Advertisement

HMT ಭೂಮಿ; ಕಿರುಕುಳ ಕೊಟ್ಟರೆ ಕೋರ್ಟ್‌ಗೆ: ಎಚ್‌ಡಿಕೆ

01:46 AM Aug 14, 2024 | Team Udayavani |

ಬೆಂಗಳೂರು: ಹಿಂದೂ ಸ್ಥಾನ್‌ ಮಷಿನ್‌ ಟೂಲ್ಸ್‌ (ಎಚ್‌ ಎಂಟಿ)ಗೆ ಸೇರಿದ ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವು ದಿಲ್ಲ. ರಾಜ್ಯ ಸರಕಾರ ದುರುದ್ದೇಶ ದಿಂದ ಭೂಮಿ ವಿಷಯದಲ್ಲಿ ಕಿರುಕುಳ ಕೊಟ್ಟರೆ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗುತ್ತದೆ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

3ನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಾನು ಬೃಹತ್‌ ಕೈಗಾರಿಕೆ ಸಚಿವನಾಗಿ ಅಧಿ ಕಾರ ವಹಿಸಿಕೊಂಡೆ. ಬೆಂಗಳೂರು, ಹೈದರಾ ಬಾದ್‌, ಹರಿಯಾಣದ ಪಿಂಜಾರೋ ದಲ್ಲಿರುವ ಘಟಕಗಳಿಗೆ ಭೇಟಿ ನೀಡಿದ್ದೆ. ಎಚ್‌ಎಂಟಿಗೆ ಕಾಯಕಲ್ಪ ನೀಡು ವು ದಾಗಿ ಪ್ರಕಟಿಸಿದ ಬೆನ್ನಲ್ಲೇ ಅದರ ಷೇರು ಮೌಲ್ಯ 45 ರೂ. ಇದ್ದದ್ದು 95 ರೂ.ಗೆ ಏರಿತು. ನಾನು ಒಂದು ಸಂಸ್ಥೆಗೆ ಕಾಯಕಲ್ಪ ನೀಡಲು ಪ್ರಯತ್ನಿಸಿದರೆ ರಾಜ್ಯ ಸರಕಾರದಿಂದ ಅಸಹಕಾರ ಹಾಗೂ ಗೊಂದಲ ಮೂಡಿಸುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಚ್‌ಎಂಟಿ ಕಾರ್ಖಾನೆಯಲ್ಲಿ 15ರಿಂದ 20 ಸಾವಿರ ಜನ ಕೆಲಸ ಮಾಡುತ್ತಿದ್ದರು. ಗಡಿಯಾರ ಹಾಗೂ ಟ್ರ್ಯಾಕ್ಟರ್‌ ಘಟಕ ಇತ್ತು. 1970ರಲ್ಲಿ 270 ಕೋಟಿ ರೂ. ಲಾಭ ಗಳಿಸಿತ್ತು. ಆ ಹಣದಿಂದ ಹೈದರಾ ಬಾದ್‌, ಉತ್ತರಾಖಂಡ, ಕೇರಳ, ಅಜೆ¾àರ್‌ ಮೊದಲಾದೆಡೆ ಶಾಖೆಗಳು ಪ್ರಾರಂಭ ವಾದವು.

ಇವೆಲ್ಲ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿವೆ. ಎಚ್‌ಎಂಟಿ ಕಾರ್ಖಾನೆಯನ್ನು ಉಳಿಸುವ ಉದ್ದೇಶದಿಂದ ಪರಿಣತರ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರ 2016ರಲ್ಲೇ ನಷ್ಟದ ಉದ್ಯಮವೆಂದು ಮುಚ್ಚಲು ತೀರ್ಮಾನಿಸಿತ್ತು. ಆದರೆ ಪ್ರಧಾನಿ, ಹಣಕಾಸು ಸಚಿವರು ಹಾಗೂ ಬಂಡವಾಳ ವಾಪಸಾತಿ ಇಲಾಖೆಯ ಮನವೊಲಿಸಿ ಈ ಹೆಮ್ಮೆಯ
ಕಾರ್ಖಾನೆಗೆ ಕಾಯಕಲ್ಪ ನೀಡುವ ಗುರಿ ನನ್ನದು. ಈ ಪ್ರಯತ್ನಕ್ಕೆ ರಾಜ್ಯ ಸರಕಾರ ಪ್ರಾಂಜಲ ಮನಸ್ಸಿನಿಂದ ಸಹಕಾರ ನೋಡಬೇಕು ಎಂದು ಕುಮಾರಸ್ವಾಮಿ ಕೋರಿದರು.

