Advertisement

ಜಾತಿಗೊಂದು ನಿಗಮ: ಸಮಾಜ ಒಡೆಯುವ ಕೆಲಸ

03:49 PM Nov 29, 2020 | Suhan S |

ಅರಸೀಕೆರೆ: ಭಯಮುಕ್ತ ಸಮಾಜ ನಿರ್ಮಿಸಲು ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಅಗತ್ಯ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಕೆ.ಜವರೇಗೌಡ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಮುಂಬರುವ ಗ್ರಾಪಂ ಚುನಾವಣಾ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭಯದ ವಾತಾವರಣ ನಿರ್ಮಿಸಿದ್ದರೆ, ರಾಜ್ಯದಲ್ಲಿನ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಜಾತಿಗೊಂದು ನಿಗಮ ಸ್ಥಾಪಿಸುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಮಾಜಕ್ಕೆ ಸಮಾನತೆಯ ಆದರ್ಶ ಬೋಧಿಸಿದ ಬಸವೇಶ್ವರರ ಸಿದ್ಧಾಂತಗಳ ಆಧಾರದ ಮೇಲೆ ಅಧಿಕಾರ ನಡೆಸಬೇಕಾದವರು, ಹೀಗೆ ಜನರಲ್ಲಿದ್ವೇಷ,ಅಸೂಯೆಹಾಗೂಅಸಮಾಧಾನ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಅಪರಾಧಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿ ಹಿಡಿಯುವ ಅನಿವಾರ್ಯತೆ ಕಾಂಗ್ರೆಸ್‌ ಪಕ್ಷಕ್ಕಿದ್ದು, ಸ್ಥಳೀಯ ಸಂಸ್ಥೆಗಳ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ಸವಾಲಾಗಿ ಸ್ವೀಕರಿಸಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಕಾರ್ಯಕರ್ತರ ಹಾಗೂ ಮುಖಂಡರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿಂದ ಕಾಂಗ್ರೆಸ್‌ ತೊರೆದವರನ್ನು ಮತ್ತೆ ಪಕ್ಷಕ್ಷೆ ಸೇರಿಸಿಕೊಳ್ಳುವ ಮೂಲಕ ಸಂಘಟನೆಗೆ ಬೂತ್‌ ಮಟ್ಟದಲ್ಲಿ ಬಲ ತುಂಬಬೇಕಾಗಿದೆ ಎಂದು ವಿವರಿಸಿದರು.

ಚುನಾವಣೆ ಗಂಭೀರವಾಗಿ ಪರಿಗಣಿಸಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಮಾತನಾಡಿ, ಗ್ರಾಪಂ ಚುನಾವಣೆ ನಮ್ಮಮುಂದಿದ್ದು, ಸವಾಲನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಎಂ.ಎಗೋಪಾಲ ಸ್ವಾಮಿ ಮಾತನಾಡಿ, ಹತ್ತು-ಹಲವು ಕಾರಣಗಳಿಂದಾಗಿ ವಿವಿಧ ಯೋಜನೆಗಳಲ್ಲಿ ಭೂಮಿ ಕಳೆದು ಕೊಂಡವರಿಗೆ ಸರ್ಕಾರದಿಂದ ಪರಿಹಾರ ದೊರೆತ್ತಿಲ್ಲ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿವಿಷಯ ಪ್ರಸ್ತಾಪಿಸಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.

Advertisement

ಎಲ್ಲಾ ಸಂದರ್ಭದಲ್ಲಿ ಹಣ ಕೆಲಸ ಮಾಡಲ್ಲ: ಮಾಜಿ ಶಾಸಕ ಸಿ.ಎಸ್‌ ಪುಟ್ಟೇಗೌಡ ಮಾತನಾಡಿ, ಕೆಲರಾಜಕಾರಣಿಗಳು ಗುತ್ತಿಗೆದಾರರಾಗಿದ್ದು, ಕಾಮಗಾರಿ ಹೆಸರಿನಲ್ಲಿ ಹಣ ದರೋಡೆ ಮಾಡಿ ತಂದು ಚುನಾವಣೆ ನಡೆಸುತ್ತಿದ್ದಾರೆ. ಅವರನ್ನು ಎದುರಿಸುವುದು ಸವಾಲಿನ ಕೆಲಸವೇ ಆಗಿದೆ.ಅಂದ ಮಾತ್ರಕ್ಕೆ ಎಲ್ಲಾ ಸಂದರ್ಭದಲ್ಲಿ ಹಣ ಕೆಲಸ ಮಾಡುವುದಿಲ್ಲ, ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡರೆ ಎಂದಿಗೂ ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಜಿ.ಬಿ.ಶಶೀಧರ್‌, ವಿಜಯ್‌ ಕುಮಾರ್‌, ಶ್ರೀಕಂಠಯ್ಯ, ಅರಸೀಕೆರೆ ಬ್ಲಾಕ್‌ ಅಧ್ಯಕ್ಷ ಬಾಣಾವರ ಶ್ರೀನಿವಾಸ್‌, ಗಂಡಸಿ ಬ್ಲಾಕ್‌ ಅಧ್ಯಕ್ಷ ಮೆಟ್ರೋ ಬಾಬು, ಜಿಪಂ ಸದಸ್ಯರಾದ ಮಾಡಾಳು ಸ್ವಾಮಿ, ಪಟೇಲ್‌ ಶಿವಪ್ಪ, ಮುಖಂಡರಾದ ಖಡಾಖಡಿ ಪೀರ್‌ಸಾಬ್‌, ಟಿ.ಆರ್‌.ಕೃಷ್ಣಮೂರ್ತಿ, ಅಶೋಕ್‌, ಹುಲ್ಲೆಕೆರೆ ಕುಮಾರ್‌, ಉಮಾಶಂಕರ್‌, ಬಿ.ಜಿ. ನಿರಂಜನ್‌, ಜಿ.ಟಿ.ಎಸ್‌ ಗೌಸ್‌ ಖಾನ್‌, ರೋಷನ್‌, ಮಂಗಳಪುರ ನಾಗರಾಜ್‌, ಶೇಷೇಗೌಡ, ನಾಗಸಮುದ್ರ ಸ್ವಾಮಿ, ಕಬ್ಬಳ್ಳಿ ರಂಗೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾಚಂದನ್‌, ತಾಲೂಕು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಪದ್ಮ, ಜಿಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next