Advertisement

ಹೈಕದಲ್ಲಿ ಕಲಾ ವಿಮರ್ಶೆ ಕೊರತೆ: ಮಹೇಶ್ವರಯ್ಯ

02:51 PM Feb 11, 2017 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕದಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಸಾಧಕರ ಕೊರತೆ ಇಲ್ಲ, ಆದರೆ, ಇವೆಲ್ಲವುಗಳನ್ನು ವಿಮಶಾìತ್ಮಕ ನೆಲೆಯಲ್ಲಿ ಆಸ್ವಾದನೆ ಮಾಡುವರ ಕೊರತೆ ಇದೆ. ಇದು ನೀಗಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ದೊರೆಯುತ್ತದೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ| ಎಚ್‌.ಎಂ.ಮಹೇಶ್ವರಯ್ಯ ಹೇಳಿದರು. 

Advertisement

ಶುಕ್ರವಾರ ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ದಿ ಐಡಿಯಲ್‌ ಫೈನ್‌ ಆರ್ಟ್ಸ್ ಸಂಸ್ಥೆಯ ಮಾತೋಶ್ರೀ ನೀಲಗಂಗಮ್ಮಾ ಗು. ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯರ ನೆನಪು ಮತ್ತು 2015ನೇ ಸಾಲಿನ ದೃಶ್ಯಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಲಾವಿದ ದಿ| ಶಾಂತಲಿಂಗಪ್ಪ ಪಾಟೀಲ ನಿಂಬಾಳ ಅವರ ಕಲಾಕೃತಿಗಳ ಪ್ರದರ್ಶನ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಜಿಲ್ಲೆಯ ಕಲಾವಿದರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದಾಗ್ಯೂ, ಅಂತಹ ಉನ್ನತ ಕಲಾವಿದರ ಕಲಾಕೃತಿಗಳನ್ನು ಆಸ್ವಾದಿಸುವ ಮತ್ತು ವಿಮರ್ಶಿಸುವ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಇಲ್ಲಿನವರು ಹಿಂದೆ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಅಂತಹ ಕೊರತೆ ನಿವಾರಿಸಬೇಕು ಎಂದು ಕರೆ ನೀಡಿದರು. ದೆಹಲಿ ಕನ್ನಡಿಗ ಕಲಾವಿದ ಜಿ.ಎಸ್‌. ಈರಣ್ಣ ಅವರಿಗೆ ದೃಶ್ಯಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಕಲಾವಿದ ವಿಜಯ್‌ ಸಿಂಧನೂರ ದಿ. ಶಾಂತಲಿಂಗಪ್ಪ ಪಾಟೀಲ ಅವರ ಕಲಾಕೃತಿಗಳ ಕ್ಯಾಟಲಾಗ್‌ ಬಿಡುಗಡೆ ಮಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ದಯಾನಂದ ಅಗಸರ್‌, ಖ್ಯಾತ ಕಲಾವಿದ ಜಿ.ಆರ್‌. ಈರಣ್ಣ ಹಾಜರಿದ್ದರು. ಡಾ| ವಿ.ಜಿ. ಅಂದಾನಿ ಸ್ವಾಗತಿಸಿದರು. ಜಿ. ಪುನೀತಕುಮಾರ ಪ್ರಾರ್ಥನಾಗೀತೆ ಹಾಡಿದರು. ಹಣಮಂತ ಮಂತಟ್ಟಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next