Advertisement

ಹೆಚ್ ಎಲ್ ನಾರಾಯಣ್ ಮಾಸ್ಟರ್ ಎಲ್ಲರಿಗೂ ದಾರಿದೀಪ : ಗುರುವಂದನೆ ಕಾರ್ಯಕ್ರಮ

06:25 PM Mar 23, 2022 | Team Udayavani |

ಕೊರಟಗೆರೆ:   ಮನುಷ್ಯನ ಉಜ್ವಲ ಭವಿಷ್ಯ ವಿದ್ಯೆಯಿಂದ ಮಾತ್ರ ಸಾಧ್ಯ. ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಅಂತಹ ಉತ್ತಮ ಶಿಕ್ಷಕನ ಹಿಂದೆ ಒಂದು ಬುದ್ಧಿವಂತರ ಸೈನ್ಯವೇ ಇರುತ್ತದೆ ಅದಕ್ಕೆ ಉದಾಹರಣೆ ಹೆಚ್.ಎಲ್.ಎನ್.  ಮಾಸ್ಟರ್ ಎಂದು ಹೊಳವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ಈರಣ್ಣ ನಿವೃತ್ತ ಉಪಾಧ್ಯಾಯ ಹೆಚ್ ಎಲ್ ನಾರಾಯಣ್ ಅವರನ್ನ ಗುಣಗಾನ ಮಾಡಿದರು.

Advertisement

ಕೊರಟಗೆರೆ ತಾಲೂಕಿನ ಅಕ್ಕಿ ರಾಂಪುರ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ, ಶಾರದಾ ಪೂಜೆ , ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.

ಸಮಾಜದಲ್ಲಿ ನಾವು ಇಂದು  ಉನ್ನತ ಶಿಕ್ಷಣ ಪಡೆದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜ ಪ್ರತಿಯೊಬ್ಬರ ಶ್ರಮ ಅಡಗಿರುತ್ತದೆ, ಅವರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಮೂಲಕ ಕಟ್ಟಿದ ತೆರಿಗೆಯ ಹಣದಿಂದಲೆ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು.ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ಸು ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.

ಹಳೆಯ ವಿದ್ಯಾರ್ಥಿಗಳ ವತಿಯಿಂದ ಭೀಮ್ ಸಂಸ್ಥೆಯ ಸಂಸ್ಥಾಪಕರಾದ ಬಿ.ಜಿ  ರವಿಕುಮಾರ್ ಮಾತನಾಡಿ ಶಿಕ್ಷಣದ ಜೊತೆಗೆ ಬದುಕಿನ ಪಾಠ ಕಲಿಸಿಕೊಟ್ಟ ಅತ್ಯುತ್ತಮ ಶಿಕ್ಷಕರಲ್ಲಿ ವಿದ್ಯಾರ್ಥಿ ಸ್ನೇಹಿ ಜೀವಿಯಾದ ಎಚ್ ಎಲ್ ಎನ್ ಸರ್ ರವರನ್ನ ನಮ್ಮ ಕೊನೆಯ ಉಸಿರಿರುವವರೆಗೂ ಮರೆಯುವಂತಿಲ್ಲ ಅಂದು ಅವರು ನೀಡಿದಂತಹ ಅನೇಕ ಮಾರ್ಗದರ್ಶನಗಳು ಇಂದು ನಮಗೆ ದಾರಿದೀಪವಾಗಿದ್ದು ,ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅವರ ಜೀವನವನ್ನು ರೂಪಿಸುವಂತ ಶಿಕ್ಷಕರು ಸಿಗುವಂತವರು ಅಪರೂಪ ಅಂತ ಕೆಲಸ ಈ ಶಿಕ್ಷಕರಿಂದ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಗೊಂಡಿರುವುದು ಇವರ ಸಾರ್ಥಕತೆಯ ಜೀವನವಾಗಿದೆ ಎಂದರು.

