Advertisement

ಹಿಂದುತ್ವ ಲೈಟ್ ಆದರೆ ಕಾಂಗ್ರೆಸ್‌ ಜೀರೋ!

11:07 AM Sep 10, 2019 | Team Udayavani |

ಹೊಸದಿಲ್ಲಿ:ಬಿಜೆಪಿ ರೀತಿಯಲ್ಲೇ ಕಾಂಗ್ರೆಸ್‌ ಕೂಡ ಬಹುಸಂಖ್ಯಾಕರನ್ನು ಓಲೈಸುವ ತಂತ್ರವನ್ನು ಅನುಸರಿಸಿದರೆ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂಬರ್ಥದ ಮಾತನ್ನಾಡಿದ್ದಾರೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌.

Advertisement

ಪಿಟಿಐ ಸುದ್ದಿಸಂಸ್ಥೆಗೆ ರವಿವಾರ ಮಾತನಾಡಿದ ತರೂರ್‌, ಭಾರತದ ಜಾತ್ಯತೀತ ವಲಯ ವನ್ನು ಬೆಂಬಲಿಸುವ ಮೂಲಭೂತ ಹಕ್ಕು ಮತ್ತು ಕರ್ತವ್ಯವನ್ನು ಕಾಂಗ್ರೆಸ್‌ ಹೊಂದಿದೆ. ಹಿಂದಿ ಪ್ರಭಾವದ ಪ್ರದೇಶಗಳಲ್ಲಿ ಬಿಜೆಪಿಯಂತೆಯೇ ಬಹುಸಂಖ್ಯಾಕ ಹಿಂದೂಗಳನ್ನು ಕಾಂಗ್ರೆಸ್‌ ಓಲೈಸಬೇಕು ಎಂದು ಪಕ್ಷಕ್ಕೆ ಸಲಹೆ ನೀಡುವವರು ಮೂಲಭೂತ ತಪ್ಪನ್ನು ಮಾಡುತ್ತಿದ್ದಾರೆ. ಮೂಲ ಹಾಗೂ ನೀರಸ ಅನುಕರಣೆಯೆರಡನ್ನೂ ಮತದಾರರ ಮುಂದಿಟ್ಟರೆ, ಮತದಾರರು ಮೂಲವನ್ನೇ ಪ್ರತಿ ಬಾರಿಯೂ ಆಯ್ಕೆ ಮಾಡಿಕೊಳ್ಳುತ್ತಾರೆ.

ಕೋಕ್‌ ಲೈಟ್ ಮತ್ತು ಪೆಪ್ಸಿ ಜೀರೋ ರೀತಿ ಹಿಂದುತ್ವ ಲೈಟ್ ಬದಲಿಗೆ ತನ್ನ ಸಿದ್ಧಾಂತಕ್ಕೆ ಬದ್ಧವಾಗುವುದನ್ನು ಕಾಂಗ್ರೆಸ್ಸಿಗರು ಮೆಚ್ಚುತ್ತಾರೆ. ಹಿಂದುತ್ವ ಲೈಟ್ನಿಂದ ಕೊನೆಗೆ ಕಾಂಗ್ರೆಸ್‌ ಜೀರೋ ಆಗುತ್ತದೆಯಷ್ಟೇ ಎಂದು ಅವರು ಹೇಳಿದ್ದಾರೆ. ಜನಪ್ರಿಯ ತಂಪು ಪಾನೀಯ ಕಂಪೆನಿಗಳಾದ ಕೋಕ್‌ ಮತ್ತು ಪೆಪ್ಸಿ, ತಮ್ಮ ಮೂಲ ಉತ್ಪನ್ನಕ್ಕೆ ಪರ್ಯಾಯವಾಗಿ ಕಡಿಮೆ ಬೆಲೆಯ ಮತ್ತು ಕಡಿಮೆ ಪ್ರಮಾಣದ ಉತ್ಪನ್ನಕ್ಕೆ ಲೈಟ್ ಅಥವಾ ಜೀರೋ ಎಂದು ಹೆಸರಿಸಿ ಮಾರ್ಕೆಟ್ ಮಾಡುತ್ತಿವೆ. ಇದೇ ಅರ್ಥದಲ್ಲಿ, ಬಿಜೆಪಿಯ ಹಿಂದುತ್ವ ಸಿದ್ಧಾಂತದ ಸಣ್ಣ ಆವೃತ್ತಿಯ ರೂಪದಲ್ಲಿ ಹಿಂದುತ್ವ ಲೈಟ್ ಎಂಬ ಪದಗುಚ್ಛವನ್ನು ತರೂರ್‌ ಬಳಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next