Advertisement

ವಾಣಿವಿಲಾಸ ಸಾಗರದಲ್ಲಿ 107 ಅಡಿ ನೀರು ಸಂಗ್ರಹ

02:18 PM Sep 15, 2021 | Team Udayavani |

ಹಿರಿಯೂರು: ಬಯಲುಸೀಮೆಯ ಜೀವನಾಡಿವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವವಾಣಿವಿಲಾಸ ಸಾಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಸೆ. 13ರಂದು 107 ಅಡಿ ನೀರು ಹರಿದು ಬಂದಿದೆ.

Advertisement

ಹತ್ತುವರ್ಷಗಳ ಬಳಿಕ ನೀರಿನ ಮಟ್ಟ 107 ಅಡಿ ಇದೆ.ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ ಗಿರಿಸುತ್ತಮುತ್ತ, ಕಡೂರು, ಬೀರೂರು, ಅಜ್ಜಂಪುರ,ತರೀಕೆರೆ, ಹೊಸದುರ್ಗ ತಾಲೂಕಿನಾದ್ಯಂತ ಸುರಿದಮಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿಅಜ್ಜಂಪುರ ಸಮೀಪದ ಪಂಪ್‌ ಹೌಸ್‌ ನಿಂದ ನಿತ್ಯನೀರನ್ನು ಲಿಫ್ಟ್‌ ಮಾಡುತ್ತಿರುವುದರಿಂದಾಗಿ ಬಹುತೇಕಕೆರೆ ಕಟ್ಟೆ, ಬ್ಯಾರೇಜ್‌ ಗಳು ಭರ್ತಿಯಾಗಿವೆ.

ಈ ನೀರುವಾಣಿ ವಿಲಾಸ ಸಾಗರಕ್ಕೆ ಹರಿದು ಬರುತ್ತಿದೆ. ಮುಂದಿನಒಂದು ವಾರದಲ್ಲಿ 110 ಅಡಿಗೆ ಹೆಚ್ಚುವ ನಿರೀಕ್ಷೆಯಿದೆ ಎಂಬುದು ನೀರಾವರಿ ಇಲಾಖೆ ಅಧಿ ಕಾರಿಗಳಅಭಿಪ್ರಾಯ.ಗುಡ್ಡ, ಬೆಟ್ಟಗಳ ಮಧ್ಯ ಸ್ವಾಭಾವಿಕವಾಗಿನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನನೀರು ಹರಿದು ಬಂದಿರುವುದರಿಂದ ನೋಡಲುನಯನ ಮನೋಹರವಾಗಿದೆ. ಡ್ಯಾಂ ಬಳಿಇರುವ ಔಷಧ ವನ ಕೂಡ ನೋಡುಗರಿಗೆ ಖುಷಿನೀಡುತ್ತದೆ.

ಹಿರಿಯೂರು ಪಟ್ಟಣದಿಂದಹೊಸದುರ್ಗ ರಸ್ತೆಯಲ್ಲಿ 17 ಕಿಮೀ ಸಾಗಿದರೆಸಿಗುವುದೇ ಭಾರತದ ಭೂಪಟವನ್ನು ಹೋಲುವವಾಣಿವಿಲಾಸ ಸಾಗರ ಸಿಗುತ್ತದೆ. ಕೊರೊನಾಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಕಡೆ ಮುಖ ಮಾಡಿರುವ ಯುವಕರಿಗೆ ತುಂಬಿಹರಿಯುತ್ತಿರುವ ವಾಣಿವಿಲಾಸ ಸಾಗರ ಕೃಷಿಚಟುವಟಿಕೆಗಳಲ್ಲಿ ತೊಡಗಲು ಪ್ರೇರಣೆ ನೀಡಿದೆ.ಇದರಿಂದ ತಾಲೂಕಿನಲ್ಲಿ ಮತ್ತೆ ಹಸಿರು ಪರಿಸರಸೃಷ್ಟಿಯಾಗುವ ಆಸೆ ಚಿಗುರೊಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next