Advertisement
ಅದು ಸ್ವೀಕರಿಸುವ, ತಿರಸ್ಕರಿಸುವ ಪ್ರಕ್ರಿಯೆಯ ಮೇಲೆ ನಾವು ನಮ್ಮ ನಿಲುವುಗಳನ್ನು ತಾಳುತ್ತಾ, ವರ್ತನಾ ಅಭ್ಯಾಸವನ್ನು ಮಾಡಿಕೊಳ್ಳುತ್ತೇವೆ. ಹಾಗಾದರೆ ನಮ್ಮ ವೈಯಕ್ತಿಕ ನಿಲುವುಗಳಿಗೆ ನಾವು ಕೊಡುವ ಮೌಲ್ಯವೆಷ್ಟು?
Related Articles
Advertisement
ಸೋಂಕಿತರ ಬೌದ್ಧಿಕ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದು, ಅಲುಗಾಡಿಸಿದ್ದು ಮಾತ್ರ ರೋಗವಲ್ಲ, ಬದಲಿಗೆ ನಾವೇ. ಕಾಯಿಲೆಗೆ ತುತ್ತಾದವನಿಗಷ್ಟೆ ಗೊತ್ತು ಅವನ ದೈಹಿಕ ಆಯಾ ಮಗಳು, ಆಯಾಸ ಬೇನೆಗಳು; ಆದರೆ ಆತನ ಮಾನಸಿಕ ನೆಮ್ಮದಿಗಳನ್ನು ನಿರ್ಧ ರಿಸುವವರು ಮಾತ್ರ ಮೌಲ್ಯಗಳ ಬಗ್ಗೆ ಮಾತನಾಡುವ ನಾವುಗಳೇ.
ಸಮಾಜದ ಈ ಕೆಲವು ಧೋರಣೆಗಳ ಬಗ್ಗೆ ನನಗಿನ್ನು ಸೋಜಿಗವೆನಿಸುತ್ತದೆ. “ಶವಕ್ಕೆ’ ಪೂಜೆ ಮಾಡಿ ದೈವ ಸಮಾನ ಎಂದು ಭಾವಿಸುತ್ತಾ, ಸಾವಿನ ಅಂಚಿನಲ್ಲಿರುವವರ ಬಗ್ಗೆ ಅಸಹ್ಯ ಭಾವ ತಾಳುವ ಸಮಾಜದ ವರ್ತನೆ ಅರ್ಥೈಸಿಕೊಳ್ಳುವುದಾದರೂ ಹೇಗೆ? ಆದರೆ ಬದಲಾವಣೆ ಮಾತ್ರ ನಮ್ಮಿಂದಲೇ ಆಗಬೇಕಾದ ಅಗತ್ಯವಿದೆ. ಒಮ್ಮೆ ಸರಕಾರಿ ಎಚ್.ಐ.ವಿ ಸೋಂಕಿತರ ಆಪ್ತಸಮಾಲೋಚನ ಕೇಂದ್ರಕ್ಕೆ ಭೇಟಿ ನೀಡಿ, ಸರದಿಯಲ್ಲಿ ನಿಂತ ರೋಗಿಗಳನ್ನು ವೀಕ್ಷಿಸಿ. ಅಲ್ಲಿ ಗರ್ಭದಲ್ಲೇ ಎಚ್.ಐ.ವಿ ಸೋಂಕು ಹೊದ್ದುಬಂದ ಶಿಶು ಕಾಣಸಿಗುತ್ತದೆ. ಕೇವಲ ಸ್ನೇಹಿತರ ಪ್ರೋತ್ಸಾಹದಿಂದ ಕ್ಷಣಕಾಲ ವೇಶ್ಯೆ ಮನೆ ಬಾಗಿಲು ತಟ್ಟಿದ 20ರ ಹರೆಯದ ಯುವಕ ಸಿಗುತ್ತಾನೆ. ತನ್ನ 21ರ ಪ್ರಾಯದಲ್ಲಿ ದೃಢಪಟ್ಟ ತನ್ನ ಸೋಂಕಿನ ಮೂಲ ತನ್ನ ತಂದೆ-ತಾಯಿ ಎಂದು ತಿಳಿದ ಯುವತಿಯ ಪರಿಸ್ಥಿತಿ ಮನಕಲುಕುತ್ತದೆ.