ಎಚ್‌ಡಿಕೆ ವಾದವೇನು?
– ಅದು ಅರಣ್ಯ ಭೂಮಿ ಎಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. 2016ರಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಉನ್ನತಾಧಿಕಾರ ಸಮಿತಿ ನಡೆಸಿದ್ದ ಸರ್ವೇಯಲ್ಲಿ ಅರಣ್ಯ ಭೂಮಿ ಎಂದು ಉಲ್ಲೇಖವಾಗಿಲ್ಲ. ಬದಲಾಗಿ ಆ ಸ್ಥಳದಲ್ಲಿ ಕಾರ್ಖಾನೆಗಳಿವೆ ಎಂದು ನಿಮ್ಮದೇ ಸರಕಾರದ ಸಮಿತಿ ಸ್ಪಷ್ಟಪಡಿಸಿದೆ. ಯಾವ ಭೂಮಿಯನ್ನೂ ರಾಜ್ಯ ಸರಕಾರ ಪುಕ್ಕಟೆಯಾಗಿ ಕೊಟ್ಟಿಲ್ಲ. 1963ರಲ್ಲಿ 185 ಎಕ್ರೆಗೆ 4.40 ಲಕ್ಷ ರೂ. ಹಾಗೂ 1965ರಲ್ಲಿ 77 ಎಕ್ರೆಗೆ 1.80 ಲಕ್ಷ ರೂ. ಪಾವತಿಸಲಾಗಿದೆ. ದಾಖಲೆಗಳನ್ನು ತೆಗೆದು ನೋಡಿ.
– ಎಚ್‌ಎಂಟಿ ಸಂಸ್ಥೆಯು ಇಸ್ರೋ, ಗೇಲ್‌ನಂತಹ ಕೇಂದ್ರ ಸ್ವಾಮ್ಯದ ಸಂಸ್ಥೆಗಳಿಗೆ ಭೂಮಿ ಕೊಟ್ಟಿದೆಯೇ ವಿನಾ ಖಾಸಗಿಯವರಿಗೆ ಮಾರಾಟ ಮಾಡಿಲ್ಲ. ಪ್ರಸ್ಟೀಜ್‌ ಕಂಪೆನಿಯವರಿಗೆ 27 ಎಕ್ರೆ ಖರೀದಿಸಲು ಎನ್‌ಒಸಿ ಕೊಡಲಾಗುತ್ತದೆ, ಇಸ್ರೋ, ಗೇಲ್‌ಗೆ ಕೊಡಲಾಗುವುದಿಲ್ಲವೇ? ಕಾಡುಗೋಡಿ ಪ್ಲಾಂಟೇಶನ್‌ನಲ್ಲಿ ಕಾನ್‌ಕಾರ್ಡ್‌ ಪ್ರೈ.ಲಿ. ಖರೀದಿಸಿದ್ದ 711 ಎಕರೆಯಲ್ಲಿ ನಿವೇಶನ ಮಾಡಿ ಹಂಚುತ್ತಿಲ್ಲವೇ? ಇದು ರಿಯಲ್‌ ಎಸ್ಟೇಟ್‌ ದಂಧೆ ಅಲ್ಲವೇ?
– ಎಚ್‌ಎಂಟಿ ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್‌ಗೆ ದಾನ ಮಾಡುತ್ತೀರಿ?
– 2020ರಲ್ಲಿ ರಾಜ್ಯ ಸರಕಾರವೇ ಡಿನೋಟಿಫಿಕೇಶನ್‌ಗಾಗಿ ಸುಪ್ರೀಂ ಕೋರ್ಟ್‌ ಮುಂದೆ ಇಂಡೆಮ್ನಿಟಿ ಅಫಿದಾವಿಟ್‌ ದಾಖಲಿಸಿದೆ. ಇದರ ಅರ್ಥ ಏನು?
– ಕುಮಾರಸ್ವಾಮಿ ಮೇಲಿನ
ದ್ವೇಷಕ್ಕೆ ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನೀವು ಲೂಟಿ ಮಾಡಿದ್ದು ಸಾಕು. ನಾನು ಮಾಡುತ್ತಿರುವ ಕೆಲಸಕ್ಕೆ ಸಹಕಾರ ಕೊಡಿ.

Advertisement

ಏನಿದು ವಿವಾದ?
ಕೇಂದ್ರ ಸರಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯು ಅರಣ್ಯ ಇಲಾಖೆಗೆ ಸೇರಿದ ಜಾಗ, ಅದನ್ನು ಮಾರಾಟ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆ. 11ರಂದು ಆರೋಪಿಸಿದ್ದರು. ಅಲ್ಲ ದೆ ಬೆಂಗಳೂರಿನ ಪೀಣ್ಯ ಜಾಲಹಳ್ಳಿ ಪ್ಲಾಂಟೇಶನ್‌ ಸರ್ವೇ ನಂ. 1 ಮತ್ತು 2ರಲ್ಲಿರುವ 10 ಸಾವಿರ ಕೋಟಿ ರೂ.ಗೂ ಅಧಿಕ ಬೆಲೆಬಾಳುವ 599 ಎಕ್ರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶಗಳೇ ಇಲ್ಲ. ಆದರೂ ಎಚ್‌ಎಂಟಿಗೆ ದಾನಪತ್ರ ಮಾಡಿಕೊಡಲಾಗಿದೆ. ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಬೇಕಿದ್ದರೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಡಿನೋಟಿಫೈ ಮಾಡಬೇಕು. ಆ ಪ್ರಕ್ರಿಯೆಯೂ ಆಗಿಲ್ಲ. ಒಟ್ಟು 599 ಎಕ್ರೆ ಪೈಕಿ 469.32 ಎಕ್ರೆಯನ್ನು ಎಚ್‌ಎಂಟಿಗೆ ಕೊಡಲಾಗಿದ್ದು, ಇದರಲ್ಲಿ ಕಟ್ಟಡ ನಿರ್ಮಾಣ ಮಾಡದೆ ಖಾಲಿ ಇರುವ 281 ಎಕ್ರೆಯನ್ನು ಮೊದಲು ವಶಕ್ಕೆ ಪಡೆದು, ಉಳಿದ ಜಾಗವನ್ನು ವಶಪಡಿಸಿಕೊಳ್ಳಲು ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವ ಖಂಡ್ರೆ ಟಿಪ್ಪಣಿಯಲ್ಲಿ ಕಟ್ಟಪ್ಪಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next