Advertisement

ಮಾನವ ತತ್ವಗಳ ಹರಿಕಾರ ಸಿದ್ಧಗಂಗಾ ಶ್ರೀ

06:59 AM Jan 23, 2019 | |

ಕಲಬುರಗಿ: ನಡೆದಾಡುವ ದೇವರು, 21ನೇ ಶತಮಾನದ ಅಭಿನವ ಬಸವಣ್ಣ ಎಂದು ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗಳು ಜಗತ್ತಿನ ಎಂಟನೇ ಅದ್ಭುತ. ಸಿದ್ದಗಂಗಾ ಶ್ರೀಗಳಲ್ಲಿ ಯಾವುದೇ ಜಾತಿ ಬೇಧ ಇರಲಿಲ್ಲ ಎಂದು ಶ್ರೀಶೈಲ ಸಾರಂಗಧರ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

Advertisement

ನಗರದ ಸುಲಫಲ ಮಠದಲ್ಲಿ ಮಂಗಳವಾರ ಶಹಾಬಜಾರದ ನಾಗರಿಕರು ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

111 ವರ್ಷಗಳ ಕಾಲ ಜೀವಿಸಿದ ಶ್ರೀಗಳಲ್ಲಿ ಬಡವರು, ನಿರ್ಗತಿಕರು, ಅನಾಥರು, ಬಿದ್ದವರು, ಬೀಳುತ್ತಿರುವರನ್ನು ಮೇಲೆತ್ತುವ ಧರ್ಮವಿತ್ತು. ನಾವು ನಡೆದಾಡುವ ಭೂಮಿ, ಉಸಿರಾಡುವ ಗಾಳಿ, ಕುಡಿಯುವ ನೀರು, ತೊಡುವ ಬಟ್ಟೆ, ಉಣ್ಣುವ ಅನ್ನ ಒಂದೇ. ನಾವೆಲ್ಲರೂ ಒಂದೇ ಎನ್ನುವ ಮಾನವ ತತ್ವ ಹೇಳಿಕೊಟ್ಟವರು ಡಾ| ಶಿವಕುಮಾರ ಸ್ವಾಮೀಜಿಗಳು ಎಂದು ಹೇಳಿದರು.

ತ್ರಿವಿಧ ದಾಸೋಹಿಗಳಾಗಿ ಡಾ| ಶಿವಕುಮಾರ ಸ್ವಾಮೀಜಿ ಮಾಡಿದಂತಹ ಕಾರ್ಯಗಳು ಎಂದೆಂದಿಗೂ ಶಾಶ್ವತವಾಗಿರುತ್ತವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕೆಂದು ತಿಳಿಸಿದರು.

ಚವದಾಪುರಿ ಹಿರೇಮಠ ರಾಜಶೇಖರ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮಿ, ಚಿಂಚನಸೂರು ಶ್ರೀ, ಶ್ರೀ ಗುರು ಬಸವ ಮಠದ ಶ್ರೀಗಳು, ರಟಕಲ್‌ ಶ್ರೀಗಳು, ಬಿಜೆಪಿ ಯುವ ಮುಖಂಡ ಚಂದು ಪಾಟೀಲ, ಮಲ್ಲಿಕಾರ್ಜುನ ಖೇಮಜಿ, ಶರಣು ರೇವೂರ, ರಾಜು ಲೇಂಗಟಿ, ವೀರಣ್ಣ ಗೊಳೇದ, ಶಿವಲಿಂಗ ಹಳಿಮನಿ, ಶಿವಾನಂದ ಭಂಡಾರಿ, ಪ್ರಭು ಹಾದಿಮನಿ, ಚಂದ್ರಕಾಂತ ಹಂಗರಗಿ, ಶಾಂತಾ ಖೇಮಜಿ, ರಾಜು, ಲಿಂಗಣ್ಣ ಮಾಳಿ, ಶಾಂತಕುಮಾರ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next