Advertisement

ಕೋಡಿ ಬಿದ್ದ ಐತಿಹಾಸಿಕ ಧರ್ಮಪುರ ಕೆರೆ

06:22 PM Oct 20, 2022 | Team Udayavani |

ಧರ್ಮಪುರ: ಕಳೆದ ವಾರದಿಂದ ಶಿರಾ ತಾಲೂಕು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಲಕ್ಕನಹಳ್ಳಿ ಬಳಿಯ ದೊಡ್ಡ ಹಳ್ಳ ಮೈತುಂಬಿ ಹರಿಯುತ್ತಿದರಿಂದ ನಲವತ್ತು ವರ್ಷಗಳ ಬಳಿಕ ಐತಿಹಾಸಿಕ ಧರ್ಮಪುರ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿದೆ.

Advertisement

ಧರ್ಮಪುರ ಕೆರೆ ಕೋಡಿ ಬಿದ್ದ ಹಿನ್ನೆಲೆ ಹೋಬಳಿಯ ಸಾವಿರಾರು ಜನರು ಸಂತಸ ವ್ಯಕ್ತಪಡಿಸಿದ್ದು, ಮಂಗಳವಾರ ರಾತ್ರಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕೆರೆಗೆ ಭೇಟಿ ನೀಡಿ ವೀಕ್ಷಿಸಿದರು. ಕೋಡಿ ಬಿದ್ದಿದ್ದು, ಜನರ ಬಹು ದಿನದ ಕನಸು ನನಸು ಆಗಿದೆ. ವರುಣ ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.

ಐತಿಹಾಸಿಕ ಪುರಾಣ ಪ್ರಸಿದ್ಧ ಧರ್ಮಪುರ ಕೆರೆ 1982ರಲ್ಲಿ ತುಂಬಿ ಕೋಡಿ ಹರಿದಿತ್ತು. 40 ವರ್ಷಗಳ ಬಳಿಕ ಕೋಡಿ ಬಿದ್ದಿದ್ದು, ಧರ್ಮಪುರ ಮತ್ತು ಪಿಡಿಕೋಟೆ ಎರಡು ಭಾಗದ ಕೋಡಿಗಳಲ್ಲೂ ನೀರು ರಭಸವಾಗಿ ಹೋಗುತ್ತಿದೆ. ಕೆರೆ ಏರಿಯ ಮೇಲಿರುವ ಶ್ರವಣಪ್ಪ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿತು. ಇನ್ನೂ ಕೆರೆಯ ಏರಿಯ ಮೇಲಿರುವ ಶ್ರೀ ಭೀಮಲಿಂಗೇಶ್ವರ ದೇವಸ್ಥಾನ ಪಾಳು ಬಿದ್ದಿದೆ. ಆ ದೇವರ ಗುಡಿಯನ್ನೂ ಜೀರ್ಣೋದ್ಧಾರ ಮಾಡಿ ದೇವರ ದರ್ಶನ ಮಾಡಲು
ಅವಕಾಶ ಮಾಡಿಕೊಡಬೇಕು. ಇನ್ನೂ ಪಿ.ಡಿ. ಕೋಟೆ ಗ್ರಾಮದ ಕೆರೆಯ ಕೋಡಿ ಬಹಳ ರಭಸವಾಗಿ ಹೋಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಬ್ಬಿನಹೊಳೆ ಪೊಲೀಸ್‌ ಠಾಣೆ ಪಿಎಸ್‌ಐ ಎಂ.ಪರುಶುರಾಮ್‌ ಲಮಾಣಿ ಮನವಿ ಮಾಡಿದ್ದಾರೆ.

ಐತಿಹಾಸಿಕ ಧರ್ಮಪುರ ಕೆರೆಗೆ ಕೋಡಿ ಬಿದ್ದಿದ್ದರಿಂದ ಜನ ಕೆರೆ ನೋಡಲು ಆಗಮಿಸುತ್ತಿದ್ದಾರೆ. ರೈತರ ಜಮೀನಿನಲ್ಲಿರುವ ಸೀಮೆ ಜಾಲಿಯನ್ನು ಸಂಬಂಧಪಟ್ಟ ಅಧಿ ಕಾರಿಗಳು ತೆರವುಗೋಳಿಸಿ ನೀರು ಸರಾಗವಾಗಿ ಹೋಗಲು ಅನುಮಾಡಿ ಕೊಡಬೇಕು. ಇಲ್ಲವಾದರೇ ಗ್ರಾಮಕ್ಕೆ ನೀರು ನುಗ್ಗುವು ಸಂಭವವಿದೆ ಎಂದು ಹಿರಿಯ ಮುಖಂಡ ತಿಪ್ಪೇಸ್ವಾಮಿ ಹೇಳಿದರು.

