ಹುಣಸೂರು: ಉತ್ತರ ಪ್ರದೇಶದ ಸರ್ಕಾರದ ಕೆಲ ತೀರ್ಮಾನಗಳು ಹಿಟ್ಲರ್‌ಗಿಂತಲೂ ಕಠಿಣ ವಾಗಿದ್ದು, ಸಂವಿಧಾನದ ಆಶಯಕ್ಕೆ ವಿರೋಧ ವಾಗಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಟೀಕಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿ ಸಿದ್ದ ಅಂಬೇಡ್ಕರ್ 126ನೇ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಇಡೀ ಪ್ರಪಂಚದ ಮನುಕುಲಕ್ಕೆ ಬೆಳಕಾದ ಮಹಾನ್ ಜ್ಞಾನಿ, ಅವರ ನೇತತ್ವದಲ್ಲಿ ರಚನೆಯಾದ ಸಂವಿಧಾನದ ಮೂಲ ಆಶಯಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದರು.
ಅಂಬೇಡ್ಕರ್ ಕೊಟ್ಟ ಬೆಳಕಿನಡಿಯ ಕತ್ತಲಿನಲ್ಲಿ ಕೆಲ ಗೋಮುಖ ವ್ಯಾಘ್ರಗಳು ಅವರು ಬೆಳಗಿಸಿದ ದೀಪನ್ನು ಆರಿಸಲು ಯತ್ನಿಸುತ್ತಿವೆ. ಲಂಚ ಕೊಡುವವನು ಹಾಗೂ ಪಡೆಯುವವನು ಸಂವಿಧಾನ ವಿರೋಧಿಯೇ, ಅಂಬೇಡ್ಕರ್ ಮಾರ್ಗದಲ್ಲಿ ತೆರಳಿದರೆ ಅವರ ಮಾನವೀಯ, ಹೋರಾಟದ ಗುಣ ಬೆಳೆಸಿಕೊಳ್ಳಲು ಸಾಧ್ಯ, ಉತ್ತರ ಪ್ರದೇಶ ಸರಕಾರದ ಕೆಲ ಸಂವಿಧಾನ ವಿರೋಧಿ ತೀರ್ಮಾನ ಹಿಟ್ಲರ್‌ಗಿಂತ ದೊಡ್ಡ ದೆಂದು ವ್ಯಂಗ್ಯವಾಡಿದರು.
ಉಪವಿಭಾಗಾಧಿಕಾರಿ ಡಾ. ಸೌಜನ್ಯ ಮಾತ ನಾಡಿ, ಅತಿ ದೊಡ್ಡ ಪ್ರಜಾಪ್ರಭುತ್ವದ ಭಾರತದಲ್ಲಿ ಸಂವಿಧಾನದಂತೆಯೇ ತಲೆಬಾಗಿ ಜೀವನ ನಡೆಸುವುದೇ ಅಂಬೇಡ್ಕರ್‌ಗೆ ನೀಡುವ ನಿಜವಾದ ಗೌರವ ಎಂದರು. ಎ.ಎಸ್.ಪಿ.ಹರೀಶ್‌ಪಾಂಡೆ ಅಂಬೇಡ್ಕರ್ ಆಶಯದಂತೆ ಶೋಷಿತರು ಶಿಕ್ಷಣಕ್ಕೆ ಮಹತ್ವ ನೀಡಿದಾಗ ಆರ್ಥಕ ಸಮಾನತೆ ಸಿಗಲಿದ್ದು, ಆಗಮಾತ್ರ ಮೇಲು ಕೀಳೆಂಬ ತಾರತಮ್ಯ ಹೋಗಲಾಡಿಸಲು ಸಾಧ್ಯ ಹಾಗೂ ಸಮಾಜದಲ್ಲಿ ಎತ್ತರದ ಸ್ಥಾನ ಗಿಟ್ಟಿಸಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಪುತ್ಥಳಿ ನಿರ್ಮಾಣ: ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನಗರಸಭೆ ಕಟ್ಟಡದ ಆವರಣದಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣಕ್ಕೆ ನಗರಸಭೆ 10 ಲಕ್ಷರೂ ಮೀಸ ಲಿರಿಸಿದೆ ಎಂದು ನಗರಸಭಾಧ್ಯಕ್ಷ ಕೆ.ಲಕ್ಷ್ಮಣ್ ಸಭೆಯಲ್ಲಿ ಘೋಷಿಸಿ, ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ಕೊಡಿಸಬೇಕೆಂದು ಶಾಸಕರನ್ನು ಕೋರಿದರು.
ದಲಿತ ಮುಖಂಡರಾದ ನಿಂಗರಾಜಮಲ್ಲಾಡಿ ಮಾತನಾಡಿ, ಅಂಬೇಡ್ಕರ್ ದಲಿತರು, ಶೋಷಿತರಿಗೆ ಆತ್ಮಸ್ಥೆರ್ಯ ತುಂಬಿದ ಜನನಾಯಕ ರಾಗಿದ್ದು, ಸಮಾಜದಲ್ಲಿ ಅನೇಕ ಬದಲಾವಣೆ ಗಳನ್ನು ಕಂಡರೂ ಇನ್ನೂ ಅಸ್ಪೃಶ್ಯತೆ, ಅರಾಜಕತೆ, ಬಹಿಷ್ಕಾರ ಪದ್ಧತಿ ಸಮಾಜದಲ್ಲಿದೆ. ತಾಲೂಕಿನಲ್ಲಿ ಅಧಿಕಾರ ಶಾಹಿಗಳು ಸಂವಿಧಾನಕ್ಕೆ ಅಪಚಾರ ವೆಸಗುತ್ತಿವೆ.
ಉತ್ತರ ಪ್ರದೇಶದ ಸನ್ಯಾಸಿ ಮುಖ್ಯಮಂತ್ರಿ ಮನುಷ್ಯನ ಆಹಾರ ಪದ್ಧತಿ ಮೇಲೆ ಸಂವಿಧಾನ ವಿರೋಧಿ ತೀರ್ಮಾನ ಕೈ ಗೊಂಡಿದ್ದಾರೆ ಎಂದು ಆರೋಪಿಸಿದರು. ಕಲ್ಕುಣಿಕೆ ಬಸವರಾಜು, ಸಮಾಜ ಕಲ್ಯಾಣಾ ಧಿಕಾರಿ ಹೊನ್ನೇಗೌಡ, ತಹಶೀಲ್ದಾರ್ ಮೋಹನ್, ಇಒ ಕೃಷ್ಣಕುಮಾರ್, ಜಿಪಂ ಸದಸ್ಯರಾದ ಡಾ. ಪುಷ್ಪ, ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ ಮತ್ತಿತರರು ಹಾಜರಿದ್ದರು.