆಮಿರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next