Advertisement
1990ರಲ್ಲಿ ಯುದ್ಧ ಸಂದರ್ಭ ಕುವೈಟ್‌ನಿಂದ ನಡೆಸಿದ್ದ ಏರ್‌ಲಿಫ್ಟ್ ಇದುವರೆಗೆ ಭಾರತದ ಪಾಲಿಗೆ ಬಹುದೊಡ್ಡ ದಾಖಲೆ ಆಗಿತ್ತು. ಈಗ ಮೇ 7ರಿಂದ 13ರ ವರೆಗೆ ನಿರಂತರವಾಗಿ 64 ವಿಮಾನಗಳಲ್ಲಿ ಪ್ರಜೆ ಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದಿಳಿಯಲಿದ್ದಾರೆ. ಮೊದಲ ಹಂತದಲ್ಲಿ 13 ದೇಶಗಳಲ್ಲಿದ್ದ 14,800ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗುತ್ತದೆ.
ದಿನ ಒಂದು: 10 ವಿಮಾನಗಳಲ್ಲಿ 2,300 ಭಾರ ತೀಯರು ತಾಯ್ನಾಡಿಗೆ ಮರಳಲಿದ್ದಾರೆ. ಫಿಲಿಪ್ಪೀನ್ಸ್, ಸಿಂಗಾಪುರ, ಬಾಂಗ್ಲಾದೇಶ, ಯುಎಇ, ಸೌದಿ ಅರೇಬಿಯಾ, ಅಮೆರಿಕ, ಬ್ರಿಟನ್, ಮಲೇಷ್ಯಾ, ಕತಾರ್‌ನ ಭಾರತೀಯರು ಮೊದಲ ದಿನದಿಂದಲೇ ಏರ್‌ಲಿಫ್ಟ್ ಪ್ರಯೋಜನ ಪಡೆಯಲಿದ್ದಾರೆ. ದಿನ ಎರಡು: ಗಲ್ಫ್ ಸಹಿತ 9 ದೇಶಗಳಿಂದ ಮರಳುವ ಸುಮಾರು 2,050 ಭಾರತೀಯರು ಚೆನ್ನೈ, ಕೊಚ್ಚಿ, ಮುಂಬಯಿ, ಅಹ್ಮದಾಬಾದ್ ಮತ್ತು ಬೆಂಗಳೂರಿನಲ್ಲಿ ಇಳಿಯಲಿದ್ದಾರೆ.
Related Articles
Advertisement
ನಾಲ್ಕನೇ ದಿನ: ಅಮೆರಿಕ, ಇಂಗ್ಲೆಂಡ್ ಮತ್ತು ಯುಎಇ ಸೇರಿದಂತೆ 8 ವಿವಿಧ ದೇಶಗಳಲ್ಲಿ ಸಿಲುಕಿ ರುವ 1,850 ಪ್ರಜೆಗಳು ಬರಲಿದ್ದಾರೆ.
ಪರೀಕ್ಷೆ ಕಡ್ಡಾಯಪ್ರತೀ ವಿಮಾನದಲ್ಲೂ 200- 300 ಪ್ರಯಾಣಿಕರು ಇರಲಿದ್ದಾರೆ. ವಿಮಾನ ವೇರುವ ಮುನ್ನ ಜ್ವರ, ಕೆಮ್ಮು, ಮಧುಮೇಹ ಅಥವಾ ಉಸಿರಾಟದ ತೊಂದರೆ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಸೋಂಕುರಹಿತ ಪ್ರಯಾಣಿಕರಿಗೆ ಮಾತ್ರವೇ ಅವಕಾಶ. ತಾಯ್ನಾಡಿಗೆ ಮರಳಿದ ಮೇಲೆ ಎಲ್ಲರೂ 14 ದಿನಗಳ ಕ್ವಾರಂಟೈನ್ ಮತ್ತು ಆರೋಗ್ಯ ಸಚಿವಾಲಯದ ಅಗತ್ಯ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಸೂಚಿಸಿದ್ದಾರೆ. ಹೀಗೆ ಮರಳಿದವರು ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಗೃಹ ಸಚಿವಾಲಯ ಸೂಚಿ ಸಿದೆ. ರಾಜ್ಯಗಳು ನಿಗಾ ವಹಿಸುವಂತೆಯೂ ಸೂಚನೆ ರವಾನೆಯಾಗಿದೆ. ಕೋವಿಡ್-19ದಿಂದ ಅತಿಹೆಚ್ಚು ನಲುಗಿರುವ ಅಮೆರಿಕದಲ್ಲಿ ಭಾರತೀಯರ ಸ್ಥಳಾಂತರಕ್ಕೆ ಈಗಾಗಲೇ ಆನ್‌ಲೈನ್ ನೋಂದಣಿ ಆರಂಭಗೊಂಡಿದೆ. ನೌಕಾಪಡೆ ತಯಾರಿ ಹೇಗಿದೆ?
