Advertisement
ತಾಯಿಯಿಂದ ಮಗುವಿಗೆ ಹೆಚ್.ಐ.ವಿ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಾಗಾಗಿ ಪ್ರಸವ ಪೂರ್ವದ ಮೂರು ತಿಂಗಳೊಳಗಾಗಿ ಎಲ್ಲಾ ಗರ್ಭಿಣಿ ಮಹಿಳೆಯರು ಐಸಿಟಿಸಿ ಕೇಂದ್ರದಲ್ಲಿ ತಪಾಸಣೆಗೊಳಪಡಬೇಕು. ಫಲಿತಾಂಶವು ನೆಗೆಟಿವ್ ಎಂದಾದರೆ, ಗರ್ಭಿಣಿ ಅಪಾಯಕಾರಿಯಂಚಿನಲ್ಲಿದ್ದರೆ, ಪುನಃ 3-6 ತಿಂಗಳಲ್ಲಿ ಮರು ರಕ್ತಪರೀಕ್ಷೆ ಮಾಡಿಸಬೇಕಾಗುತ್ತದೆ. ಪ್ರತಿ ಗರ್ಭಿಣಿಯರ ಸಂಗಾತಿಯ ಪರೀಕ್ಷೆಯು ಅಗತ್ಯವಾಗಿರುತ್ತದೆ. ಯಾಕೆಂದರೆ, ಗರ್ಭಿಣಿಯು ನೆಗೆಟಿವ್ ಆಗಿ ಆಕೆಯ ಸಂಗಾತಿಯ ಫಲಿತಾಂಶ ಪಾಸಿಟಿವ್ ಬಂದರೆ ಅಂತಹ ಗರ್ಭಿಣಿಗೆ ವಿಂಡೋ ಅವಧಿಯೆಂದು ಪರಿಗಣಿಸಿ ಮರು ಪರೀಕ್ಷೆಗೊಳಪಡಿಸಬಹುದು.
ಗರ್ಭಾವಸ್ಥೆಯ ಸಮಯದಲ್ಲಿ ಹರಡಬಹುದಾದಂತಹ ಅಪಾಯಕಾರಿ ಅಂಶಗಳು
ಗರ್ಭಾವಸ್ಥೆಯ ಸಮಯದಲ್ಲಿ ಹೆಚ್.ಐ.ವಿ. ವೈರಾಣು ಮಾಸುಚೀಲದಿಂದ (ಪ್ಲಾಸೆಂಟ) ಭ್ರೂಣಕ್ಕೆ ಹಾದು ಹೋಗುವಾಗ ಹರಡುತ್ತದೆ. ಯಾವಾಗ ತಾಯಿಯು ಹೆಚ್.ಐ.ವಿ.ಗೆ ಚಿಕಿತ್ಸೆಯನ್ನು ಪಡೆಯುವುದಿಲ್ಲವೋ ಆಗ ಗರ್ಭಾವಸ್ಥೆಯ ಸಮಯದಲ್ಲಿ ಮಗುವಿಗೆ ಶೇಕಡ 5-10%ರಷ್ಟು ವೈರಾಣು ಪಾಸಿಟಿವ್ ತಾಯಿಯಿಂದ ಹರಡುವ ಸಾಧ್ಯತೆ ಇದೆ.
ಪ್ರಸವ ಹಾಗೂ ಹೆರಿಗೆಯ ಸಮಯದಲ್ಲಿ ಹರಡಬಹುದಾದಂತಹ ಅಪಯಕಾರಿ ಅಂಶಗಳು
Related Articles
– ಪ್ರಸವ ಮತ್ತು ಹೆರಿಗೆ ಹೆಚ್ಚಿನ ಸಮಯದಲ್ಲಿ ಹೆಚ್ಚಿನದಾಗಿ ಶಿಶುಗಳು ಹೆಚ್.ಐ.ವಿ. ಹೊಂದಿರುವ ತಾಯಿಯ ರಕ್ತವನ್ನು ಅಥವಾ ಕೊರಳಿನ ಸ್ರಾವಗಳನ್ನು ಹೀರಿಕೊಂಡರೆ ಕುಡಿದರೆ ಅಥವಾ ಎಳೆದುಕೊಂಡರೆ ವೈರಾಣು ಹರಡುವ ಸಾಧ್ಯತೆಗಳಿರುತ್ತದೆ.