ಧರ್ಮಪುರ ಕೆರೆಗೆ ಗಂಗಾಪೂಜೆ: ಅರಳೀಕೆರೆ ಕರೇಗೌಡ್ರು ಕುಟುಂಬದವರಿಂದ ಶಾಂತಿಯಾಗಿ ಸಂಪ್ರದಾಯದ ಪ್ರಕಾರ ಗಂಗಾಪೂಜೆ, ಧರ್ಮಪುರ ಮುದ್ದರಂಗಪ್ಪ ಕುಟುಂಬದವರಿಂದ ಓಕಾಳಿ ಹಾಕುವುದು ಸೇರಿ ಇನ್ನೂ 12 ಕೈವಾಡಸ್ಥರು ಸೇರಿ ಕೆರೆಗೆ ಪೂಜೆ ಪುನಾಸ್ಕಾರ ಸಲ್ಲಿಸಿದರು.

Advertisement

ಅಂತರ್ಜಲ ವೃದ್ಧಿ: ಐತಿಹಾಸಿಕ ಧರ್ಮಪುರ ಕೆರೆ ನೀರಿನ ಸಾಮಥ್ಯ 0.3 ಟಿಎಂಸಿ ಅಡಿ, ಕೆರೆ ಅಂಗಳದ ವಿಸ್ತೀರ್ಣ 700 ಹೆಕ್ಟೇರ್‌, ಏರಿ ಉದ್ದ 1,65 ಕಿ.ಮೀ ಇದ್ದು ಸುಮಾರು 500 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೆರೆಗೆ ನೀರು ಸಂಗ್ರಹವಾದರೆ 30 ಕಿ.ಮೀ ದೂರದವರೆಗೂ ನೀರಿನ ಅಂತರ್ಜಲ ವೃದ್ಧಿಯಾಗಲಿದೆ. ನಲವತ್ತು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದೆ. ನೀರು ಹರಿವು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಧರ್ಮಪುರ ಮತ್ತು ಪಿ.ಡಿ.ಕೋಟೆಯತ್ತ ಜಮಾಯಿಸುತ್ತಿದ್ದಾರೆ.

ಧರ್ಮಪುರ ಕೆರೆಗೆ ಅಪಾರವಾಗಿ ನೀರು ಬರುತ್ತಿದ್ದ ಕೆರೆಯ ಕೋಡಿ ಮೇಲೆ ಎರಡು ಅಡಿ ನೀರು ಹೋಗುತ್ತಿದೆ. ಇನ್ನೂ ಆಂಧ್ರ ಪ್ರದೇಶದ ಹತ್ತು ಕೆರೆಗಳು ಕೋಡಿ ಬಿದ್ದು ನೀರು ಧರ್ಮಪುರ ಕೆರೆ ಸೇರುತ್ತಿದೆ. ಕೆರೆಯ ಕೋಡಿ ನೀರು ಕ್ಷಣ ಕ್ಷ ಣಕೂ ಹೆಚ್ಚಾಗುತ್ತಿದ್ದು, ಶೀಘ್ರವೇ ಕೋಡಿಯ ಪಕ್ಕದಲ್ಲಿ ಮನೆಗಳನ್ನು ತೆರವು ಬಳಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವರು ತೆರವುಗೊಳಿಸಬೇಕು. ಇಲ್ಲವಾದರೇ ಆಪತ್ತು ಕಟ್ಟಿಟ್ಟ ಬುತ್ತಿ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಬಂದು
ಪರಿಶೀಲಿಸಬೇಕು ಎಂದು ಧರ್ಮಪುರ ಫೀಡರ್‌ ಚನಲ್‌ ಹೋರಾಟ ಸಮಿತಿ ಅಧ್ಯಕ್ಷ ಶ್ರವನಗೆರೆ ಎಂ.ಶಿವಣ್ಣ ಒತ್ತಾಯಿಸಿದ್ದಾರೆ.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಜೆಡಿಎಸ್‌ ಮುಖಂಡ ಟಿ.ರಂಗಸ್ವಾಮಿ, ಪಿ.ಡಿ. ಕೋಟೆ ಗ್ರಾಪಂ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ, ಜಿಪಂ ಮಾಜಿ ಅಧ್ಯಕ್ಷ ಎಂ.ಜಯಣ್ಣ, ಯಾದವ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜೆಡಿಎಸ್‌ ಮುಖಂಡ ಶಿವಪ್ರಸಾದ ಗೌಡ, ಎಸ್‌.ಆರ್‌. ತಿಪ್ಪೇಸ್ವಾಮಿ, ಶ್ರವಣಗೆರೆ ಗೌಡಪ್ಪ, ಕೃಷ್ಣಪುರದ ಕೃಷ್ಣಮೂರ್ತಿ, ಗ್ರಾಪಂ, ಅಧ್ಯಕ್ಷ ಆರ್‌.ಕೆ.ರಾಧಾ, ಎಂಜಿನಿಯರ್‌ ರಮೇಶ್‌, ಸುಚ್ಚಿ ಮಂಜುನಾಥ್‌, ಧರ್ಮಪುರ ಸತ್ಯ ನಾರಾಯಣಗೌಡ, ಅರಳಿಕೆರೆ ಗಂಗೇಗೌಡ, ಧರ್ಮಪುರ ಅಪ್ಪಾಜಿಗೌಡ, ಕುಂಬಾರ ರಂಗಣ್ಣ, ಕುಮಾರ್‌ ಸಣ್ಣಪ್ಪ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next