11 ಹಡಗುಗಳು ಕಾರ್ಯೋನ್ಮುಖವಾ ಗಿವೆ. ಐಎನ್‌ಎಸ್ ಜಲಾಶ್ವ ಈಗಾಗಲೇ ಕೊಲ್ಲಿ ರಾಷ್ಟ್ರಗಳತ್ತ ಹೊರಟಿದೆ. 300- 350 ಪ್ರಯಾಣಿಕರ ಸಾಮರ್ಥ್ಯವಿರುವ ಐಎನ್‌ಎಸ್ ಶಾರ್ದೂಲ, ಐಎನ್‌ಎಸ್ ಮಾಗರ್ ಮಾಲ್ಡೀವ್ಸ್ ಕಡೆಗೆ ಮುನ್ನಡೆದಿವೆ. ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ತರಲು ಕನಿಷ್ಠ 2-3 ದಿನಗಳು ಬೇಕು. ಮೇ 7ರಂದು ಇವರೆಲ್ಲ ತಾಯ್ನಾಡು ತಲುಪುವ ಸಾಧ್ಯತೆ ಇದ್ದು, ಕೇರಳದ ಕೊಚ್ಚಿ ಯಲ್ಲಿ ಕ್ವಾರಂಟೈನ್ ಮತ್ತು ಮುಂದಿನ ಪ್ರಯಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಈಗಾಗಲೇ ಚೀನ, ಜಪಾನ್, ಇಟಲಿ ಮತ್ತು ಇರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 2,500 ಪ್ರಜೆಗಳನ್ನು ಭಾರತ ಯಶಸ್ವಿಯಾಗಿ ತಾಯ್ನಾಡಿಗೆ ಕರೆಸಿಕೊಂಡಿದೆ. ಮಾರ್ಗಸೂಚಿ ಪ್ರಕಟ
ವಿದೇಶದಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆ ತರುವುದಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಕೇವಲ ವೈದ್ಯಕೀಯ ತುರ್ತು, ಗರ್ಭಿಣಿಯರು, ವೃದ್ಧರು,ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿ ದ್ದರೆ,ಅವರನ್ನು ಕಾಣಲು ಬರುವವರು, ವಿದ್ಯಾರ್ಥಿಗಳು, ಕೆಲಸ ಕಳೆದುಕೊಂಡಿರುವ ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಎಲ್ಲೆಲ್ಲಿಗೆ ಎಷ್ಟೆಷ್ಟು ವಿಮಾನ?
ಯುಎಇಗೆ 10, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಬಾಂಗ್ಲಾದೇಶಗಳಿಗೆ ತಲಾ 7, ಸೌದಿ ಅರೇಬಿಯಾ, ಸಿಂಗಾಪುರಗಳಿಗೆ ತಲಾ 5 ಮತ್ತು ಬಹ್ರೈನ್, ಒಮಾನ್, ಕತಾರ್‌ಗಳಿಗೆ ತಲಾ 2 ವಿಮಾನಗಳು ಹಾರಲಿವೆ. ಯಾವ್ಯಾವ ದೇಶಕ್ಕೆ ಯಾರು ಸಾರಥಿ?
ಅಮೆರಿಕ: ಏರ್ ಇಂಡಿಯಾ
ಬಾಂಗ್ಲಾದೇಶ: ವಾಯುಪಡೆ ವಿಮಾನ
ಯುಎಇ: ಏರ್ ಇಂಡಿಯಾ, ಏರ್ ಇಂಡಿಯಾ
ಎಕ್ಸ್‌ಪ್ರೆಸ್, ಐಎನ್‌ಎಸ್ ಜಲಾಶ್ವ
ಅಬುಧಾಬಿ, ದುಬಾೖ: ಏರ್ ಇಂಡಿಯಾ,
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟಿಕೆಟ್ ದರ ಎಷ್ಟು ?
ಭಾರತವು ಏರ್‌ಲಿಫ್ಟ್ ವಾಣಿಜ್ಯ ವಿಮಾನಗಳನ್ನು ಬಳಸಿಕೊಂಡಿದ್ದು, ಪ್ರತೀ ಟಿಕೆಟ್‌ಗೆ ರಿಯಾಯಿತಿ ದರ ಸೂಚಿಸಿದೆ.
ದುಬಾೖ, ಅಬುಧಾಬಿ- ಭಾರತ : 13,000 15,000
ಢಾಕಾ-ದಿಲ್ಲಿ- ಶ್ರೀನಗರ: 12,000
ಅಮೆರಿಕ-ದಿಲ್ಲಿ, ಬೆಂಗಳೂರು :1,00,000
ಕುವೈಟ್-ಹೈದರಾಬಾದ್: 20,000
ಸಿಂಗಾಪುರ-ಬೆಂಗಳೂರು : 18,000
ಲಂಡನ್- ದಿಲ್ಲಿ, ಬೆಂಗಳೂರು: 50,000 ನೋಂದಣಿ ಎಷ್ಟು? (ಇಲ್ಲಿಯವರೆಗೆ)
ಗಲ್ಫ್ ರಾಷ್ಟ್ರಗಳು: 2,00,000+
ಅಮೆರಿಕ: 23,000 ಮಾಸ್ಕೋ: 11,000
ನ್ಯೂಜಿಲೆಂಡ್: 1,200 ನೈರೋಬಿ: 390