– ಸ್ತನಪಾನದ ಸಮಯದಲ್ಲಿ ಹೆಚ್.ಐ.ವಿ. ಹರಡುವಿಕೆ: ಮಕ್ಕಳ ಬೆಳವಣಿಗೆಗೆ ಸ್ತನಪಾನ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದರೆ ಸ್ತನಪಾನದಿಂದ ಶೇಕಡ 5-20%ರಷ್ಟು ಹೆಚ್.ಐ.ವಿ. ಹರಡುವ ಅಪಾಯವಿದೆ. ಪಾಸಿಟಿವ್ ತಾಯಿಯು ಪ್ರಸವದ ಮೊದಲ ಮೂರು ತಿಂಗಳಲ್ಲಿ ಎ.ಆರ್.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಹೆಚ್.ಐ.ವಿ. ಸೋಂಕಿತ ತಾಯಿಗೆ ಸೂಕ್ತವಾದ ಸ್ತನಪಾನದ ಆಯ್ಕೆಯು ಆಕೆಯ ವೈಯಕ್ತಿಕ ಪರಿಸ್ಥಿತಿ, ಅವಳ ಆರೋಗ್ಯದ ಪರಿಸ್ಥಿತಿ ಮತ್ತು ಸುತ್ತಮುತ್ತಲಿನ ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ. ಸ್ತನಪಾನದ ಮಾದರಿ ಅಥವಾ ರೀತಿಯೂ ಕೂಡ ಹೆಚ್.ಐ.ವಿ. ಹರಡುವುದರ ಮೇಲೆ ಪರಿಣಾಮ ಬೀರುತ್ತದೆ. ಹುಟ್ಟಿದ ಮೊದಲ 6 ತಿಂಗಳಲ್ಲಿ ಸ್ತನಪಾನದ ಜೊತೆಗೆ ಇತರ ದ್ರವಗಳು, ಹಾಲು ಅಥವಾ ಗಟ್ಟಿ ಆಹಾರಗಳನ್ನು ಸೇವಿಸುವ ಶಿಶುಗಳಿಗಿಂತ ಪ್ರತ್ಯೇಕವಾದ ಸ್ತನಪಾನವಾಗುತ್ತಿರುವ ಶಿಶುಗಳಿಗೆ ಹೆಚ್.ಐ.ವಿ. ಹರಡುವ ಅಪಾಯವು ಬಹಳ ಕಡಿಮೆಯಿರುತ್ತದೆ. ಪಾಸಿಟಿವ್ ತಾಯಿಯು ಪ್ರಸವದ ಮೂರು ತಿಂಗಳಲ್ಲಿ ಎ.ಆರ್.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಸ್ತನಪಾವನ್ನು ಆರಿಸಿಕೊಂಡು ಪಾಸಿಟಿವ್ ಮಹಿಳೆಯು ಶಿಶುವಿಗೆ 6 ತಿಂಗಳುಗಳ ಕಾಲ ಪರ್ಯಾಯ ಆಹಾರವನ್ನು ನೀಡಕೂಡದು. ಪರ್ಯಾಯ ಆಹಾರವನ್ನು ಆರಿಸಿಕೊಂಡ ಮಹಿಳೆಯು ಸ್ತನಪಾನವನ್ನು ಕೊಡುವ ಹಾಗಿಲ್ಲ. 6 ತಿಂಗಳ ತನಕ ಸ್ತನಪಾನ ಹಾಗೂ ಪರ್ಯಾಯ ಆಹಾರವನ್ನು ಒಟ್ಟಿಗೆ ಕೊಡುವಂತಿಲ್ಲ. 6 ತಿಂಗಳ ನಂತರ ಎರಡನ್ನು ಕೊಡಬಹುದು. ಸ್ತನಪಾನವನ್ನು ಮಗುವಿಗೆ 12 ತಿಂಗಳ ತನಕ ಕೊಡಿಸಿ ಮಗುವಿನ ಹೆಚ್.ಐ.ವಿ. ಫಲಿತಾಂಶ ನೆಗೆಟಿವ್ ಬಂದರೆ ಅದನ್ನು ನಿಲ್ಲಿಸಬೇಕು ಮತ್ತು ಮಗುವಿನ ಫಲಿತಾಂಶ ಪಾಸಿಟಿವ್ ಬಂದರೆ ಎರಡು ವರ್ಷಗಳ ತನಕ ಮುಂದುವರಿಸಬಹುದು.
Advertisement
-ಹರಿಣಾಕ್ಷಿ ಎಂ.ಕೆ.ಐಸಿಟಿಸಿ ಕೌನ್ಸಿಲರ್, ಕೆಎಂಸಿ ಆಸ್ಪತ್ರೆ,
ಅತ್ತಾವರ, ಮಂಗಳೂರು