ಬೆಂಗಳೂರು: ಕೋವಿಡ್-19 ಸೋಂಕು ಕಾಲದಲ್ಲಿ ಆರಂಭವಾದ ಈ ಬಾರಿಯ ಐಪಿಎಲ್ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿದೆ. ಪ್ರತಿ ದಿನವೂ ಹೈವೋಲ್ಟೇಜ್ ಪಂದ್ಯಗಳು ನಡೆಯುತ್ತಿದೆ. ಇದರ ಮಧ್ಯೆ ಸ್ಟಾರ್ ಸ್ಪೋರ್ಟ್ ಕನ್ನಡ ವಾಹಿನಿ ಮಾಡಿರುವ ಟ್ವೀಟ್ ಈಗ ವೈರಲ್ ಆಗುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಮಾಡಿದ ಒಂದು ಟ್ವೀಟ್ ಈಗ ವೈರಲ್ ಆಗಿದೆ. ರಾಯಲ್ಸ್ ನಾಯಕ ಸ್ಮಿತ್ ಮತ್ತು ಆಲ್ ರೌಂಡರ್ ರಾಹುಲ್ ತಿವಾತಿಯಾ ನಡುವಿನ ಸಂಭಾಷಣೆಯ ಫೋಟೊವೊಂದನ್ನು ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ ಸ್ಟಾರ್ ಸ್ಪೋರ್ಟ್ಸ್ ಕನ್ನಡ “ ಜಂಟಲ್ ಮನ್.. ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ..!” ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಈಗ ವೈರಲ್ ಆಗಿದ್ದು, ಕನ್ನಡದ ಕ್ರೀಡಾಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಓರ್ವ ಅಭಿಮಾನಿ, “ಹಂಗೇ ಹೋದ್ರೆ ಕೈ ನೋವು ಬರುತ್ತೆ” ಎಂದು ತಮಾಷೆಯ ಉತ್ತರ ನೀಡಿದ್ದಾರೆ.
Related Articles
ಇದನ್ನೂ ಓದಿ:ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ನಿಕೋಲಸ್ ಪೂರನ್ ರ ಅದ್ಭುತ ಫೀಲ್ಡಿಂಗ್ ಗೆ ಬಗ್ಗೆ ಟ್ವೀಟ್ ಮಾಡಿದ್ದ ವಾಹಿನಿ, “ ಶೇ ಎಂಚಿನ ಫಿಲ್ಡಿಂಗ್ ಮಾರ್ರೆ” ( ಶೇ.. ಎಂಥಾ ಫೀಲ್ಡಿಂಗ್ ಮಾರಯರೇ) ಎಂದು ತುಳುವಿನಲ್ಲಿ ಟ್ವೀಟ್ ಮಾಡಿತ್ತು.