Advertisement
ಸಂಘರ್ಷ ಹೊಸತಲ್ಲ
Related Articles
Advertisement
ಕುಕಿ-ಝೋಮಿ ಗ್ರೂಪ್
ಕುಕಿ-ಝೋಮಿ ಬಂಡುಕೋರರ ಗುಂಪು ವಾಸ್ತವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ನಾಗಾಆಕ್ರಮಣಕ್ಕೆ ಪ್ರತಿಯಾಗಿ. 1993ರಲ್ಲಿ ಎನ್‌ಎಸ್‌ಸಿಎನ್-ಐಎಂ ಬಂಡುಕೋರರು ನಡೆಸಿದ ಮಾರಣಹೋಮದಲ್ಲಿ ಸಾವಿರಾರು ಕುಕಿಗಳು ನಿರಾಶ್ರಿತರಾದರು. ಈ ಘಟನೆಯ ಬಳಿಕ ಕುಕಿ-ಝೋಮಿ ಬುಡಕಟ್ಟು ಜನಾಂಗವು ವಿವಿಧ ಸಶಸ್ತ್ರ ಗುಂಪುಗಳನ್ನು ಸೇರಿಸಿಕೊಂಡು ಸಂಘಟಿತಗೊಳ್ಳಲು ಶುರು ಮಾಡಿತು.
ಸರಕಾರ ಮಾಡಿದ್ದೇನು?
ನಾಗಾ ಪ್ರತ್ಯೇಕತಾವಾದಿ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ 1958ರಲ್ಲಿ ಭಾರತ ಸರಕಾರವು ಸಶಶŒ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿ ಮಾಡಿತು.ಆರಂಭದಲ್ಲಿ ನಾಗಾಲ್ಯಾಂಡ್ ಪೂರ್ತಿ ಮತ್ತು ಮಣಿಪುರದ ಕೆಲ ಭಾಗಗಳಲ್ಲಿ ಕಾಯ್ದೆ ಜಾರಿಯಾಯಿತು. ಕಣಿವೆಯಲ್ಲಿ ಬಂಡುಕೋರರ ಕಿರಿಕ್ ಜಾಸ್ತಿಯಾದ ಬಳಿಕ ಮಣಿಪುರದಾದ್ಯಂತ ಕಾಯ್ದೆ ವಿಸ್ತರಿಸಲಾಯಿತು.1980ರಲ್ಲಿ ಮಣಿಪುರವನ್ನು “ಸಂಘರ್ಷಪೀಡಿತ ಪ್ರದೇಶ’ ಎಂದು ಘೋಷಿಸಲಾಯಿತು. ಶಾಂತಿ ಮಾತುಕತೆಗೂ ಹಲವು ಪ್ರಯತ್ನಗಳು ನಡೆದವು.2008ರಲ್ಲಿ ಕೇಂದ್ರ, ರಾಜ್ಯ ಮತ್ತು ಕುಕಿ-ಝೋಮಿ ಗುಂಪುಗಳ ನಡುವೆ “ಕಾರ್ಯಾಚರಣೆ ಸ್ಥಗಿತ'(ಸಸ್ಪೆನ್ಶನ್ ಆಫ್ ಆಪರೇಶನ್) ಎಂಬ ತ್ರಿಪಕ್ಷೀಯ ಒಪ್ಪಂದ ನಡೆಯಿತು.ಅನಂತರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕ್ರಮೇಣ ಸುಧಾರಣೆಯಾಗಿ, ಹಲವು ಪ್ರದೇಶಗಳಿಂದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಾಪಸ್ ಪಡೆಯಲಾಯಿತು.
ರಾಜಕೀಯ, ಸಮಾಜದ ಮೇಲೆ ಪ್ರಭಾವ
ಬಂಡುಕೋರ ಸಂಘಟನೆಗಳು ಮಣಿಪುರ ಜನರ ದೈನಂದಿನ ಬದುಕಿನೊಳಗೆ ಸೂಕ್ಷ್ಮವಾಗಿ ಹೆಣೆಯಲ್ಪಟ್ಟಿವೆ. ಈ ಸಂಘಟನೆಗಳು ದಾಳಿ ನಡೆಸುವುದು, ಹಿಂದಿ ಸಿನೆಮಾ ಹಾಗೂ ಸಂಗೀತದ ಮೇಲೆ ನಿರ್ಬಂಧ ಸಹಿತ ಹಲವು ನೀತಿಸಂಹಿತೆಗಳನ್ನು ಹೇರುತ್ತಿರುತ್ತವೆ. ಸಾರ್ವಜನಿಕರ ಮೇಲೆ ತೆರಿಗೆಯನ್ನೂ ವಿಧಿಸುತ್ತವೆ. ರಾಜ್ಯದ ರಾಜಕೀಯ ಜೀವನದ ಮೇಲೂ ಉಗ್ರರ ಪ್ರಭಾವ ಇದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಬಂಡುಕೋರರ ಬೆಂಬಲದೊಂದಿಗೆ ಕಣಕ್ಕಿಳಿಯುವುದು, ಯಾರು ಗೆಲ್ಲಬೇಕು ಎಂದು ಜನರ ಮೇಲೆ ಈ ಸಂಘಟನೆಗಳೇ ಒತ್ತಡ ಹೇರುವುದು ಮುಂತಾದ ಘಟನೆಗಳು ಈಗಲೂ ನಡೆಯುತ್ತಿವೆ.
