Advertisement
ಜನತೆ ಹರ್ಷ:45 ವರ್ಷದಿಂದ ಕೆರೆ ಒಮ್ಮೆಯೂ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯ ಲಿಲ್ಲ. ನಿರಂತರ ಬರಗಾಲದಿಂದ ಈ ಭಾಗದಲ್ಲಿ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿತವಾಗಿದ್ದು ರೈತರ ಸ್ಥಿತಿ ಹೇಳತೀರದಾಗಿತ್ತು. ತೆಂಗಿನ ಮರಗಳ ಸುಳಿ ಹಾರಿಹೋಗಿದ್ದಲ್ಲದೆ ಕೃಷಿ ಮಾಡುವ ಗದ್ದೆಗಳು ಪಾಳು ಭೂಮಿಯಾಗಿ ಮಾರ್ಪಟ್ಟಿದ್ದವು. ಆದರೆ, ನುಗ್ಗೇಹಳ್ಳಿ ಏತ ನೀರಾವರಿಯಿಂದ ಜೀವಜಲ ಕೆರೆಗೆ ಹರಿದು ಭರ್ತಿಯಾಗಿರುವುದು ಹಲವು ಗ್ರಾಮಸ್ಥರಿಗೆ ಹರ್ಷ ಮೂಡಿಸಿದೆ.
Related Articles
Advertisement
ಬಿಜೆಪಿ ಸರ್ಕಾರದ ಕೊಡುಗೆ: 2012ರಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ನೀರಾವರಿ ಮಂತ್ರಿ ಬಸವರಾಜು ಬೊಮ್ಮಾಯಿ, ಅಂದಿನ ಶಾಸಕ ಪುಟ್ಟೇಗೌಡ, ಜಿಪಂ ಸದಸ್ಯ ಎಂ.ಎ.ರಂಗಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರ ಪ್ರತಿಫಲವೂ ಇದೆ ಎಂದು ಸ್ಥಳಿಯ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಬಹಿರಂಗವಾಗಿ ಹೇಳುತ್ತಿದ್ದಾರೆ.
ಹೊಯ್ಸಳರ ಲಾಂಛನ : ಹೊಯ್ಸಳ ಕಾಲದಲ್ಲಿ ನಿರ್ಮಾಣ ಆಗಿರುವುದಕ್ಕೆ ಸಾಕ್ಷಿಯಾಗಿ ಕೆರೆ ಮಧ್ಯದಲ್ಲಿ ಲಾಂಛನ ಇದೆ. ಕೆರೆ ನಿರ್ಮಾಣ ಸಮಯ ದಲ್ಲಿ ಲಕ್ಷ್ಮೀ ಕಲ್ಲು ಪ್ರತಿಷ್ಠಾಪಿಸಿ ಅದರ ಮೇಲೆ ಹೊಯ್ಸಳ ಲಾಂಛನ ಇಡಲಾಗಿದೆ. ಇದೇ ಕಲ್ಲಿನ ಮೇಲೆ ಲಕ್ಷ್ಮೀ ಮೂರ್ತಿ ಯನ್ನು ಹೊಯ್ಸಳರು ಪ್ರತಿಷ್ಠಾಪನೆ ಮಾಡಿ ರುವುದು ಇಂದಿಗೂ ಕಾಣಬಹುದಾಗಿದ್ದು ಕೆರೆಯನ್ನು ದೇವರಂತೆ ಭಕ್ತಿಯಿಂದ ನೋಡಬೇಕು ಎಂಬ ಸಂದೇಶ ಸಾರುತ್ತಿದೆ
ಮೈಸೂರು ಅರಸರ ಕೊಡುಗೆ : ನುಗ್ಗೇಹಳ್ಳಿ ಹಿರೇಕೆರೆ ಮೈಸೂರು ಅರಸರ ಕೊಡುಗೆ ಸಾಕಷ್ಟಿದೆ ಹೊಯ್ಸಳರ ಆಳ್ವಿಕೆ ನಂತರ ಕೆರೆ ಅವಸಾನದ ಸ್ಥಿತಿ ತಲುಪಿತ್ತು. ಆದರೆ, 1893ರಲ್ಲಿ ಮೈಸೂರಿನ ದಿವಾನರು ಭೇಟಿ ನೀಡಿ ಪುನಶ್ಚೇತನ ಮಾಡಿದ್ದರು. ನಂತರ ದಿನದಲ್ಲಿ ಈ ಭಾಗದಲ್ಲಿನ ಅಮೃತ್ ಮಹಲ್ ತಳಿ ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿದಾಗಲೆಲ್ಲಾ ಅರಸು ಹಾಗೂ ಮೈಸುರು ಮಹಾರಾಜ ವಂಶಸ್ಥರು ಹೀರೆಕೆರೆಗೆ ಭೇಟಿ ನೀಡಿ ಕೆರೆ ಒತ್ತುವರಿ ಆಗದಂತೆ ನಿಗಾ ವಹಿಸಿದ್ದರು.
ಇತಿಹಾಸ ಪ್ರಸಿದ್ಧ ಹಿರೇಕೆರೆ ನಾಲ್ಕೂವರೆ ದಶಕದ ನಂತರ ಭರ್ತಿಯಾಗಿರುವುದು ದೊಡ್ಡ ವರವಾಗಿದೆ. ಜನತೆ ಜೀವ ಜಲದ ಮಹತ್ವ ಅರಿತು ನೀರನ್ನು ಮಿತವಾಗಿ ಬಳಕೆ ಮಾಡಬೇಕು. –ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಪೀಠಾಧ್ಯಕ್ಷ
–ಶಾಮಸುಂದರ್ ಕೆ.ಅಣ್ಣೇನಹಳ್ಳಿ