Advertisement

ಪತ್ನಿ ಹೇಳಿದಕ್ಕೆ ಕೊಂದೆ

11:52 AM Jun 27, 2018 | |

ಬೆಂಗಳೂರು: ನಾನಾಗಿಯೇ ಪತ್ನಿ ಮೇಲೆ ಗುಂಡು ಹಾರಿಸಿಲ್ಲ. ಆಕೆ ಹೇಳಿದಕ್ಕೆ ಗುಂಡು ಹಾರಿಸಿದೆ.

Advertisement

ಇದು, ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಾಟ ವಿಚಾರದಲ್ಲಿ ಪತ್ನಿಯನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಹಾಸನ ಮೂಲದ ಉದ್ಯಮಿ ಗಣೇಶ್‌ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆ.

ಸಕಲೇಶಪುರದ‌ ಆಸ್ತಿಯನ್ನು ಮಾರಾಟ ಮಾಡಿ ನಗರಕ್ಕೆ ಬಂದು ರಿಯಲ್‌ ಎಸ್ಟೇಟ್‌, ರೆಸಾರ್ಟ್‌ ವ್ಯವಹಾರ ನಡೆಸುತ್ತಿದ್ದೆ. ಆರಂಭದಲ್ಲಿ ಉತ್ತಮ ಸಂಪಾದನೆ ಇತ್ತು. ಅದಕ್ಕಾಗಿ 55 ಕೋಟಿ ಸಾಲ ಮಾಡಿಕೊಂಡಿದ್ದೆ.

ಆದರೆ, ಅಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ ಸಾಲದ ಸುಳಿಗೆ ಸಿಲುಕಿದೆ. ಹೀಗಾಗಿ ಸಾಲಗಾರರು ಮನೆ, ರೆಸಾರ್ಟ್‌ಗೆ ಬರುತ್ತಿದ್ದರು. ಸಾಲ ತೀರಿಸಲು ಸಾಧ್ಯವಿಲ್ಲ ಎಂದಾಗ, ಆಕೆಯೇ ಮಕ್ಕಳು ಸೇರಿ ಎಲ್ಲರೂ ಸಾಯೋಣ ಎಂದಿದ್ದಳು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ಆಕೆ ಹೇಳಿದಕ್ಕೆ ಗುಂಡು ಹಾರಿಸಿ ಕೊಂದೆ. ಬಳಿಕ ಮಕ್ಕಳನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಇದಕ್ಕಾಗಿ ಶಾಲೆಯಲ್ಲಿದ್ದ ಮಕ್ಕಳನ್ನು ಅಮ್ಮ ಕರೆಯುತ್ತಿದ್ದಾಳೆ ಎಂದು ತೋಟದ ಮನೆಗೆ ಕೆರೆದೊಯ್ದೆ.

Advertisement

ಗುಂಡು ಹಾರಿಸಿದೆ. ಮಕ್ಕಳ ನರಳಾಟ ತಾಳಲಾರದೆ ಆಸ್ಪತ್ರೆಗೆ ದಾಖಲಿಸಲು ಹೊರಟಿದ್ದೆ ಆ ವೇಳೆ ಪೊಲೀಸರು ಬಂಧಿಸಿದರು ಎಂದು ವಿಚಾರಣೆ ವೇಳೆ ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next