Advertisement

ನಿಷೇಧಿತ ರಾಸಾಯನಿಕವಿರುವ ಚೀನ ಪಟಾಕಿ ನಿಷೇಧಕ್ಕೆ ಆಗ್ರಹ

12:04 PM Oct 14, 2017 | Team Udayavani |

ಪಣಜಿ:  ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ರಾಸಾಯನಿಕವನ್ನು ಒಳಗೊಂಡಿರುವ ಚೀನದ ಪಟಾಕಿಗಳನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್‌) ಗೋವಾ ಸರಕಾರವನ್ನು ಆಗ್ರಹಿಸಿದೆ.

Advertisement

ಉತ್ತರ ಗೋವಾ ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಅರ್ಪಿಸಿರುವ ಹಿಂದೂ ಜನಜಾಗೃತಿ ಸಮಿತಿ, ಮುಂದಿನ ವಾರ ದೀಪಾವಳಿಯ ವೇಳೆಗೆ ಭಾರತಿಯ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಲಗ್ಗೆ ಹಾಕಲಿರುವ ಚೀನ ಪಟಾಕಿ, ಸುಡು ಮದ್ದುಗಳು ಅತ್ಯಂತ ಅಪಾಯಕಾರಿಯಾಗಿವೆ ಎಂದು ಮನವಿಯಲ್ಲಿ ಹೇಳಿದೆ.

ದೇಶೀಯ ಪಟಾಕಿಗಳಿಗೆ ಹೋಲಿಸಿದರೆ ಚೀನದ ಪಟಾಕಿಗಳು ಅತ್ಯಂತ ಅಗ್ಗವಾಗಿವೆ; ಆದರೆ ಅಷ್ಟೇ  ಅನಾಹುತಕಾರಿಯಾಗಿವೆ. ಅವು ವಾತಾವರಣದ ತೀವ್ರ ಮಾಲಿನ್ಯಕ್ಕೆ ಕಾರಣವಾಗುತ್ತವೆ; ಆದುದರಿಂದ ಅವುಗಳನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕರಾಗಿರುವ ಮನೋಜ್‌ ಸೋಳಂಕಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next