Advertisement

ಎಚ್‌ಐವಿ ಸೋಂಕಿತರ ಪ್ರಮಾಣ ಶೇ.25ರಷ್ಟು ಇಳಿಕೆ‌

12:33 PM Dec 01, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಎಚ್‌ಐವಿ/ಏಡ್ಸ್‌ ಸೋಂಕಿತರ ಪ್ರಮಾಣ ಶೇ. 25ರಷ್ಟು ಕುಸಿದಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ  ಶೇ.0.38 ಲಕ್ಷ ಎಚ್‌ಐವಿ ಸೋಂಕಿತರಿದ್ದು, ಸೋಂಕು ಪ್ರಮಾಣ ಕಡೆಮೆಯಾದ ಹಿನ್ನೆಲೆ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ಒಂದು ಸ್ಥಾನ ಕೆಳಗಿಳಿದಿದೆ. 

Advertisement

ಎಚ್‌ಐವಿ/ಏಡ್ಸ್‌ ಸೋಂಕಿತರಲ್ಲಿ ಮಿಜೋರಾಂ ಮೊದಲನೇ ಸ್ಥಾನದಲ್ಲಿದ್ದು, ನಾಗಾಲ್ಯಾಂಡ್‌, ಮೇಘಾಲಯ  2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕ ಕಳೆದ ಬಾರಿ 8ನೇ ಸ್ಥಾನದಲ್ಲಿದ್ದು, 9ನೇ ಸ್ಥಾನಕ್ಕೆ ಕುಸಿದಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಶೇ.0.06ರಷ್ಟು ಇಳಿಕೆಯಾಗಿದೆ. ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಎಆರ್‌ಟಿ ಕೇಂದ್ರಗಳಲ್ಲಿ ಪ್ರಸ್ತುತ 1,61,925 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 5,743 ಮಂದಿ ಎರಡನೇ ಹಂತದ ಚಿಕಿತ್ಸೆ, 147 ಮಂದಿ ಮೂರನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 67,780 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯ ಪಟ್ಟಿಯಲ್ಲಿ ಬಾಗಲಕೋಟೆ (ಶೇ. 1.41) ಮೊದಲ ಸ್ಥಾನದಲ್ಲಿದ್ದು, ಬೆಳಗಾವಿ (ಶೇ.1.32) 2ನೇ ಸ್ಥಾನ, ವಿಜಯಪುರ (ಶೇ.1.30) 3ನೇ ಸ್ಥಾನ, ಯಾದಗಿರಿ (ಶೇ.1.05) 4ನೇ ಸ್ಥಾನ ಹಾಗೂ ಚಿತ್ರದುರ್ಗ (ಶೇ.1.04) 5ನೇ ಸ್ಥಾನದಲ್ಲಿದೆ. ಇನ್ನು ರಾಜ್ಯದಲ್ಲಿ ಒಟ್ಟು 54 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು, (ಸುರûಾ ಕ್ಲಿನಿಕ್‌) ಇವುಗಳ ಅಡಿಯಲ್ಲಿ 1.60 ಲಕ್ಷ ಮಂದಿಯ ಪರೀಕ್ಷೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣ ಶೇ. 39ರಷ್ಟು ಪ್ರಗತಿಯಾಗಿದೆ.

ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಡಿ.1 “ವಿಶ್ವ ಏಡ್ಸ್‌ ದಿನ’ವನ್ನಾಗಿ ಘೋಷಿಸಿದ್ದು, ಎಚ್‌ಐವಿ/ಏಡ್ಸ್‌ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ವರ್ಷ “ನಿಮ್ಮ ಎಚ್‌ಐವಿ ಸ್ಥಿತಿಯನ್ನು ತಿಳಿಯಲು ಕೂಡಲೇ ಎಚ್‌ಐವಿ ಪರೀಕ್ಷೆ ಮಾಡಿಸಿ’ ಎಂಬ ಘೋಷಣೆಯಡಿ ಏಡ್ಸ್‌ ದಿನ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ ಜಂಟಿ ನಿರ್ದೇಶಕ ಗೋವಿಂದರಾಜು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next