Advertisement

ಹಿಂದುತ್ವ, ಹಿಂದು ಧರ್ಮ ಬೇರೆ ಬೇರೆ

12:41 PM Jun 18, 2018 | |

ಮೈಸೂರು: ದೇಶದ ದೊಡ್ಡ ಸಂಖ್ಯೆಯ ಪ್ರಜೆಗಳು ಕೋಮುವಾದದ ಹಿಂದೆ ಇದ್ದು, ಈ ಕಾರಣದಿಂದಾಗಿ ಎಲ್ಲರನ್ನೂ ಒಂದು ಮಾಡುವ ಅಗತ್ಯವಿದೆ ಎಂದು ಹಿರಿಯ ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಅಭಿಪ್ರಾಯಪಟ್ಟರು. 

Advertisement

ದೇಸಿರಂಗ ಸಾಂಸ್ಕೃತಿಕ ವೇದಿಕೆ ವತಿಯಿಂದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ ಪೊ›.ಕೆ.ರಾಮದಾಸ್‌ ನೆನಪಿನಲಿ ರಾಜ್ಯಮಟ್ಟದ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ದೇಶದಲ್ಲಿ ಕೋಮು ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು, ಹಿಂದೂ ಕೋಮುವಾದದ ಜತೆಗೆ ಮುಸ್ಲಿಂ ಕೋಮುವಾದವೂ ಸೇರಿಕೊಂಡಿದೆ. ಆದರೆ ಹಿಂದು ಧರ್ಮ ಹಾಗೂ ಹಿಂದುತ್ವ ಎರಡು ಬೇರೆಬೇರೆಯಾಗಿದ್ದು, ಇದನ್ನು ಪ್ರತ್ಯೇಕಿಸಿ ನೋಡಬೇಕಿದೆ ಎಂದರು. 

ಕೋಮುವಾದ ಅಥವಾ ಹಿಂದುತ್ವವಾದದಲ್ಲಿ ಉಗ್ರಹಿಂದುತ್ವ ವಾದ ಮತ್ತು ಮೃದು ಹಿಂದುತ್ವ ಎಂದು ನೋಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಇವುಗಳ ನಡುವಿನ ಅಂತರವೂ ಸಹ ಹೆಚ್ಚಾಗಿದೆ. ಉಗ್ರ ಹಿಂದುತ್ವ ವಾದ ಎಂಬುದು ಮೋದಿವಾದವಾಗಿದ್ದು, ಮೃದು ಹಿಂದುತ್ವವಾದ ಎಂಬುದು ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಸಮಾಜದೊಳಗಿನ ಗೊಂದಲದ ರೂಪದಲ್ಲಿ ಚದುರಿದಂತಿದೆ.

ಈ ಎಲ್ಲಾ ಕಾರಣದಿಂದಾಗಿ ನಾವು ಹಿಂದುತ್ವವನ್ನು ಏಕೆ ವಿರೋಸುತ್ತೇವೆ ಎಂದು ತಿಳಿಯದೆ ಗೊಂದಲದಲ್ಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಈ ವಿಷಯವನ್ನು ರಾಜಕೀಯ ಹಿನ್ನೆಲೆಯಲ್ಲಿ ನೋಡಿದಾಗ ಮೋದಿ ಮತ್ತು ಉಗ್ರ ಹಿಂದುತ್ವವನ್ನು ವಿರೋಧಿಸಬೇಕಿದ್ದು, ಮೃದು ಹಿಂದುತ್ವವನ್ನು ನಮ್ಮೊಟ್ಟಿಗೆ ಕರೆದೊಯ್ಯುವ, ಸಂವಾದ ಮಾಡುವ ಅಗತ್ಯವಿದೆ.

Advertisement

ಇದರಿಂದ ಸ್ಪಷ್ಟ ನೈತಿಕ ವಾದವನ್ನು ಪಡೆದುಕೊಂಡು, ಉಗ್ರ ಹಿಂದುತ್ವವನ್ನು ವಿರೋಧಿಸಬಹುದಾಗಿದೆ. ಪ್ರಸ್ತುತ ಮೋದಿವಾದ ಎನ್ನುವುದು ತೀರಾ ಅತಿರೇಕಕ್ಕೆ ಹೋಗಿದ್ದು, ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಜರ್ಮನಿಯಲ್ಲಿ ಹಿಟ್ಲರ್‌ ಅನೇಕರನ್ನು ಕೊಂದ ಸಂದರ್ಭಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಹಿಂದುತ್ವನ್ನು ವಿರೋಧಿಸುವವರನ್ನು ಧರ್ಮ, ಪರಂಪರೆ, ರಾಮನ ಹಾಗೂ ರಾಮರಾಜ್ಯದ ವಿರೋಧಿಗಳು ಎಂಬ ತಪ್ಪುಕಲ್ಪನೆ ಎಲ್ಲರ ಮನಸ್ಸಿನಲ್ಲಿದೆ. ಆದರೆ ವಿದೇಶಿ ಬಂಡವಾಳಗಾರರನ್ನು ದೇಶಕ್ಕೆ ಕರೆಸುವುದು ರಾಮರಾಜ್ಯವಲ್ಲ. ಇಲ್ಲಿನ ಕೈಗಾರಿಕೆಗಳಿಗೆ ಪೋ›ತ್ಸಾಹ ನೀಡುವುದು, ಬೆಳೆಸುವುದು ರಾಮರಾಜ್ಯ ಹಾಗೂ ಸ್ವರಾಜ್ಯದ ಪರಿಕಲ್ಪನೆಯಾಗಿದೆ ಎಂದರು. 

ಇದಕ್ಕೂ ಮುನ್ನ “ಮತೀಯವಾದದ ನೆರಳಿನಲ್ಲಿ ಪ್ರಜಾಪ್ರಭುತ್ವ’ ಎಂಬ ಪುಸ್ತಕವನ್ನು ವನ್ಯಜೀವಿ ತಜ್ಞ ಕೃಪಾಕರ-ಸೇನಾನಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ “ಕೋಮು ಸೌಹಾರ್ದತೆ ಇಂದು ಅತ್ಯಗತ್ಯ ಹೇಗೆ? ಮತ್ತು ಯಾಕೆ?’ ಎಂಬ ವಿಚಾರ ಕುರಿತು ಅತ್ಯುತ್ತಮ ಲೇಖನಗಳಿಗೆ ಮಹಿಳಾ ಚಿಂತಕಿ ವನಜಾ ಅವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಪೊ›.ಕಾಳೇಗೌಡ ನಾಗವಾರ, ದೇಸಿರಂಗ ಸಾಂಸ್ಕೃತಿಕ ವೇದಿಕೆಯ ಕೃಷ್ಣ ಜನಮನ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next