ಮಸ್ಕತ್ : ಓಮನ್ ನಲ್ಲಿ ಸೋಮವಾರ ನಡೆದ ಎಫ್‌ಐಎಚ್ ಹಾಕಿ ಪ್ರೊ ಲೀಗ್ 2021-22ರ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಚೀನಾ ಮಹಿಳೆಯರ ತಂಡವನ್ನು 7-1 ಗೋಲುಗಳ ಭಾರಿ ಅಂತರದಿಂದ ಸೋಲಿಸಿದೆ.
ಭಾರತ ತಂಡದ ಪರ 5 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಬಾರಿಸಿ ಶುಭಾರಂಭ ಮಾಡಿದರು. ಬಳಿಕ
12 ನೇ ನಿಮಿಷದಲ್ಲಿ ನೇಹಾ ಫೀಲ್ಡ್ ಗೋಲು ಬಾರಿಸಿದರು. 40 ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಫೀಲ್ಡ್ ಗೋಲು ಬಾರಿಸಿದರು. ಚೀನಾ ಪರ 43ನೇ ನಿಮಿಷದಲ್ಲಿ ಡೆಂಗ್ ಕ್ಸೂ ಏಕೈಕ ಗೋಲು ಬಾರಿಸುವಲ್ಲಿ ಸಫಲರಾದರು.
47 ನೇ ನಿಮಿಷದಲ್ಲಿ ಸುಶೀಲಾ ಚಾನು ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲ್ ಮಾಡಿದರೆ. 48 ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಫೀಲ್ಡ್ ಗೋಲು, 50 ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲ್ ಮಾಡಿದರೆ, 52 ನೇ ನಿಮಿಷದಲ್ಲಿ ಸುಶೀಲಾ ಚಾನು ಪೆನಾಲ್ಟಿ ಸ್ಟ್ರೋಕ್ ಮೂಲಕ ಇನ್ನೊಂದು ಗೋಲು ಮಾಡಿದರು.