Advertisement

20 years in power ವ್ಯರ್ಥ: ಬಿಹಾರ ಸಿಎಂ ನಿತೀಶ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

08:34 PM Aug 04, 2024 | Team Udayavani |

ಪಾಟ್ನಾ:”ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯು ಜೆಡಿಯು ವನ್ನು ಅವಲಂಬಿತವಾಗಿದ್ದರೂ ಬಿಹಾರಕ್ಕೆ ಸ್ಪಷ್ಟವಾದ ಪ್ರಯೋಜನಗಳನ್ನು ಪಡೆಯಲು ವಿಫಲವಾಗಿದ್ದಾರೆ” ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಭಾನುವಾರ(ಆಗಸ್ಟ್ 4) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್ ”JD(U) ನಾಯಕ ನಿತೀಶ್ ಕುಮಾರ್ ಅವರು ಕೇಂದ್ರ ಸಚಿವ ಸಂಪುಟದಲ್ಲಿ ತಮ್ಮ ಪಕ್ಷದ ಪಾಲಿನ ಬಗ್ಗೆ ಚಿಂತಿತರಾಗಿದ್ದರು. ರಾಜ್ಯವನ್ನು ಕೈಗಾರಿಕವಾಗಿ ಪುನರ್ವಸತಿ ಮಾಡಲು ತಮ್ಮ ಸ್ಥಾನವನ್ನು ಸದುಪಯೋಗಪಡಿಸಿಕೊಳ್ಳುವ ಬದಲು ರಾಜ್ಯ ಮಟ್ಟದಲ್ಲಿ ವಿರೋಧಿಗಳೊಂದಿಗೆ ಸಂಖ್ಯೆಗಳನ್ನು ಹೊಂದಿಸಲು ಬಿಜೆಪಿಯೊಂದಿಗೆ ತಮ್ಮ ಪ್ರಭಾವವನ್ನು ಬಳಸುತ್ತಿದ್ದರು’ ಎಂದು ಹೇಳಿದ್ದಾರೆ.

“ಜನರು ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ವರ್ಷಗಳಿಂದ ನಶಿಸುತ್ತಿರುವ 20 ಸಕ್ಕರೆ ಕಾರ್ಖಾನೆಗಳ ಮರುಸ್ಥಾಪನೆಗೆ ನಿತೀಶ್ ಕುಮಾರ್ ಏಕೆ ಒತ್ತಾಯಿಸಲಿಲ್ಲ ಎಂದು ನಾನು ಪ್ರಶ್ನಿಸುತ್ತೇನೆ? ಅವರು ಸುಮಾರು 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ವ್ಯರ್ಥ ಅವಕಾಶ ಎಂದು ನೆನಪಿಸಿಕೊಳ್ಳಬಹುದು ”ಎಂದುI-PAC ಸಂಸ್ಥಾಪಕ (Indian Political Action Committee) ಕಿಡಿ ಕಾರಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ನಿತೀಶ್ ಕುಮಾರ್ ಅವರ ಮಾಜಿ ರಾಜಕೀಯ ಸಲಹೆಗಾರರಾಗಿದ್ದರು.ಈಗ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next