Advertisement

ಹಿಜ್ಬುಲ್ ಸಂಘಟನೆಯ ಕಾಶ್ಮೀರ ಮುಖ್ಯಸ್ಥನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಭದ್ರತಾಪಡೆಗಳು

05:20 PM Nov 01, 2020 | Mithun PG |

ಕಾಶ್ಮೀರ: ಹಿಜ್ಬ್-ಉಲ್- ಮುಜಾಹಿದ್ದೀನ್ ಸಂಘಟನೆಯ  ಕಾಶ್ಮೀರ ಮುಖ್ಯಸ್ಥ ಸೈಫುಲ್ಲಾ ಮಿರ್ ಹಾಕ ಘಾಜಿ ಹೈದರ್ ನನ್ನು ಭದ್ರತಾ ಪಡೆಗಳು ಎನ್ ಕೌಂಟರ್ ಮೂಲಕ ಹೊಡೆದುರುಳಿಸಿದೆ.

Advertisement

ಶ್ರೀನಗರ ಜಿಲ್ಲೆಯ ರಂಗ್ರೀತ್ ಪ್ರದೇಶದಲ್ಲಿ ಭಾನುವಾರ(ನ.1) ದಂದು ಈ ಎನ್ ಕೌಂಟರ್ ನಡೆದಿದೆ. ಈ ಕುರಿತು ಸ್ಪಷ್ಟನೆ ನೀಡಿದ ಕಾಶ್ಮೀರ ಐಜಿ ವಿಜಯ್ ಕುಮಾರ್ ‘ಬುರ್ಹಾನ್ ವಾನಿ ಗುಂಪಿನ ಕೊನೆಯ ಸದಸ್ಯ ಸೈಫುಲ್ಲಾನನ್ನು ರಾವಲ್ ಪೋರಾ ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ. ಮಾತ್ರವಲ್ಲದೆ ಈ ವೇಳೆ ಓರ್ವ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ರಿಯಾಜ್ ನಾಯ್ಕು ಹತ್ಯೆಯ ನಂತರ 31 ವರ್ಷದ ಸೈಫುಲ್ಲಾನನ್ನು ಕಾಶ್ಮೀರದ ಹಿಜ್ಬುಲ್ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಈತ ಭದ್ರತಾ ಪಡೆ ಗುರುತಿಸಿದ, ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ A++ ಶ್ರೇಣಿಯನ್ನು ಹೊಂದಿದ್ದ.

ಇದನ್ನೂ ಓದಿ: ಚುನಾವಣಾ ಭಾಷಣದ ವೇಳೆ ಯಡವಟ್ಟು “ಕೈ” ಗುರುತಿಗೆ ಮತ ಚಲಾಯಿಸಿ ಎಂದ “ಬಿಜೆಪಿ” ನಾಯಕ ಸಿಂಧಿಯಾ

ಇಂದು ಖಚಿತ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ಎಸ್ ಓಜಿ ಭದ್ರತಾ ಪಡೆಗಳು, ಜಂಟಿ ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಇಬ್ಬರು ಉಗ್ರರು ಅಡಗಿರುವ ಮಾಹಿತಿ ತಿಳಿದುಬಂದಿದ್ದು, ಓರ್ವನನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿದ್ದು, ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

Advertisement

ಏತನ್ಮಧ್ಯೆ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿದ್ದು, ಶಹಾಪುರ್, ಕಿರ್ನಿ, ಖಸ್ಬಾ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ರಂಪ್ ನಡೆಸಿದ 18 ಚುನಾವಣಾ ರ‍್ಯಾಲಿಯಿಂದ 30ಸಾವಿರ ಮಂದಿಗೆ ಕೋವಿಡ್ ಸೋಂಕು; 700 ಜನ ಸಾವು

Advertisement

Udayavani is now on Telegram. Click here to join our channel and stay updated with the latest news.

Next