ಇಂತಹ ಅನೇಕ “ಸೋಂಕಿನ’ ತೆರೆ ಹಿಂದಿನ ಕಾರಣಗಳು ಸಿಗುತ್ತವೆ. ಆದರೆ ನಾವು ಮಾತ್ರ ವಿಚಾರವನ್ನು ಸಂಪೂರ್ಣವಾಗಿ ತಿಳಿಯದೆ ಎಚ್.ಐ.ವಿ. ಸೋಂಕಿತರನ್ನು ತಿರಸ್ಕರಿಸುತ್ತಾ, ಅವರು ಮುಖ್ಯವಾಹಿನಿಗೆ ಬಾರದಂತೆ ಮಾನಸಿಕ ಹಿಂಸೆ ನೀಡುತ್ತಿದ್ದೇವೇನೋ ಎಂದು ಅನಿಸುತ್ತದೆ. ಅವರದಲ್ಲದ ಮತ್ತು ಅವರೇ ನೇರವಾಗಿ ಎದುರಿಸುವ ಸಮಸ್ಯೆಗೆ ತೀರ್ಮಾನ ಕೊಡಲು ನಾವು ಯಾರು? ನಮ್ಮ ಸುತ್ತಲೂ ಅನೇಕ ಸೋಂಕಿತರಿ¨ªಾರೆ. ಆದರೆ ಅವರ್ಯಾರು ತಮ್ಮ ದೈಹಿಕ ಸ್ಥಿತಿಗತಿಗಳನ್ನು ಹಂಚಿಕೊಳ್ಳಲಾರದಷ್ಟು ಸನ್ನಿವೇಶವನ್ನು ನಾವು ಬಿಗಿಗೊಳಿಸಿದ್ದೇವೆ. ರೋಗವೇನೇ ಇರಲಿ, ಕಾಯಿಲೆ ಬಂದರೂ,ಬಾರದಿದ್ದರೂ, ಬದುಕುವುದು ಮಾತ್ರ ನೂರು ವರ್ಷಕ್ಕಿಂತ ಕಡಿಮೆಯೆ.
2020ರ ವರದಿಯ ಪ್ರಕಾರ ಭಾರತದಲ್ಲಿ ನಿರೀಕ್ಷಿತ ಜೀವಿತಾವಧಿಯು ಶೇ. 69.73ರಷ್ಟಿದೆ. ಅಂದರೆ ರೋಗ ಬಂದಿಲ್ಲವೆಂದರೂ ನಾವು ಬದುಕುವ ಅವಧಿಯ ಗಡಿರೇಖೆಯಂತೂ ಅಷ್ಟೆ ಅಲ್ಲವೇ? ಹೀಗಿರುವಾಗ ಬೇರೆಯವರಿಗೆ ಬರಬಹುದಾದ ಕಾಯಿಲೆ- ಸೋಂಕುಗಳ ಬಗ್ಗೆ ತಾತ್ಸಾರ-ತಿರಸ್ಕಾರ ಭಾವನೆಗ ಳೇಕೆ? ನಮ್ಮ ಆರೋಗ್ಯದ ಕುರಿತು ಎಚ್ಚರವಿದ್ದರೆ ಸಾಕು; ಇತರರ ದೈಹಿಕ ಆರೋಗ್ಯದ ಕುರಿತು ಸಾಮಾಜಿಕ “ನಿಲುವು’ಗಳ ಪ್ರಮಾಣ ಪತ್ರ ನೀಡುವ ಅಗತ್ಯ ಇಲ್ಲವೆನಿಸುತ್ತದೆ. “ಸೋಂಕು ಪೀಡಿತ’ರನ್ನು ಗೌರವಿಸದಿದ್ದರೂ ಪರವಾಗಿಲ್ಲ; ಕನಿಷ್ಟ ಅವರು ಇದ್ದಂತೆಯೇ ಒಪ್ಪಿಕೊಳ್ಳೋಣ ಮತ್ತು ಸಂದರ್ಭವನ್ನು ಸ್ವೀಕರಿಸೋಣ. ಇದರಿಂದ ನಮಗೇನೂ ನಷ್ಟವಾಗುವುದಿಲ್ಲ ಆದರೆ, ಸೋಂಕಿಗೆ ತುತ್ತಾದವರಿಗೆ ಕನಿಷ್ಟ ಬದುಕಿರುವವರೆಗೂ “ತಾನು ಜೀವಿಸುತ್ತಿರುವ ಸಮಾಜದಲ್ಲಿ ತಾನು ಪರಕೀಯರಲ್ಲ’ ಎಂಬ ಭಾವ ಒಂದಿಷ್ಟು ಸಮಾಧಾನವನ್ನಾದರೂ ನೀಡುತ್ತದೆ.
ಶಕುಂತಲಾ ವಿನಯ್, ಬೆಂಗಳೂರು