Advertisement

ಮಕ್ಕಳಿಗೆ ದೇಶಮುಖ ಸಂಸ್ಥಾನ ಇತಿಹಾಸ ಅರಿಕೆ

11:56 AM Oct 13, 2021 | Team Udayavani |

ಆಳಂದ: ಎರಡನೂರು ವರ್ಷ ಪರಂಪರೆ ಹೊಂದಿರುವ ನಿರಗುಡಿ ಗ್ರಾಮದ ದೇಶಮುಖರ ಸಂಸ್ಥಾನದ ಇತಿಹಾಸವನ್ನು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಜೀತೇಂದ್ರ ತಳವಾರ ಪರಿಚಯಿಸಿದರು.

Advertisement

ಮಾಣಿಕರಾವ್‌ ದೇಶಮುಖ ಆಡಳಿತ ನಡೆಸುವಾಗ ಕವಲಗಾ, ಖಾತ್ರಾಬಾದ, ನಿರಗುಡಿ, ಚಿಂಚೋಳಿ ಗ್ರಾಮಗಳು ದೇಶಮುಖರ ಸಂಸ್ಥಾನಕ್ಕೆ ಒಳಪಟ್ಟಿದ್ದವು. ಈ ಇತಿಹಾಸವನ್ನು ಮಾಣಿಕರಾವ್‌ ಅವರ ವಾರಸುದಾರರಾದ ಸಿದ್ಧಣ್ಣ ದೇಶಮುಖ, ಶಂಕರರಾವ್‌ ದೇಶಮುಖ ವಿವರಿಸಿದರು. ನಂತರ ಗ್ರಾಮದ ಪುರಾತನವಾದ ಕರಿಕಲ್ಲಿನ ಎತ್ತರದ ಗೋಡೆಯನ್ನು ಮಕ್ಕಳಿಗೆ ತೋರಿಸಲಾಯಿತು.

ಈ ಗೋಡೆ ಒಳಗೆ ಇಂಗ್ಲೆಂಡಿನ ಎಲಿಜಬೆಥ್‌ ರಾಣಿ ಹಾಗೂ ರಾಜ, ಇಂದಿರಾಗಾಂಧಿ ಅವರು ಸೊಲ್ಲಾಪುರಕ್ಕೆ ಬಂದಾಗ ಮಾಣಿಕ್‌ರಾವ್‌ ಅವರು ಇಲಕಲ್‌ ಸೀರೆ ನೀಡಿ ಗೌರವಿಸಿದ ಭಾವಚಿತ್ರದ ಕುರಿತು ತಿಳಿಸಲಾಯಿತು. ಇದೇ ವೇಳೆ ಗೋಡೆ ಮೇಲಿದ್ದ ನಿಜಾಮರ ಭಾವಚಿತ್ರ, ನೇಣುಗಂಬ, ಕೈದಿಗಳನ್ನು ಬಂಧಿಸಿ ಇಡುತ್ತಿದ್ದ ಕೋಣೆ, ಶ್ವಾನ, ಕುದುರೆ, ಜಿಂಕೆ, ಕೋತಿ ಹಾಗೂ ಪಕ್ಷಿಗಳಲ್ಲಿ ಗಿಳಿ, ನವಿಲುಗಳನ್ನು ಸಾಕಿ ಬೆಳೆಸಿದ ಪಂಜರದ ಸ್ಥಳಗಳನ್ನು ಮಕ್ಕಳು ವೀಕ್ಷಿಸಿದರು.

1942ರಲ್ಲಿ ಗ್ರಾಮದ ದ್ವಾರಬಾಗಿಲನ್ನು ಮರು ಸಂಸ್ಕರಣ ಮಾಡಲಾಗಿತ್ತು. ಈ ಗೋಡೆಯ ಮೇಲಿರುವ ಹುಲಿ ವಿಗ್ರಹ, ಚಿರತೆ ಹಾಗೂ ವಿವಿಧ ಹೂವಿನ ಕುಂಡಲಗಳು ಮಕ್ಕಳನ್ನು ಆಕರ್ಷಿಸಿದವು. ನಂತರ ಮಕ್ಕಳು ಗ್ರಾಮದೇವತೆ ಶ್ರೀ ಸಿದ್ಧೇಶ್ವರ ಪ್ರತಿಮೆಯನ್ನು ವೀಕ್ಷಿಸಿ, ಅದರ ಇತಿಹಾಸವನ್ನು ತಿಳಿದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next