Advertisement

ವಿಶ್ವ  ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಹಿರೇಬಣಕಲ್‌

01:06 AM May 21, 2021 | Team Udayavani |

ಹೊಸದಿಲ್ಲಿ: ಯುನೆಸ್ಕೋ ವತಿಯಿಂದ ತಯಾರಾಗುತ್ತಿರುವ ವಿಶ್ವ ಪಾರಂ ಪರಿಕ ತಾಣಗಳ ತಾತ್ಕಾಲಿಕ ಪಟ್ಟಿ ಯಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್‌ ಸೇರಿದಂತೆ ಭಾರತದ ಆರು ಐತಿಹಾಸಿಕ ಸ್ಥಳಗಳು ಜಾಗ ಪಡೆದಿವೆ.

Advertisement

ಭಾರತೀಯ ಪ್ರಾಚ್ಯವಸ್ತುಗಳ ಇಲಾಖೆ (ಎಎಸ್‌ಐ) ಒಟ್ಟು 9 ಸ್ಥಾನಗಳ ವಿವರಗಳನ್ನು ಹಾಗೂ ಅವುಗಳ ಮಹತ್ವವನ್ನು ದಾಖಲಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಯುನೆಸ್ಕೋಗೆ ಮನವಿ ಮಾಡಿತ್ತು. ಅವು ಗಳಲ್ಲಿ 6 ಸ್ಥಳಗಳನ್ನು ಯುನೆಸ್ಕೋ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಒಟ್ಟು ಪಾರಂಪರಿಕ ಸ್ಥಳಗಳ ಸಂಖ್ಯೆ 48ಕ್ಕೇರಿದೆ.

ಹಿರೇಬಣಕಲ್ವಿಶೇಷ :

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಿಂದ ಪಶ್ಚಿಮಕ್ಕೆ ಸುಮಾರು 10 ಕಿ.ಮೀ. ದೂರ ದಲ್ಲಿ ಹಿರೇಬಣಕಲ್‌ ಇದೆ. ಇದೊಂದು ಗುಡ್ಡಗಾಡು ಪ್ರದೇಶ. ಮನುಷ್ಯನ ವಿಕಾಸ ಹಂತ ದಲ್ಲಿ ಪ್ರಮುಖ ಘಟ್ಟವಾದ ಶಿಲಾ ಯುಗದ ಅಂತಿಮ ಹಂತ ವಾದ ನವಶಿಲಾಯುಗದ ಕಾಲಘಟ್ಟದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಈ ಜಾಗ ವನ್ನು ಬಳಸಿರುವ ಕುರುಹುಗಳಿವೆ. ಇದಕ್ಕೆ ಪ್ರತೀಕವಾಗಿ ಅತೀ ದೊಡ್ಡ ಶ್ಮಶಾನವೊಂದು ಇದೆ. 1955ರಿಂದಲೇ ಭಾರತೀಯ ಪ್ರಾಚ್ಯವಸ್ತು ಇಲಾಖೆಯ (ಧಾರವಾಡ ವೃತ್ತ) ಸುಪರ್ದಿಯಲ್ಲಿರುವ ಈ ಪ್ರದೇಶ, ದಕ್ಷಿಣ ಭಾರತದಲ್ಲಿ ಪತ್ತೆಯಾದ 2000ಕ್ಕೂ ಹೆಚ್ಚು ನವಶಿಲಾಯುಗದ ಶ್ಮಶಾನಗಳಲ್ಲೇ ಅತೀ ದೊಡ್ಡದು ಎಂದು ಹೇಳಲಾಗಿದೆ.

ಹೊಸದಾಗಿ ಆಯ್ಕೆಯಾದ ಸ್ಥಳಗಳು :

  • ಹಿರೇಬಣಕಲ್‌ (ಕೊಪ್ಪಳ)
  • ಸಾತ್ಪುರ ಹುಲಿ ಮೀಸಲು ಪ್ರದೇಶ (ಮಧ್ಯಪ್ರದೇಶ)
  • ವಾರಾಣಸಿಯ ನದಿ ಬಯಲು (ಉತ್ತರ ಪ್ರದೇಶ)
  • ಮರಾಠಾ ಮಿಲಿಟರಿ ಪಾರಂಪರಿಕ ಕಟ್ಟಡ (ಮಹಾರಾಷ್ಟ್ರ )
  • ನರ್ಮದಾ ನದಿ ಕಣಿವೆಯ ಭೇಡಘಾಟ್‌- ಲಾಮ್ತಾಘಾಟ್‌ (ಮಧ್ಯಪ್ರದೇಶ)
  • ಕಾಂಚೀಪುರಂ ದೇಗುಲಗಳು (ತಮಿಳುನಾಡು)
Advertisement

ಬೆಟ್ಟದ ವೈಶಿಷ್ಟ್ಯ :

  • 7 ಗುಡ್ಡ ಪ್ರದೇಶದ ಗುಹೆಗಳಲ್ಲಿ ಆದಿ ಮಾನವರು ಚಿತ್ರಿಸಿದ ಗುಹಾಂತರ ಚಿತ್ರಗಳು
  • ಮೋರ್ಯರ ಬೆಟ್ಟದಲ್ಲಿ ಶಿಲಾಯುಗದ ಶಿಲಾಸಮಾಧಿ
  • ಪ್ರವಾಸೋದ್ಯಮಕ್ಕೆ ಅನುಕೂಲ, ಸ್ಥಳೀಯರಿಗೆ ಉದ್ಯೋಗಾವಕಾಶ
Advertisement

Udayavani is now on Telegram. Click here to join our channel and stay updated with the latest news.

Next