Advertisement

ಹಿರಿಯಡಕ : ಎ. 16-25: ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

07:05 AM Mar 23, 2018 | Karthik A |

ಹೆಬ್ರಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇಗುಲವು 25 ಕೋ. ರೂ. ವೆಚ್ಚದಲ್ಲಿಜೀರ್ಣೋದ್ಧಾರಗೊಂಡಿದ್ದು, ಎ. 16 ರಿಂದ 25ರವರೆಗೆ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಮಾಂಬೆಟ್ಟು ಗೋವರ್ಧನದಾಸ್‌ ಹೆಗ್ಡೆ ಹೇಳಿದರು. ಅವರು ಮಾ. 21ರಂದು ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ನಟರಾಜ್‌ ಹೆಗ್ಡೆ ಕಾರ್ಯ ಕ್ರಮದ ವಿವರ ನೀಡಿದರು. ಎ. 20ರಂದು ಬೆಳಿಗ್ಗೆ ಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠೆ, ಸಪರಿವಾರ ವೀರಭದ್ರ ದೇವರ ಪ್ರತಿಷ್ಠೆ, ನಾಗದೇವರ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಲಿದೆ. ಎ. 22ರಂದು
ಬ್ರಹ್ಮಲಿಂಗೇಶ್ವರ ದೇವರಿಗೆ ಹಾಗೂ ವೀರಭದ್ರ ದೇವರಿಗೆ ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಎ. 16ರಂದು ಸಂಜೆ ಹೊರೆಕಾಣಿಕೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಎ. 16ರಿಂದ 25ರವರೆಗೆ ಪ್ರತಿದಿನ ಸಂಜೆ 6ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎ. 19ರಂದು ‘ತರಂಗ’ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಅವರ ಅಧ್ಯಕ್ಷತೆಯಲ್ಲಿ ಮಾತೃ ಸಂಗಮ, ಎ. 20ರಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಂತ ಸಂಗಮ, ಎ. 21ರಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ನಿಟ್ಟೆ ವಿ.ವಿ. ಕುಲಪತಿ ಎನ್‌. ವಿನಯ್‌ ಹೆಗ್ಡೆ ಅಧ್ಯಕ್ಷತೆಯಲ್ಲಿ ರಾಜಧರ್ಮ ಸಭೆ, ಎ. 22ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆಯಲ್ಲಿ ಸುಧರ್ಮ ಸಭೆ, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಎ. 25ರಂದು ಶ್ರೀ ಕ್ಷೇತ್ರ
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಶುಭ ಹಾರೈಸಲಿದ್ದಾರೆ ಎಂದರು.

ಜೀರ್ಣೋದ್ಧಾರಗೊಂಡ ಕ್ಷೇತ್ರದಲ್ಲಿ ಕಲ್ಲಿನ ಕೆತ್ತನೆ, ಆಕರ್ಷಕ ವಾಸ್ತು, ಕಾಷ್ಠಶಿಲ್ಪಗಳು ವಿಶೇಷ ಆಕರ್ಷಣೆಯಾಗಿವೆ ಎಂದು ಪ್ರಾಜೆಕ್ಟ್ ಕನ್ಸಲ್ಟೆಂಟ್‌ ಕುತ್ಯಾರು ಪ್ರಸಾದ್‌ ಶೆಟ್ಟಿ ಹೇಳಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಂಬೀಡು ಹರ್ಷವರ್ಧನ ಹೆಗ್ಡೆ, ಕಾರ್ಯದರ್ಶಿ ಪರೀಕ ಅರಮನೆ ಸೋಮನಾಥ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next