Advertisement

ಕೋವಿಡ್ ನಿರ್ಮೂಲನೆಗೆ ಪಣ ತೊಡಿ

07:06 PM May 15, 2020 | Naveen |

ಹಿರಿಯೂರು: ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಈಗ 6 ಕೋವಿಡ್ ಪ್ರಕರಣಗಳಿರುವುದು ನೆಮ್ಮದಿಯಾಗಿದ್ದ ಜನರಲ್ಲಿ ಆತಂಕ ಮೂಡಿಸಿದೆ. ಕೋವಿಡ್ ರೋಗ ನಿರ್ಮೂಲನೆಯಲ್ಲಿ ಕೋವಿಡ್ ವಾರಿಯರ್ಸ್‌ ಜೊತೆಗೆ ಜಿಲ್ಲೆಯ ಪ್ರತಿಯೊಬ್ಬರೂ ಕೈಜೋಡಿಸಬೇಕು. ಈ ಮೂಲಕ ಕೋವಿಡ್ ಹರಡುವಿಕೆ ತಡೆಗಟ್ಟಲು ಪಣ ತೊಡಬೇಕುಎಂದು ಸಿಪಿಐ ರಾಘವೇಂದ್ರ ಕರೆ ನೀಡಿದರು.

Advertisement

ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಟ್‌ ಪ್ರಮುಖರ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ನಗರದ ನಾಗರಿಕರು ಬೇರೆ ರಾಜ್ಯದ ಜಿಲ್ಲೆಗಳಿಂದ ಮಾಹಿತಿ ಇಲ್ಲದೆ ಪ್ರವೇಶ ಮಾಡಿರುವ ವ್ಯಕ್ತಿಗಳ ಬಗ್ಗೆ ಇಲಾಖೆ ಗಮನಕ್ಕೆ ತರಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ತಪಾಸಣೆಗೆ ಒಳಪಡಬೇಕು. ಇದರಲ್ಲಿ ಯಾವುದೇ ಭಯ, ಸಂಕೋಚ, ನಿರ್ಲಕ್ಷ್ಯ ಬೇಡ ಎಂದರು.

ಪಿಎಸ್‌ಐ ನಾಗರಾಜ್‌ ಮಾತನಾಡಿ, ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದು ವ್ಯಾಪಾರ ವಹಿವಾಟು ಅಗತ್ಯತೆಗಳ ಪೂರೈಕೆಗಳಿಗೆ ಮಾತ್ರವೇ ಹೊರತು ಅನಗತ್ಯ ಓಡಾಟಕ್ಕಲ್ಲ. ಅನವಶ್ಯಕ ಪಾರ್ಟಿ, ಔತಣಕೂಟ, ಸಭೆ, ಸಮಾರಂಭ ಮಾಡಬಾರದು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೊರೊನಾವನ್ನು ಹೊಡೆದೊಡಿಸಬೇಕು ಎಂದು ತಿಳಿಸಿದರು.

ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಪರಮೇಶ್‌, ಎಎಸ್‌ ಐಗಳಾದ ನಿರಂಜನಮೂರ್ತಿ, ಪ್ರಭಾಕರ ರೆಡ್ಡಿ, ಅಸ್ಲಾಂ ಬಾಷಾ, ಸಿಬ್ಬಂದಿ ಶಿವಮೂರ್ತಿ, ಕುಮಾರ್‌, ವಸಂತ್‌, ಮಹಂತೇಶ್‌, ಕಮಲಾಕರ್‌, ಕೇಶವಮೂರ್ತಿ, ಬೀಟ್‌ ಪ್ರಮುಖರಾದ ಪಾಂಡುರಂಗಪ್ಪ, ಜಿ.ಸಿ.ನಿತ್ಯಾನಂದ್‌, ನಾಗರಾಜ ನಾಯ್ಕ, ತಿಪ್ಪೇಸ್ವಾಮಿ, ಸರವಣ, ಚಿರಂಜೀವಿ, ಶಶಿಕುಮಾರ್‌, ನೀಲಕಂಠಮೂರ್ತಿ, ಎಚ್‌.ವಿ. ಲೋಕೇಶ್‌, ವೀಣಾ, ಮಂಜುನಾಥ್‌, ಸಿದ್ದಿಕ್‌, ಮಹಮ್ಮದ್‌, ಅಬ್ದುಲ್‌ ರಹಮಾನ್‌, ಎಂ.ಡಿ. ಚಂದ್ರಶೇಖರ್‌, ಬಸವರಾಜ್‌, ಟಿ. ಷಣ್ಮುಖ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next