ತಿರುಪತಿ: ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಮತ್ತು ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಎದುರಾದಂತೆಯೇ ತಿರುಪತಿಯ 3 ಹೊಟೇಲ್‌ಗಳಿಗೆ ಬಾಂಬ್ ಬೆದರಿಕೆ ಒಡ್ಡಲಾಗಿದೆ. ಲೀಲಾ ಮಹಲ್, ಕಪಿಲಾ ತೀರ್ಥಂ ಮತ್ತು ಅಲಿಪಿರಿಯ ಲ್ಲಿರುವ ಖಾಸಗಿ ಹೊಟೇಲ್‌ಗಳಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ ಬಳಿಕ ಅದೊಂದು ಹುಸಿ ಕರೆ ಎನ್ನುವುದು ದೃಢಪಟ್ಟಿತು. ಪಾಕಿಸ್ಥಾನದ ಐಎಸ್‌ಐ ಪಟ್ಟಿ ಮಾಡಲಾದ ಹೊಟೇಲ್‌ಗಳಲ್ಲಿ ಬಾಂಬ್ ಸ್ಫೋಟಿಸಲಾಗುತ್ತಿದೆ. ಕಳೆದ ವರ್ಷ ಡ್ರಗ್ಸ್ ಪ್ರರಣದಲ್ಲಿ ಡಿಎಂಕೆ ನಾಯಕ ಜಾಫರ್ ಸಾದಿಕ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕುಟುಂಬದ ಕೈವಾಡ ಮುಚ್ಚಿಹಾಕಲು ಇಂಥ ದಾಳಿ ಅನಿವಾರ್ಯ ಎಂದು ಬರೆಯಲಾಗಿತ್ತು.
ನಿನ್ನೆ 27 ವಿಮಾನಕ್ಕೆ ಬೆದರಿಕೆ: 300ರ ಸನಿಹಕ್ಕೆ ಹುಸಿ ಕೇಸ್
ದೇಶದಲ್ಲಿ ಹಾರಾಟ ನಡೆ ಸುವ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಪಿಡುಗು ಮುಂದುವರಿ ದಿದೆ. ಶುಕ್ರವಾರ ಮತ್ತೆ 27 ವಿಮಾನ ಗಳಿಗೆ ದುಷ್ಕರ್ಮಿಗಳಿಂದ ಹುಸಿ ಬಾಂಬ್ ಬೆದರಿಕೆ ಬಂದಿದೆ. ವಿಸ್ತಾರ, ಇಂಡಿಗೋ, ಸ್ಪೈಸ್‌ಜೆಟ್ ಸಂಸ್ಥೆಗಳ ತಲಾ 7 ಮತ್ತು ಏರ್ ಇಂಡಿಯಾದ 6 ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬೆದರಿಕೆ ಹಾಕಲಾಗಿದೆ. ಹೀಗಾಗಿ, 12 ದಿನಗಳಲ್ಲಿ ವರದಿಯಾದ ಇಂಥ ಪ್ರಕರಣಗಳ ಸಂಖ್ಯೆ 300ರ ಗಡಿ ಸಮೀಪಿಸಿದೆ.
ಗುರುವಾರ ಒಂದೇ ದಿನ 85ಕ್ಕೂ ಅಧಿಕ ವಿಮಾನಗಳಿಗೆ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಈ ಕೃತ್ಯದಿಂದ ವಿಮಾನಯಾನ ಸಂಸ್ಥೆಗಳು ಅಪಾರ ನಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಹುಸಿ ಬಾಂಬ್ ಬೆದರಿಕೆಗಳು ಬಂದು ಸತತ 9 ದಿನದಲ್ಲೇ ವಿಮಾನಯಾನ ಸಂಸ್ಥೆ ಗಳಿಗೆ 600 ಕೋಟಿ ರೂ.ಗಳ ನಷ್ಟ ವಾ ಗಿತ್ತು.ಇದೀಗ 12ನೇ ದಿನದ ವೇಳೆಗೆ ವೈಮಾನಿಕ ಕಂಪೆನಿಗಳಿಗೆ ಉಂಟಾದ ನಷ್ಟದ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿಯವರು ಕೂಡ ಹುಸಿ ಬಾಂಬ್ ಬೆದರಿಕೆ ಪಿಡುಗನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಗುರುವಾರವಷ್ಟೇ ಹೇಳಿದ್ದರು.