ಪಿಯುಎಲ್‌ಎಫ್ ಹುಟ್ಟು
ಇದೇ ಸಮಯದಲ್ಲಿ ಮೈತೇಯಿಗಳು ಮತ್ತು ಮೈತೇಯಿ ಪಂಗಾಲ್(ಮುಸ್ಲಿಮರು)ಗಳ ನಡುವೆ ಘರ್ಷಣೆಗಳು ಆರಂಭಗೊಂಡವು. ಇದರ ಪರಿಣಾಮವೆಂಬಂತೆ ಹುಟ್ಟಿದ್ದೇ ಪೀಪಲ್ಸ್ ಯುನೈಟೆಡ್ ಲಿಬರೇಶನ್ ಫ್ರಂಟ್ ಎಂಬ ಇಸ್ಲಾಮಿಕ್ ಬಂಡುಕೋರರ ಸಂಘಟನೆ. ಪ್ರಸ್ತುತ ಈ ಗುಂಪು ಮಣಿಪುರದಲ್ಲಿ ಸಕ್ರಿಯವಾಗಿಲ್ಲ.
ಪ್ರಮುಖ ಬಂಡುಕೋರ ಸಂಘಟನೆಗಳು
ಮಣಿಪುರದಲ್ಲಿ ಹುಟ್ಟಿಕೊಂಡ ಪ್ರಮುಖ ಪ್ರತ್ಯೇಕತಾವಾದಿ ಸಮೂಹಗಳೆಂದರೆ ಕುಕಿ ನ್ಯಾಶನಲ್ ಆರ್ಗನೈಸೇಶನ್, ಕುಕಿ ರೆವೊಲ್ಯೂಶನರಿ ಆರ್ಮಿ, ಝೋಮಿ ರೀ ಯುನಿಫಿಕೇಶನ್ ಆರ್ಗನೈಸೇಶನ್, ಝೋಮಿ ರೆವೊಲ್ಯೂಶನರಿ ಆರ್ಮಿ, ಕುಕಿ ನ್ಯಾಶನಲ್ ಫ್ರಂಟ್, ಕುಕಿ ನ್ಯಾಶನಲ್ ಲಿಬರೇಶನ್ ಫ್ರಂಟ್, ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ ಮತ್ತು ಕುಕಿ ನ್ಯಾಶನಲ್ ಆರ್ಮಿ. ಕಣಿವೆಯ ಬಂಡುಕೋರರ ಸಮೂಹಗಳಲ್ಲಿ ಯುಎನ್‌ಎಲ್‌ಎಫ್ ಅನ್ನು “ಮೈತೇಯಿ ಬಂಡುಕೋರರ ಗುಂಪುಗಳ ತಾಯಿ’ ಎಂದೇ ಕರೆಯಲಾಗುತ್ತದೆ. ಇದು ಇತ್ತೀಚಿನವರೆಗೂ ಅತ್ಯಂತ ಪ್ರಬಲ ಸಮೂಹವಾಗಿ ಉಳಿದಿತ್ತು. ಹಲವು ಬಾರಿ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿ ಭದ್ರತಾ ಪಡೆಗಳ ವಿರುದ್ಧ ದಾಳಿಗಳನ್ನೂ ನಡೆಸಿತ್ತು. ಆದರೆ ಕ್ರಮೇಣ ಎಲ್ಲ ಗುಂಪುಗಳೂ ದುರ್ಬಲಗೊಳ್ಳುತ್ತಾ ಸಾಗಿದವು. ಯುಎನ್‌ಎಲ್‌ಎಫ್ ಈಗ ಒಳಜಗಳದಿಂದಾಗಿ ಮೂರು ಗುಂಪುಗಳಾಗಿ ಹೋಳಾಗಿದೆ.
ಮನೋಹರ ಪ್ರಸಾದ್