ಹೊಳವನಹಳ್ಳಿ ಪ್ರೌಢಶಾಲೆಯಲ್ಲಿ 20 ವರ್ಷಗಳ ಹಿಂದೆ ಕೊರಟಗೆರೆ ತಾಲೂಕಿಗೆ  ಟಾಪರ್ ಆಗಿ ಹೊರಹೊಮ್ಮಿದ ಹಳೆಯ ವಿದ್ಯಾರ್ಥಿ ರವಿ ಶರ್ಮಾ ಮಾತನಾಡಿ ನಾನು ಎಚ್ ಎಲ್ ಎನ್ ಮಾಸ್ಟರ್ ಗೆ ಅಚ್ಚುಮೆಚ್ಚಿನ ಶಿಷ್ಯನಾಗಿ ಇಡೀ ಪ್ರೌಢಶಾಲೆಗೆ ಟಾಪರ್ ಆಗಿ ಜೊತೆಗೆ ಪದವಿಪೂರ್ವ ಹಾಗೂ ಪದವಿ ನಂತರವೂ ಟಾಪರ್ ಆಗಿ ಹೊರಹೊಮ್ಮಿರುವ ನಾನು ಶಿಕ್ಷಣ ಹೊಟ್ಟೆ ಒರೆಸಿಕೊಳ್ಳಲು ಸರ್ಕಾರಿ  ವೃತ್ತಿ ಅವಲಂಬಿಸದೆ ನಮಗೆ ಜನ್ಮ ನೀಡಿದ ಭಾರತ ಮಾತೆಯ ಋಣ ತೀರಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ ನನ್ನ ಪ್ರಮುಖ ಧ್ಯೇಯ ಹಿಂದೂ ಧರ್ಮವನ್ನ ಪೋಷಿಸುವುದು ಹೊಸ ಪೀಳಿಗೆಯ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ನಮ್ಮ ದೇಶದ ದೇಶಾಭಿಮಾನ ಸಂಸ್ಕೃತಿ ಸಂಪ್ರದಾಯವನ್ನ‌ ರೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಂದೇಶವನ್ನು ಬಿತ್ತಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ನಾನು ತೆರೆಮರೆಯಲ್ಲಿ ದೇಶಕ್ಕಾಗಿ ದೇಶಾಭಿಮಾನ ಮೂಡಿಸುವಂತಹ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ನಮ್ಮ ಮನೆ ಜ್ಞಾನ ಕೇಂದ್ರವಾಗಿದ್ದು 4000 ವಿವಿಧ ಬುಕ್ ಗಳು ಇದ್ದು ಇವುಗಳನ್ನು ಅಧ್ಯಯನ ಮಾಡಿರುವುದಲ್ಲದೆ ಇದರಲ್ಲಿನ ಹಲವು ಉಪಯುಕ್ತ ಮಾಹಿತಿಗಳನ್ನು ಬಿತ್ತರಿಸುವುದೇ ನನ್ನ ಪ್ರಮುಖ ಧ್ಯೇಯವಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಭೀಮ್ ಸಂಸ್ಥೆಯ ಸಂಸ್ಥಾಪಕರಾದ ಬಿ.ಜಿ . ರವಿಕುಮಾರ್ ಆಹುಜ ಸೌಂಡ್ ಸಿಸ್ಟಮ್ ಉಚಿತವಾಗಿ ಕೊಡುಗೆಯಾಗಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಗಿರೀಶ್ ,ಕೋಟೆ ಕಲ್ಲಯ್ಯ ಸ್ಮಿತಾ ,ಅನುಪಮಾ ,ಶೈಲಜಾ ,ಮಂಜುನಾಥ್, ಜೈ ಸಿಂಹ, ಕೆ ಎಸ್ ಮಂಜುನಾಥ, ಸುಷ್ಮಾ, ಫಾತಿಮಾ ,ಅಪ್ಪಾಜಿಗೌಡ ಎಸ್ ಡಿಎಂಸಿ ಅಧ್ಯಕ್ಷರಾದ ರಮೇಶ್ ,ಸಿದ್ದಪ್ಪ , ,ಮಹಾಲಕ್ಷ್ಮಿ, ಹಳೆಯ ವಿದ್ಯಾರ್ಥಿಗಳಾದ ರಂಗಧಾಮಯ್ಯ ,ರವಿಕುಮಾರ್ , ರಘುಕುಮಾರ್, ಲಕ್ಷ್ಮೀಪ್ರಸಾದ್ ,ರವಿಪ್ರಸಾದ್ , ಶಂಕರ್ , ಮಲ್ಲಿಕಾರ್ಜುನ್, ಶರೀಫ್ ಗೋವಿಂದರಾಜು ,ಲೋಕೇಶ್ , ಹೆಚ್ ಪಲ್ಲವಿ , ರವಿ .ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next