Advertisement

ತಾಪಂ-ಜಿಪಂ ಚುನಾವಣೆ ಮುಂದೂಡಿಕೆ ಸರಿಯಲ್ಲ

01:42 PM Feb 11, 2021 | Team Udayavani |

ಗದಗ: ಬರುವ ತಾಪಂ-ಜಿಪಂ ಸಾರ್ವತ್ರಿಕ ಚುನಾವಣೆ ಮುಂದೂಡುವ ಹುನ್ನಾರದಿಂದ ತಾಪಂ ವ್ಯವಸ್ಥೆ ರದ್ದು ಮಾಡುವ ಚರ್ಚೆ ರಾಜ್ಯ ಬಿಜೆಪಿ ಸರ್ಕಾರ ಹರಿಬಿಟ್ಟಿದೆ ಎಂದು ಶಾಸಕ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ಸರ್ಕಾರದ ವಿರುದ್ಧ ಹರಿಹಾಯ್ದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಪಂ ವ್ಯವಸ್ಥೆ ರದ್ದುಗೊಳಿಸುವ ನೆಪದಲ್ಲಿ ಬರುವ ಜಿಪಂ, ತಾಪಂ ಚುನಾವಣೆ ಮುಂದೂಡುವ ಪ್ರಯತ್ನ ಸಲ್ಲದು. ತಾಪಂಗಳನ್ನು ರದ್ದುಗೊಳಿಸುವುದರಿಂದ ಪಂಚಾಯತ್‌ ಹಾಗೂ ಗ್ರಾಮ ಸ್ವರಾಜ್‌ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಈಗಾಗಲೇ ಗ್ರಾಪಂ ಚುನಾವಣೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರಕ್ಕೆ ಮಂಗಳಾರತಿಯಾಗಿದೆ. ಇದೀಗ ತಾಪಂ ರದ್ದುಗೊಳಿಸುವ ವಿಚಾಲರದಲ್ಲೂ ಸರ್ಕಾರದ ತನ್ನ ಉದ್ಧಟತನ ಮುಂದುವರಿಸಿದರೆ, ಕೋರ್ಟ್‌ನಲ್ಲಿ ಮತ್ತೂಮ್ಮೆ ಅವಮಾನ ಎದುರಿಸಬೇಕಾಗುತ್ತದೆ. ಹೀಗಾಗಿ ಇಂತಹ ಕೆಟ್ಟ ಸಾಹಸ ಸರ್ಕಾರ ಮಾಡಬಾರದು ಎಂದು ಎಚ್ಚರಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಯ 73ನೇ ತಿದ್ದುಪಡಿಯಿಂದ ತಾಪಂ ವ್ಯವಸ್ಥೆ ಬದಲಾಗಿದೆ. ಹೀಗಾಗಿ ತಾಪಂ ವ್ಯವಸ್ಥೆ ರದ್ದುಪಡಿಸಲು ಸಾಧ್ಯವೇ ಇಲ್ಲ. ಸಂವಿಧಾನದಲ್ಲಿ  ತಿದ್ದುಪಡಿಯಾಗಿದ್ದನ್ನು ರಾಜ್ಯ ಸರ್ಕಾರದಿಂದ ರದ್ದುಪಡಿಸಲು ಸಾಧ್ಯವಿಲ್ಲ. ಇಂತಹ ಮಹತ್ವದ ವಿಚಾರ ಕೇವಲ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದರೆ ಸಾಲದು. ಶಾಸನ ಸಭೆಗಳಲ್ಲಿ ಪ್ರಸ್ತಾಪಿಸಬೇಕು ಎಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮೂರು ಹಂತದ ಪಂಚಾಯತ್‌ ವ್ಯವಸ್ಥೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ತಾಪಂ ಮಹತ್ವದ ಪಾತ್ರವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಹಲವು ರಚನಾತ್ಮಕ ಹಾಗೂ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತಾಪಂ ಪರಿಣಾಮಕಾರಿಯಾಗಿವೆ. ಇಂತಹ ತಾಪಂ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಅಧಿ ಕಾರಿಶಾಹಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಪಂಚಾಯತ್‌ ವ್ಯವಸ್ಥೆ ಗಟ್ಟಿಗೊಳಿಸಲು ಅಗತ್ಯ ಆರ್ಥಿಕ ನೆರವು, ಅನುದಾನ ಹಾಗೂ ಅಧಿ ಕಾರ ನೀಡಬೇಕು. ಜೊತೆಗೆ ಬರುವ ಮೇ ತಿಂಗಳಲ್ಲಿ ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಪಂಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಇದನ್ನೂ ಓದಿ :ಗೈರಾದವರಿಗೆ ನೋಟಿಸ್‌ ನೀಡಿ

Advertisement

ಭಾರತರತ್ನ ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ನಿಮಿತ್ತ ಗದಗನಲ್ಲಿ ನೂತನವಾಗಿ  ನಿರ್ಮಾಣವಾಗಿರುವ ರಂಗಮಂದಿರಕ್ಕೆ ಪಂ| ಭೀಮಸೇನ್‌ ಜೋಶಿ ಹೆಸರು ನಾಮಕರಣ ಮಾಡಲು ಸರ್ಕಾರ ಆದೇಶಿದೆ. ಇದು ಗದುಗಿನ ಜನತೆಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next